ಎಚ್ಚರ..! WhatsApp ವೆರಿಫೈ ಹೆಸರಿನಲ್ಲಿ ಆಗುತ್ತಿಗೆ Phone Hack

ಹ್ಯಾಕರ್‌ಗಳು ಈ ದಿನಗಳಲ್ಲಿ ಫೋನ್‌ಗಳನ್ನು ಹ್ಯಾಕ್ ಮಾಡಲು ಈ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ನವದೆಹಲಿ : ಇತ್ತೀಚಿನ ದಿನಗಳಲ್ಲಿ, ಹ್ಯಾಕರ್‌ಗಳು ವಿಶ್ವಾದ್ಯಂತ ವಾಟ್ಸಾಪ್ (WhatsApp) ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದಾರೆ. ವಾಟ್ಸಾಪ್ ಬಳಕೆದಾರರಿಗೆ ಈ ಹ್ಯಾಕರ್ ಗಳು (Hackers) ಕೆಲವು ಸಂದೇಶಗಳನ್ನು ಕಳುಹಿಸುತ್ತಾರೆ. ಈ ಸಂದೇಶಗಳು ನೋಡಲು ನೈಜವಾಗಿಯೇ ಕಾಣುತ್ತದೆ. ಆದರೆ ಈ ಮೆಸೇಜ್ ಗಳನ್ನು ಫೋನ್ ಹ್ಯಾಕ್ (Phone Hack) ಮಾಡುವ ಉದ್ದೇಶದಿಂದ ಕಳುಹಿಸಲಾಗಿರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವರದಿಯ ಪ್ರಕಾರ, ವಿಶ್ವಾದ್ಯಂತ ವಾಟ್ಸಾಪ್ ಬಳಕೆದಾರರಿಗೆ ವೆರಿಫಿಕೆಶನ್  ಕೋಡ್ ಕಳುಹಿಸಲಾಗುತ್ತಿದೆ. ಕೋಡ್‌ನೊಂದಿಗೆ ಲಿಂಕ್ ಅನ್ನು ಸಹ ಕಳುಹಿಸಲಾಗುತ್ತಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ, ಕೋಡ್ ನಮೂದಿಸುವಂತೆ ವಾಟ್ಸಾಪ್ ಬಳಕೆದಾರರಲ್ಲಿ ಕೇಳಲಾಗುತ್ತಿದೆ.  

2 /5

ಹ್ಯಾಕರ್‌ಗಳು ಈ ದಿನಗಳಲ್ಲಿ ಫೋನ್‌ಗಳನ್ನು ಹ್ಯಾಕ್ ಮಾಡಲು ಈ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕಳುಹಿಸಲಾಗಿರುವ ಲಿಂಕ್ ನ್ನು ಕ್ಲಿಕ್ ಮಾಡಿ ಕೋಡ್ ಎಂಟರ್ ಮಾಡಿದ ತಕ್ಷಣ ಫೋನ್ ಹ್ಯಾಕ್ ಆಗುತ್ತದೆ.  

3 /5

ಈ ಬಗ್ಗೆ ಟೆಕ್ ತಜ್ಞ ಅಲೆಕ್ಸಿಸ್ ಟ್ವೀಟ್ ಮಾಡಿದ್ದಾರೆ. ಮೊದಲಿಗೆ ನಮ್ಮ ಕಾಮನ್ ಫ್ರೆಂಡ್ ನ ಫೋನ್ ಅನ್ನು ಹ್ಯಾಕ್ ಮಾಡಲಾಗುತ್ತದೆ. ನಂತರ ಆ ಫೋನಿನ ಕಾಂಟಾಕ್ಟ್ ಲಿಸ್ಟ್ ನಿಂದ ಎಲ್ಲಾ  ಸ್ನೇಹಿತರ ನಂಬರ್ ಅನ್ನು ತೆಗೆಯಲಾಗುತ್ತದೆ. ಆ ಎಲ್ಲಾ  ಫೋನ್ ಅನ್ನು ವಾಟ್ಸಾಪ್ ಮೂಲಕ ಹ್ಯಾಕ್ ಮಾಡಲು ಪ್ರಯತ್ನಿಸಲಾಗುತ್ತದೆ.

4 /5

ನಿಮ್ಮ ವಾಟ್ಸಾಪ್‌ನಲ್ಲಿಯೂ ಹೀಗೆ ಸೆಕ್ಯೂರಿಟಿ ಕೋಡ್ ಬಂದರೆ ಅದನ್ನು ನಿರ್ಲಕ್ಷಿಸಿ ಬಿಡಿ.  ತಪ್ಪಿಯೂ ಈ ಲಿಂಕ್‌ ಓಪನ್ ಮಾಡಿ ಕೋಡ್ ಎಂಟರ್ ಮಾಡಬೇಡಿ.

5 /5

ಯಾವುದೋ ಕೋಡ್ ತಪ್ಪಾಗಿ ನಿಮ್ಮ ಫೋನ್‌ ಗೆ ಬಂದಿದೆ ಎಂದು ನಿಮ್ಮ ಸ್ನೇಹಿತರ ಮೊಬೈಲ್ ನಿಂದ ಮೆಸೇಜ್ ಬಂದರೂ ಅದನ್ನ ನಂಬಬೇಡಿ.    ಫೋನ್ ಹ್ಯಾಕ್ ಮಾಡಲು ಇಂತಹ ಗಿಮಿಕ್‌ಗಳನ್ನು ಸಹ ಅಳವಡಿಸಿಕೊಳ್ಳಲಾಗುತ್ತಿದೆ.