ಹುಡುಗಿಯರು Youtubeನಲ್ಲಿ ಇಂತಹ ವಿಡಿಯೋಗಳನ್ನೇ ಹೆಚ್ಚು ನೋಡ್ತಾರೆ; ಹುಡುಗರು ಊಹಿಸಲು ಸಾಧ್ಯವಿಲ್ಲ!

ಭಾರತದಲ್ಲಿನ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಈಗ ಆನ್‌ಲೈನ್‌ನಲ್ಲಿದ್ದಾರೆ ಮತ್ತು ದೈನಂದಿನ ಜೀವನ ಸುಧಾರಿಸಲು ಇಂಟರ್ನೆಟ್ ಬಳಸುತ್ತಾರೆ ಎಂದು ಇತ್ತೀಚಿನ ವರದಿಯು ಬಹಿರಂಗಪಡಿಸಿದೆ.

ಯುಟ್ಯೂಬ್‌ನಲ್ಲಿ ಹುಡುಗಿಯರು ಏನು ಹುಡುಕುತ್ತಾರೆ ಗೊತ್ತಾ?: ಯೂಟ್ಯೂಬ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕ್ರೇಜ್ ಹೊಂದಿದೆ. ಲಕ್ಷಾಂತರ ಯೂಟ್ಯೂಬ್ ಚಾನೆಲ್‌ಗಳನ್ನು ರಚಿಸಲಾಗಿದ್ದು, ಇದು ಜನರಿಗೆ ಹಲವಾರು ರೀತಿಯ ಮಾಹಿತಿಯನ್ನು ನೀಡುತ್ತದೆ. ಶಿಕ್ಷಣದಿಂದ ಮನರಂಜನೆಯವರೆಗಿನ ಎಲ್ಲಾ ವಿಡಿಯೋಗಳನ್ನು ನಾವು YouTubeನಿಂದ ನೋಡಬಹುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಹ ಯೂಟ್ಯೂಬ್ ಅನ್ನು ಹೆಚ್ಚು ಬಳಸುತ್ತಿದ್ದಾರೆ. ಭಾರತದಲ್ಲಿನ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಈಗ ಆನ್‌ಲೈನ್‌ನಲ್ಲಿದ್ದಾರೆ ಮತ್ತು ದೈನಂದಿನ ಜೀವನವನ್ನು ಸುಧಾರಿಸಲು ಇಂಟರ್ನೆಟ್ ಅನ್ನು ಬಳಸುತ್ತಾರೆ ಎಂದು ಇತ್ತೀಚಿನ ವರದಿಯು ಬಹಿರಂಗಪಡಿಸಿದೆ. ಈ ಪೈಕಿ ಶೇ.75ರಷ್ಟು ಮಹಿಳೆಯರು 15ರಿಂದ 34 ವರ್ಷದೊಳಗಿನವರು. ಆದರೆ ಹುಡುಗಿಯರು ಯುಟ್ಯೂಬ್‌ನಲ್ಲಿ ಏನು ಹುಡುಕುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹುಡುಗಿಯರು ಯುಟ್ಯೂಬ್‌ನಲ್ಲಿ ಶಾರ್ಟ್ ವಿಡಿಯೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಈಗ ಯೂಟ್ಯೂಬ್ ಕೂಡ ʼಶಾರ್ಟ್ಸ್ʼ ಆರಂಭಿಸಿದೆ. ಯುಟ್ಯೂಬ್ ಶಾರ್ಟ್ಸ್ ಹೊರತುಪಡಿಸಿ ಹುಡುಗಿಯರು ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರತ್ಯೇಕವಾಗಿ ಹುಡುಕುತ್ತಾರಂತೆ.

2 /5

ಹುಡುಗಿಯರು ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಅನ್ನು ಹುಡುಕುತ್ತಾರಂತೆ. ಇದಲ್ಲದೇ ಹುಡುಗಿಯರು ಯೂಟ್ಯೂಬ್‌ನಲ್ಲಿ Pre-Wedding ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ವೀಕ್ಷಿಸುತ್ತಾರಂತೆ. YouTubeನಲ್ಲಿ ಇಂತಹ ಹಲವಾರು ಚಾನಲ್‌ಗಳಿದ್ದು, ಅಲ್ಲಿ ಯುವತಿಯರು ಈ ವಿಡಿಯೋಗಳನ್ನು ಸುಲಭವಾಗಿ ವೀಕ್ಷಿಸುತ್ತಾರೆ.

3 /5

ಯುಟ್ಯೂಬ್ ಸರ್ಚ್ ವರದಿಯ ಪ್ರಕಾರ, ಸಂಗೀತವು ಟಾಪ್ ಟ್ರೆಂಡ್‌ನಲ್ಲಿದೆ. ಅದರಲ್ಲೂ ಹುಡುಗಿಯರು ಯೂಟ್ಯೂಬ್ ನಲ್ಲಿ ಮ್ಯೂಸಿಕ್ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ. ಹುಡುಗಿಯರ ಜೊತೆಗೆ ಹುಡುಗರು ಕೂಡ ಸಂಗೀತವನ್ನು ಹೆಚ್ಚು ಕೇಳುತ್ತಾರೆ ಮತ್ತು ವೀಕ್ಷಿಸುತ್ತಾರಂತೆ.

4 /5

ಹುಡುಗಿಯರು ಕರಕುಶಲತೆಯನ್ನು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಹುಡುಗಿಯರು ಯುಟ್ಯೂಬ್‌ನಲ್ಲಿ ಕ್ರಾಫ್ಟ್ ಐಡಿಯಾಸ್‌ಗಾಗಿ ಹುಡುಕುವುದು ಕಂಡುಬಂದಿದೆ. ಅವರಿಗೆ ಇಷ್ಟವಾಗುವ ಐಡಿಯಾಗಳನ್ನು ಮನೆಯಲ್ಲಿಯೂ ಪ್ರಯೋಗಿಸುವ ಮೂಲಕ ಹೊಸ ಹವ್ಯಾಸವನ್ನು ಯುವತಿಯರು ಕಲಿಯುತ್ತಾರಂತೆ.

5 /5

ಹುಡುಗಿಯರು ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಯುಟ್ಯೂಬ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹುಡುಗಿಯರು ಹೆಚ್ಚಿನ ಫ್ಯಾಷನ್, ಟ್ರೆಂಡ್ಸ್, Beauty Treatments ಮತ್ತು ಮನೆಮದ್ದುಗಳ ಬಗ್ಗೆ ಹುಡುಕಲು ಇಷ್ಟಪಡುತ್ತಾರೆ. ಹುಡುಗಿಯರು ಯುಟ್ಯೂಬ್‌ನಲ್ಲಿ ಫ್ಯಾಷನ್ ಮತ್ತು ಮೇಕಪ್ ಟ್ರೆಂಡ್‌ಗಳನ್ನು ಹುಡುಕುತ್ತಾರೆ. ದೇಶ ಮತ್ತು ಜಗತ್ತಿನ ಫ್ಯಾಷನ್ ಬಗ್ಗೆ ಯಾವ ಹೊಸ ಟ್ರೆಂಡ್‌ಗಳ ವಿಡಿಯೋಗಳನ್ನು ಸಾಮಾನ್ಯವಾಗಿ ಹುಡುಗಿಯರು ಇಷ್ಟಪಡುತ್ತಾರೆ.