Ugadi 2024: 3 ರಾಜಯೋಗಗಳಲ್ಲಿ ಹಿಂದೂ ಹೊಸ ವರ್ಷಾರಂಭ, ಮುಂದಿನ 1 ವರ್ಷ ಈ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿ ಯೋಗ!

Hindu New Year 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಹೊಸವರ್ಷ ಯುಗಾದಿಯ ದಿನ ಮೂರು ರಾಜಯೋಗಗಳು ರಚನೆಯಾಗಲಿವೆ. ಇದರಿಂದ ಕೆಲ ರಾಶಿಗಳಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದ್ದು ಅವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಒಳ್ಳೆಯ ದಿನಗಳ ಆರಂಭವಾಗಲಿದೆ. 
 

Hindu New Year 2024: ವೈದಿಕ ಪಂಚಾಂಗದ ಪ್ರಕಾರ ಚೈತ್ರ ನವರಾತ್ರಿ ಉತ್ಸವ ಏಪ್ರಿಲ್ 9, 2024 ರಿಂದ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಹಿಂದೂ ಹೊಸ ವರ್ಷ 2081 ಕೂಡ ಆರಂಭವಾಗುತ್ತಿದೆ. ಈ ಬಾರಿಯ ಯುಗಾದಿಯ ಸಂದರ್ಭದಲ್ಲಿ ಮೂರು ರಾಜಯೋಗಗಳು ರಚನೆಯಾಗುತ್ತಿವೆ. ಇವುಗಳಲ್ಲಿ ಶಶ, ಅಮೃತ ಸಿದ್ಧಿ ಹಾಗೂ ಸರ್ವಾರ್ಥ ಸಿದ್ಧಿ ರಾಜಯೋಗಗಳು ಶಾಮೀಲಾಗಿವೆ. ಇದರ ಜೊತೆಗೆ ಗಜಕೇಸರಿ ಯೋಗದ ಅದ್ಭುತ ಸಂಯೋಜನೆ ಕೂಡ ಇದೆ.  ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷದ ರಾಜ ಮಂಗಳನಾಗಿದ್ದು, ಶನಿ ದೇವ ಮಂತ್ರಿಯಾಗಿರಲಿದ್ದಾನೆ. ಹೀಗಿರುವಾಗ ಇಡೀ ವರ್ಷ ಶನಿ ಹಾಗೂ ಮಂಗಳನ ಪ್ರಭಾವ ಕಂಡುಬರಲಿದೆ. ಇದರಿಂದ ಕೆಲ ರಾಶಿಗಳ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. ಈ ಜನರ ಧನ ಸಂಪತ್ತಿನಲ್ಲಿ ಅಪಾರ ಹೆಚ್ಚಳವನ್ನು ಕಾಣಬಹುದು. ಬನ್ನಿ ಆ ಅದೃಷ್ಟವಂತ ಜನರು ಯಾರು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

Hindu New Year 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಹೊಸವರ್ಷ ಯುಗಾದಿಯ ದಿನ ಮೂರು ರಾಜಯೋಗಗಳು ರಚನೆಯಾಗಲಿವೆ. ಇದರಿಂದ ಕೆಲ ರಾಶಿಗಳಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದ್ದು ಅವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಒಳ್ಳೆಯ ದಿನಗಳ ಆರಂಭವಾಗಲಿದೆ.   

2 /8

ವೃಷಭ ರಾಶಿ: ಹಿಂದೂ ಹೊಸವರ್ಷ ಯುಗಾದಿ 2024 ನಿಮ್ಮ ಪಾಲಿಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಈ ವರ್ಷ ಕಾರ್ಯಕ್ಷೇತ್ರದಲ್ಲಿ ಅಪಾರ ಯಶಸ್ಸು ನಿಮ್ಮದಾಗಲಿದೆ ಮತ್ತು ಈ ಅವಧಿಯಲ್ಲಿ ನೀವು ಹೊಸ ಬಿಸ್ನೆಸ್ ಕೂಡ ಆರಂಭಿಸಬಹುದು. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುವ ಸಂಕೇತಗಳಿವೆ. ಇದರ ಜೊತೆಗೆ ನೀವು ಯಾವುದಾದರೊಂದು ಹೊಸ ಕೆಲಸ ಕೂಡ ಆರಂಭಿಸಬಹುದು. ವಿದ್ಯಾರ್ಥಿಗಳ ಪಾಲಿಗೆ ಸಮಯ ಅನಕೂಲಕರವಾಗಿದೆ. ಯಾವುದಾದರೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ನೀವು ಪಡೆಯಬಹುದು. ಆಸ್ತಿ ಪಾಸ್ತಿ, ವಾಹನ ಖರೀದಿ ಯೋಗ ಕೂಡ ಇದೆ. ವರ್ಷವಿಡೀ ನೀವು ಯಾವುದಾದರೊಂದು ತೀರ್ಥ ಯಾತ್ರೆ ಮಾಡಬಹುದು ಅಥವಾ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಬಹುದು.   

3 /8

ಧನು  ರಾಶಿ: ಹಿಂದೂ ಹೊಸ ವರ್ಷ ಆರ್ಥಿಕವಾಗಿ ನಿಮ್ಮ ಪಾಲಿಗೆ ಲಾಭದಾಯಕವಾಗಿರಲಿದೆ. ಈ ವರ್ಷ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಪಾಟ್ನರ್ಶಿಪ್ ನಲ್ಲಿ ಬಿಸ್ನೆಸ್ ಮಾಡುತ್ತಿದ್ದರೆ, ನಿಮ್ಮ ಇಚ್ಚೆಗೆ ತಕ್ಕಂತೆ ಲಾಭ ಸಿಗಲಿದೆ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಈ ವರ್ಷ ನೀವು ವಾಹನ, ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ವರ್ಷ ನೀವು ಅಪಾರ ಹಣ ಕೂಡಿಹಾಕುವಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಬಹುದು. ಸಾಹಸ ಪರಾಕ್ರಮ ಹೆಚ್ಚಾಗಲಿದೆ.  

4 /8

ಮಿಥುನ ರಾಶಿ: ಹಿಂದೂ ಹೊಸವರ್ಷ ಯುಗಾದಿ ನಿಮ್ಮ ಪಾಲಿಗೆ ಹಲವು ಸಂತಸಗಳನ್ನು ಹೊತ್ತು ತರಲಿದೆ. ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕುಟುಂಬದಲ್ಲಿ ಸುಖ ಶಾಂತಿ ಇರಲಿದೆ. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಮುದುವರೆಯಲಿದೆ. ನಿಮ್ಮ ಹಲವು ಯೋಜನೆಗಳು ಪೂರ್ಣಗೊಳ್ಳಲಿವೆ. ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ವರ್ಷದ ರಾಜ ಮಂಗಳನ ಕೃಪೆಯಿಂದ ನಿಮಗೆ ಹಳೆ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಹೂಡಿಕೆಗಾಗಿ ಸಮಯ ಸಾಕಷ್ಟು ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಈ ವರ್ಷ ಸಾಕಷ್ಟು ಧನಲಾಭ ಕಾದಿದೆ. ವ್ಯಾಪಾರ ವಿಸ್ತರಣೆಯ ಅವಕಾಶ ಕೂಡ ಒದಗಿಬರಲಿದೆ.   

5 /8

ಮೇಷ ರಾಶಿ:ಮೇಷ ರಾಶಿಯ ಜಾತಕದವರ ಪಾಲಿಗೆ ಯುಗಾದಿ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಇದೃಂದ ನಿಮ್ಮ ಭಾಗ್ಯ ಹೊಳೆಯಲಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇದೆ. ಇದರ ಜೊತೆಗೆ ಮಂತ್ರಿ ಪದ ಕೂಡ ಸಿಗುವ ಸಾಧ್ಯತೆ ಇದ್ದು, ಭಾರಿ ಧನಲಾಭ ಉಂಟಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ಕೆಲಸ ಕಾರ್ಯಗಳಲ್ಲಿ ಉನ್ನತಿಯ ಯೋಗ ಇದೆ. ಈ ವರ್ಷ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ಈ ಅವಧಿಯಲ್ಲಿ ನೀವು ನಿಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ. ನೌಕರ ವರ್ಗದ ಜಾತಕದವರಿಗೆ ಮನಸೋಇಚ್ಛೆ ನೌಕರಿ ಸಿಗಲಿದೆ. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ.   

6 /8

ಕರ್ಕ ರಾಶಿ: ಹಿಂದೂ ಹೊಸ ವರ್ಷ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ವಾಹನ ಆಸ್ತಿಪಾಸ್ತಿ ಪ್ರಾಪ್ತಿಯಾಗುವ ಸಂಕೇತಗಳಿವೆ. ನೌಕರ ವರ್ಗದ ಜನರಿಗೆ ಇಂಕ್ರಿಮೆಂಟ್ ಮತ್ತು ಪ್ರಮೋಷನ್ ಸಿಗುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಧನಲಾಭ ಸಿಗಲಿದೆ. ಹೊಸ ವರ್ಷ ಆರಂಭಕ್ಕೆ ಇದು ಸಕಾಲವಾಗಿದೆ. ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಿರಿ, ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರ ಸಿಗಲಿದೆ. ವಿದ್ಯಾರ್ಥಿಗಳಗಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

7 /8

ಮಕರ ರಾಶಿ: ಹಿಂದೂ ಹೊಸ ವರ್ಷ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಈ ವರ್ಷ ನಿಮಗೆ ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ಆಸ್ತಿಪಾಸ್ತಿಯನ್ನು ಕೂಡ ಖರೀದಿಸುವಿರಿ. ಸ್ಥಾನಮಾನ ಘನತೆ ಪ್ರತಿಷ್ಟೆಗಳು ಹೆಚ್ಚಾಗಲಿವೆ. ವ್ಯಾಪಾರ ವರ್ಗದ ಜನರು ಮೇ 1 ರಿಂದ ವ್ಯಾಪಾರ ಆರಂಭಿಸಬಹುದು. ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಸುಧಾರಿಸಲಿದೆ.   

8 /8

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)