Zee Kannada News Yuvaratna Awards : ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಒಟ್ಟು 35 ಜನ ಯುವ ಸಾಧಕರನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರದಾನ ಮಾಡಲಾಯಿತು.
ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.
ಈ ಪೈಕಿ ಬಸವರಾಜಪ್ಪ ಮಲ್ಲಪ್ಪ ಜರಾಲಿ, ಹಿರಿಯ ವಕೀಲರು ಹಾಗೂ ಬಾರ್ ಅಸೋಷಿಯೇಷನ್ ಅಧ್ಯಕ್ಷರು ಇವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ಇವರಿಗೆ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಬಸವರಾಜ ಮಲ್ಲಪ್ಪ ಜರಾಲಿ ಅವರು ಹಿರಿಯ ವಕೀಲರು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಲಗುರ್ಕಿಯಲ್ಲಿ ಜನಿಸಿದ ಇವರು, ಕಲಗುರ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ್ರು. ಮುಳವಾಡದ ಮಲ್ಲಿಕಾರ್ಜುನ ಶಾಲೆಯಲ್ಲಿ ಪ್ರೌಡ ಶಿಕ್ಷಣ ಮುಗಿಸಿದ್ರು.
ಬಿಎಲ್‌ಡಿಯ ನ್ಯೂ ಆರ್ಟ್ಸ್ ಕಾಲೇಜ್ ನಲ್ಲಿ ಪದವಿ ಪಡೆದು, ಅಂಜುಮನ್ ಲಾ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ್ರು. 2001ರಲ್ಲಿ ವಿಜಯಪುರದಲ್ಲಿ ವಕೀಲ ವೃತ್ತಿ ಆರಂಭಿಸಿ ಹೆಸರು ಗಳಿಸಿದ್ರು.
2018 -19 ರಲ್ಲಿ ರೊಟರಿ ಕ್ಲಬ್ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ರು. ಪ್ರಸ್ತುತ ಬಸವರಾಜ್ ವಿಜಯಪುರ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿಸುತ್ತ ಶ್ರೀಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಬಸವರಾಜ್ ಮಲ್ಲಪ್ಪ ಜರಾಳಿಯವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್ ಹೆಮ್ಮೆ ಪಡುತ್ತದೆ.