Black Mustard Astro Tips: ಸಾಸಿವೆಯನ್ನು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಅಡುಗೆಗಾಗಿ ಬಳಸಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಸಿವೆಗೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು ಹೇಳಲಾಗಿದೆ, ಇದರಿಂದ ಅನೇಕ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಸಾಮಾನ್ಯವಾಗಿ ಜನರು ಕೆಟ್ಟ ದೃಷ್ಟಿಯನ್ನು ತೆಗೆದುಹಾಕಲು ಅಥವಾ ಯಾವುದೇ ಸಮಸ್ಯೆಯನ್ನು ತೊಡೆದು ಹಾಕಲು ಹಳದಿ ಸಾಸಿವೆ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಹಳದಿ ಸಾಸಿವೆಯಂತೆಯೇ, ಕಪ್ಪು ಸಾಸಿವೆಯ ಪರಿಹಾರಗಳು ಜ್ಯೋತಿಷ್ಯದಲ್ಲಿ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.ಕಪ್ಪು ಸಾಸಿವೆ ಅಥವಾ ಸಾಸಿವೆಗೆ ಸಂಬಂಧಿಸಿದ ಪರಿಹಾರಗಳ ಬಗ್ಗೆ ತಿಳಿಯೋಣ ಬನ್ನಿ,
ಕೆಟ್ಟ ದೃಷ್ಟಿ ನಿವಾರಣೆ: ಕೆಟ್ಟ ದೃಷ್ಟಿಯನ್ನು ತೊಡೆದುಹಾಕಲು, ಕಪ್ಪು ಸಾಸಿವೆಗೆ ಸಂಬಂಧಿಸಿದ ಪರಿಹಾರವನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕಾಗಿ, ಸ್ವಲ್ಪ ಕಪ್ಪು ಸಾಸಿವೆ ಕಾಳುಗಳು, 7 ಸಂಪೂರ್ಣ ಕೆಂಪು ಮೆಣಸಿನಕಾಯಿಗಳು ಮತ್ತು ಉಪ್ಪನ್ನು ಎಡಗೈಯ ಮುಷ್ಟಿಯಲ್ಲಿ ಇರಿಸಿ ಮತ್ತು ವ್ಯಕ್ತಿಯನ್ನು ತಲೆಯಿಂದ ಪಾದದವರೆಗೆ 7 ಬಾರಿ ನಿವಾಳಿಸಿ. ನಂತರ, ಉರಿಯುತ್ತಿರುವ ಬೆಂಕಿಯಲ್ಲಿ ಎಲ್ಲಾ ವಸ್ತುಗಳನ್ನು ಸುಟ್ಟುಹಾಕಿ. ಇದು ಕೆಟ್ಟ ದೃಷ್ಟಿಯ ಪರಿಣಾಮವನ್ನು ತಕ್ಷಣವೇ ಕೊನೆಗೊಳಿಸುತ್ತದೆ.
ಕೆಲಸ ಕಾರ್ಯಗಳಲ್ಲಿ ಎದುರಾಗುವ ಅಡೆತಡೆಗಳನ್ನು ಹೋಗಲಾಡಿಸಲು: ಯಾವುದೇ ಕೆಲಸದಲ್ಲಿ ಪದೇ ಪದೇ ಅಡೆತಡೆಗಳು ಮತ್ತು ಕೈಗೂಡಿ ಬಂದ ಕೆಲಸ ಬಿಗಡಾಯಿಸುತ್ತಿದ್ದಾರೆ, ಗುರುವಾರದಂದು ಬಡವರು ಮತ್ತು ನಿರ್ಗತಿಕರಿಗೆ ಕರಿ ಸಾಸಿವೆಯನ್ನು ದಾನ ಮಾಡಿ. ಇದರಿಂದ ಕೆಲಸದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.
ಮಲಗಿರುವ ಅದೃಷ್ಟ ಬಡಿದೆಬ್ಬಿಸಲು: ಅದೃಷ್ಟವು ನಿಮ್ಮೊಂದಿಗೆ ಇಲ್ಲದಿದ್ದಾಗ, ನೀವು ಎಷ್ಟೇ ಕಷ್ಟಪಟ್ಟರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ ಅಥವಾ ಕಠಿಣ ಪರಿಶ್ರಮ ಕೂಡ ಪೂರ್ಣ ಫಲಿತಾಂಶ ನೀಡುವುದಿಲ್ಲ. ನಿಮ್ಮ ವಿಷಯದಲ್ಲಿಯೂ ಕೂಡ ಇದೇ ರೀತಿ ಆಗುತ್ತಿದ್ದರೆ, ಒಂದು ಹೂಜಿಗೆ ನೀರು ತುಂಬಿ ಅದರಲ್ಲಿ ಕಪ್ಪು ಸಾಸಿವೆ ಹಾಕಿ ನಂತರ ಈ ನೀರಿನಿಂದ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಮಲಗಿರುವ ಭಾಗ್ಯವೂ ಎಚ್ಚೆತ್ತು ದುರದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ.
ಇದನ್ನೂ ಓದಿ-Astro Remedies 2023: ಹೊಸ ವರ್ಷದಲ್ಲಿ ಅದೃಷ್ಟದ ಬೆಂಬಲ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ
ಶನಿವಾರದಂದು ಕಪ್ಪು ಸಾಸಿವೆ ಪರಿಹಾರವನ್ನು ಮಾಡಿ: ಶನಿವಾರದಂದು ಶನಿ ದೇವರಿಗೆ ಕಪ್ಪು ಸಾಸಿವೆ ಮತ್ತು ಎಣ್ಣೆಯನ್ನು ಅರ್ಪಿಸಿ. ಇದರಿಂದ ಶನಿದೇವನ ಆಶೀರ್ವಾದ ಲಭಿಸಿ ಜೀವನದಲ್ಲಿ ನೆಮ್ಮದಿ ಮೂಡುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.