close

News WrapGet Handpicked Stories from our editors directly to your mailbox

India vs South Africa: ಮಳೆಯಿಂದಾಗಿ ಮೊದಲ ಟಿ-20 ಪಂದ್ಯ ರದ್ದು

ಭಾನುವಾರ ಧರ್ಮಶಾಲಾದಲ್ಲಿ ಸತತ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯ ರದ್ದಾಗಿದೆ. 

Updated: Sep 15, 2019 , 09:06 PM IST
India vs South Africa: ಮಳೆಯಿಂದಾಗಿ ಮೊದಲ ಟಿ-20 ಪಂದ್ಯ ರದ್ದು
Photo courtesy: ICC

ನವದೆಹಲಿ: ಭಾನುವಾರ ಧರ್ಮಶಾಲಾದಲ್ಲಿ ಸತತ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯ ರದ್ದಾಗಿದೆ. 

ಮಳೆಯಿಂದಾಗಿ ಅಧಿಕಾರಿಗಳು ಅಧಿಕೃತ ಕಟ್ ಆಫ್ ಸಮಯವನ್ನು 9.46ಕ್ಕೆ ನಿಗಧಿ ಪಡಿಸಿದ್ದರು, ಆದಾಗ್ಯೂ ಮಳೆ ಮುಂದುವರೆದಿದ್ದರಿಂದಾಗಿ ಅನಿವಾರ್ಯವಾಗಿ ಪಂದ್ಯವನ್ನು ರದ್ದು ಮಾಡಲಾಯಿತು.

ನಿರಂತರ ಮಳೆ ಸುರಿದಿದ್ದರಿಂದಾಗಿ ಟ್ವೀಟ್ ಮಾಡಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಶಾನ್ ಪೊಲ್ಲಾಕ್ ' ಇವತ್ತು ರಾತ್ರಿ ಯಾವುದೇ ರೀತಿ ಪಂದ್ಯ ನಡೆಯುವ ಹಾಗೆ ಕಾಣುತ್ತಿಲ್ಲ ' ಎಂದು ಟ್ವೀಟ್ ಮಾಡಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆದ್ದು ಹುಮ್ಮಸ್ಸಿನಲ್ಲಿ ಬಿಗುತ್ತಿರುವ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಹುರುಪನ್ನು ಹೊಂದಿದೆ.ಮೂರು ಪಂದ್ಯಗಳ ಈ ಟ್ವೆಂಟಿ ಸರಣಿಯಲ್ಲಿ ಈಗ ಧರ್ಮಶಾಲಾ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಎರಡನೇ ಪಂದ್ಯ ಸೆಪ್ಟಂಬರ್ 18 ರಂದು ಮೊಹಾಲಿಯಲ್ಲಿ ನಡೆಯಲಿದೆ.