ತಿಂಗಳಿಗೆ 25 ಲಕ್ಷ ಗಳಿಕೆ.. ಬಡವರಿಗೆ ಕಂತೆ ಕಂತೆ ಹಣ ದಾನ.. ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟು ಗೊತ್ತೆ..?

Harsha Sai net worth : ಯೂಟ್ಯೂಬ್‌ ಸೇರಿ ಸೋಷಿಯಲ್‌ ಮೀಡಿಯಾದಲ್ಲಿ ನೀವು ಹರ್ಷ ಸಾಯಿ ಬಡವರಿಗೆ ಸಹಾಯ ಮಾಡುವ ವಿಡಿಯೋಗಳನ್ನು ನೋಡಿರುತ್ತೀರಾ.. ಹಾಗಿದ್ರೆ ಹರ್ಷ ಸಾಯಿ ಅವರ ಒಟ್ಟು ಆಸ್ತಿ ಎಷ್ಟು..? ಎಲ್ಲಿಂದ ಇಷ್ಟೋಂದು ಹಣ ಬರುತ್ತೆ ಇವರಿಗೆ..? ಬನ್ನಿ ನೋಡೋಣ.. 

1 /5

ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವ ಮೂಲಕ ಹಲವರು ಫೇಮಸ್ ಆಗುತ್ತಿದ್ದಾರೆ. ಈ ಪೈಕಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಾಕಿ ಸೆಲೆಬ್ರಿಟಿ ಎನಿಸಿಕೊಂಡಿರುವ ಹರ್ಷ ಸಾಯಿ ಬಗ್ಗೆ ಈ ಪೋಸ್ಟ್ ತಿಳಿಯೋಣ..  

2 /5

ಹೈದರಾಬಾದ್‌ನ 26 ವರ್ಷದ ಹರ್ಷ ಸಾಯಿ ಲಕ್ಷಾಂತರ ಜನರಿಗೆ ಸ್ಫೂರ್ತಿ. ಕಾಲೇಜಿನಿಂದ ಪದವಿ ಪಡೆದ ನಂತರ, ಹರ್ಷ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ಅಲ್ಲಿ ಅವರು ಫಿಟ್ನೆಸ್ ಸಂಬಂಧಿತ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ಮೂಲಕ ಸಾಕಷ್ಟು ಫಾಲೋವರ್ಸ್‌ಗಳನ್ನು ಗಳಿಸಿದರು.  

3 /5

ಬಳಿಕ ಕೇವಲ 5 ರೂಪಾಯಿ ನಾಣ್ಯ ಕೊಟ್ಟು 4 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸಿ ವಿಡಿಯೋ ಪೋಸ್ಟ್ ಮಾಡಿದರು. ಈ ವೀಡಿಯೊ ಉತ್ತಮ ರೀಚ್ ಆಗುತ್ತಿದ್ದಂತೆ, ಹರ್ಷ ಸಾಯಿ ತಮ್ಮ ಚಾನೆಲ್‌ನಲ್ಲಿ ದೆವ್ವದ ಮನೆಯಲ್ಲಿ ಉಳಿದುಕೊಳ್ಳುವುದು ಸೇರಿದಂತೆ ಹಲವು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಮೂಲಕ ಸಾಕಷ್ಟು ಫಾಲೋವರ್ಸ್‌ ಗಳಿಸಿದರು.   

4 /5

ಜನಪ್ರಿಯ YouTube ಸೆಲೆಬ್ರಿಟಿಯಾದ ನಂತರ, ಅವರು ತಮ್ಮ YouTube ಗಳಿಕೆಯೊಂದಿಗೆ ಜನರಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಬಡ ಹುಡುಗನಿಗೆ ಸೈಕಲ್ ಖರೀದಿಸಿ ಕೊಡುವುದು, ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡುವುದು, 1000 ಜನರಿಗೆ ಒಂದು ಟ್ಯಾಂಕ್ ತುಂಬಿಸಿ ಉಚಿತ ಪೆಟ್ರೋಲ್ ತುಂಬಿಸುವುದು ಹೀಗೆ ಹಲವು ಕೆಲಸಗಳನ್ನು ಮಾಡಿದರು.   

5 /5

ಜನಪ್ರಿಯರಾಗಿರುವ ಹರ್ಷ ಸಾಯಿ ಅವರು 3 ಯೂಟ್ಯೂಬ್ ಚಾನೆಲ್ ಗಳನ್ನು ನಡೆಸುತ್ತಿದ್ದಾರೆ. ಈ 3 ಚಾನಲ್‌ಗಳು ಸುಮಾರು 30 ಮಿಲಿಯನ್ ಚಂದಾದಾರರನ್ನು ಹೊಂದಿವೆ. ಈ ವೇಳೆ ಹರ್ಷ ಸಾಯಿ ಅವರ ಆಸ್ತಿ ಮೌಲ್ಯದ ಮಾಹಿತಿ ಬಹಿರಂಗವಾಗಿದೆ. ವರದಿಗಳ ಪ್ರಕಾರ ಅವರ ಆಸ್ತಿ ಮೌಲ್ಯ 20 ರಿಂದ 22 ಕೋಟಿ ಎನ್ನಲಾಗಿದೆ.. ಅಲ್ಲದೆ, ತಿಂಗಳಿಗೆ 25 ಲಕ್ಷದಿಂದ 30 ಲಕ್ಷ ರೂಪಾಯಿ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ..