Video: ಫುಟ್ಬಾಲ್ ಆಡುತ್ತಿದ್ದಂತೆ ಆಟಗಾರನಿಗೆ ಬಡಿದ ಸಿಡಿಲು…! ನೋಡನೋಡುತ್ತಿದ್ದಂತೆ ಪ್ರಾಣಬಿಟ್ಟ ಯುವಕ

Football player was struck by lightning: ಫೆಬ್ರವರಿ 11ರ ಭಾನುವಾರ ಇಂಡೋನೇಷ್ಯಾದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ನಡೆದ ಈ ಘಟನೆ ವರದಿಯಾಗಿದೆ. ಈ ಪಂದ್ಯದ ವೇಳೆ ಎಫ್‌ ಎಲ್‌ ಒ ಎಫ್‌ ಸಿ ಬ್ಯಾಂಡಂಗ್ ಫುಟ್‌ಬಾಲ್ ಕ್ಲಬ್‌’ನ ಆಟಗಾರ ಸಾವನ್ನಪ್ಪಿದ್ದಾರೆ.

Written by - Bhavishya Shetty | Last Updated : Feb 12, 2024, 06:30 PM IST
    • ಫುಟ್ಬಾಲ್ ಆಟಗಾರನೊಬ್ಬ ಮೈದಾನದಲ್ಲಿ ಆಡುತ್ತಿದ್ದಂತೆ ಸಿಡಿಲು ಬಡಿತ
    • ಇಂಡೋನೇಷ್ಯಾದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ನಡೆದ ಈ ಘಟನೆ
    • ಇದರ ವಿಡಿಯೋ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವೈರಲ್
Video: ಫುಟ್ಬಾಲ್ ಆಡುತ್ತಿದ್ದಂತೆ ಆಟಗಾರನಿಗೆ ಬಡಿದ ಸಿಡಿಲು…! ನೋಡನೋಡುತ್ತಿದ್ದಂತೆ ಪ್ರಾಣಬಿಟ್ಟ ಯುವಕ title=
Football player was struck by lightning

Football player was struck by lightning: ಇತ್ತೀಚೆಗೆ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಫುಟ್ಬಾಲ್ ಆಟಗಾರನೊಬ್ಬ ಮೈದಾನದಲ್ಲಿ ಆಡುತ್ತಿದ್ದಂತೆ ಸಿಡಿಲು ಬಡಿದು ಸಾವನ್ನಪ್ಪಿರುವ ದೃಶ್ಯ ಕಂಡುಬಂದಿದೆ.

ಫೆಬ್ರವರಿ 11ರ ಭಾನುವಾರ ಇಂಡೋನೇಷ್ಯಾದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ನಡೆದ ಈ ಘಟನೆ ವರದಿಯಾಗಿದೆ. ಈ ಪಂದ್ಯದ ವೇಳೆ ಎಫ್‌ ಎಲ್‌ ಒ ಎಫ್‌ ಸಿ ಬ್ಯಾಂಡಂಗ್ ಫುಟ್‌ಬಾಲ್ ಕ್ಲಬ್‌’ನ ಆಟಗಾರ ಸಾವನ್ನಪ್ಪಿದ್ದಾರೆ. ಈ ಆಟಗಾರನಿಗೆ ಸಿಡಿಲು ಬಡಿದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ: “ಐಶ್ವರ್ಯಾ ಜೊತೆ ಪ್ರತಿದಿನ ‘ಅದನ್ನು’ ಮಾಡಿಲ್ಲ ಅಂದ್ರೆ ಬೋರಾಗುತ್ತೆ”- ಪಬ್ಲಿಕ್’ನಲ್ಲೇ ಇಂಥಾ ಹೇಳಿಕೆ ಕೊಟ್ಟ ಅಭಿಷೇಕ್ ಬಚ್ಚನ್

ಪಂದ್ಯದ ವೇಳೆ ಆಟಗಾರ ಮೈದಾನದಲ್ಲಿ ನಡೆದಾಡುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಮಿಂಚು ಬಡಿದು ಆಟಗಾರ ಮೈದಾನದಲ್ಲಿ ಬೀಳುತ್ತಾನೆ. ಇದನ್ನು ನೋಡಿದ ಸಹ ಆಟಗಾರರು ಅವನ ಕಡೆಗೆ ಓಡುತ್ತಾರೆ. ಮಾಹಿತಿಯ ಪ್ರಕಾರ, ಆಟಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಅಲ್ಲಿನ ವೈದ್ಯರು ಆಟಗಾರ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

 

ಇದನ್ನೂ ಓದಿ: ಐಪಿಎಲ್ 2024 ಮುಗಿಯುತ್ತಿದ್ದಂತೆ ನಿವೃತ್ತಿ ಘೋಷಿಸಲಿದ್ದಾರೆ ಈ ಐವರು ಕ್ರಿಕೆಟ್ ದಿಗ್ಗಜರು!

ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌’ನಲ್ಲಿ ಬ್ರೆಜಿಲ್‌ನ ಫುಟ್‌ಬಾಲ್ ಮೈದಾನದಲ್ಲಿಯೂ ಇಂತಹ ಘಟನೆ ಕಂಡುಬಂದಿದೆ. ಆ ಘಟನೆಯಲ್ಲಿಯೂ ಒಬ್ಬ ಆಟಗಾರ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದರು. ಇಂಡೋನೇಷ್ಯಾದಲ್ಲಿಯೂ, ಕಳೆದ ವರ್ಷ ಪೂರ್ವ ಜಾವಾದ ಬೊಜೊನೆಗೊರೊದಲ್ಲಿ ನಡೆದ ಸೊರೆಟಿನ್ ಅಂಡರ್-13 ಕಪ್‌’ನಲ್ಲಿ ಯುವ ಫುಟ್‌ಬಾಲ್ ಆಟಗಾರನಿಗೆ ಸಿಡಿಲು ಬಡಿದಿತ್ತು. ಆದರೆ ಆ ಆಟಗಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News