“ಐಶ್ವರ್ಯಾ ಜೊತೆ ಪ್ರತಿದಿನ ‘ಅದನ್ನು’ ಮಾಡಿಲ್ಲ ಅಂದ್ರೆ ಬೋರಾಗುತ್ತೆ”- ಪಬ್ಲಿಕ್’ನಲ್ಲೇ ಇಂಥಾ ಹೇಳಿಕೆ ಕೊಟ್ಟ ಅಭಿಷೇಕ್ ಬಚ್ಚನ್

Aishwarya Rai statement on Fight with Abhishek Bachchan: ಬಾಲಿವುಡ್ ಕ್ಯೂಟ್ ಕಪಲ್ ಆಂಡ್ ಪವರ್ಫುಲ್ ಕಪಲ್’ಗಳಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಕೂಡ ಒಂದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಕೆಲ ದಿನಗಳ ಹಿಂದೆ ಈ ಜೋಡಿ ಡಿವೋರ್ಸ್ ಪಡೆದುಕೊಳ್ಳುತ್ತೆ ಎಂದು ಸಾಕಷ್ಟು ಗುಮಾನಿ ಹಬ್ಬಿತ್ತು. ಆದರೆ ಅಭಿ ಬರ್ತ್ ಡೇ ದಿನ ಪೋಸ್ಟ್ ಶೇರ್ ಮಾಡಿದ್ದ ಐಶ್, ಈ ವದಂತಿಗೆ ಫುಲ್ ಸ್ಟಾಪ್ ಇಟ್ಟಿದ್ದರು.

2 /7

ಏಪ್ರಿಲ್ 2007 ರಲ್ಲಿ ಮದುವೆಯಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೋಡಿ, ಅದಕ್ಕೂ ಮೊದಲು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇನ್ನು ಮದುವೆಯಾದ ಬಳಿಕ ಮಾದರಿ ಜೋಡಿಯಾಗಿ ಬಾಲಿವುಡ್’ನಲ್ಲಿ ಹೆಸರು ಮಾಡಿರುವ ಇವರು, ನವೆಂಬರ್ 2011 ರಲ್ಲಿ ತಮ್ಮ ಮಗಳು ಆರಾಧ್ಯ ಬಚ್ಚನ್‌’ಗೆ ಪೋಷಕರಾದರು.

3 /7

ಅಭಿಷೇಕ್ ಮತ್ತು ಐಶ್ವರ್ಯ, ಧೂಮ್ 2 (2006), ಗುರು (2007) ಮತ್ತು ರಾವನ್ (2010) ನಂತಹ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಂದಹಾಗೆ ಈ ಜೋಡಿಗೆ ಸಂಬಂಧಿಸಿದ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ಅಭಿಷೇಕ್ ಸಂದರ್ಶನದಲ್ಲಿ ಸಖತ್ ಬೋಲ್ಡ್ ಹೇಳಿಕೆ ನೀಡಿದ್ದಾರೆ.

4 /7

ಜುಲೈ 2010ರಲ್ಲಿ ವೋಗ್ ಇಂಡಿಯಾ ನಡೆಸಿದ ಸಂದರ್ಶನದ ತುಣುಕು ಇದಾಗಿದೆ. ಈ ವೇಳೆ ನಿರೂಪಕಿ, “ನೀವು ಮದುವೆಯ ಬಳಿಕ ಎಷ್ಟು ಬಾರಿ ಜಗಳವಾಡಿದ್ದೀರಿ?” ಎಂದು ಫನ್ನಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ, “ಪ್ರತಿದಿನ…” ಎಂದು ಹೇಳಿದ್ದಾರೆ.

5 /7

ಅದೇ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್ “ಆ ಜಗಳಗಳೆಲ್ಲ ಗಂಭೀರವಲ್ಲ. ಹೆಲ್ದಿ ಮಾತುಕತೆಗಳು.. ಚರ್ಚೆಗಳು... ಒಂದು ವೇಳೆ ಅದನ್ನು ಮಾಡದಿದ್ದರೆ ನಮ್ಮಿಬ್ಬರಿಗೂ ನಿಜಕ್ಕೂ ಬೇಸರವಾಗುತ್ತದೆ” ಎಂದಿದ್ದಾರೆ.

6 /7

“ನಾನು ಯಾವಾಗಲೂ ಮೊದಲು ಕ್ಷಮೆ ಕೇಳುತ್ತೇನೆ. ಆದ್ರೆ ಲೇಡೀಸ್ ಈ ರೀತಿ ಮಾಡಲ್ಲ. ಆದರೆ ನನಗೆ ಜಗಳವಾಡಿದ ನಂತರ ನಿದ್ದೆ ಬರಲ್ಲ, ಅದಕ್ಕೆ ಸಾರಿ ಕೇಳುತ್ತೇನೆ. ಆಮೇಲೆ ಚೆನ್ನಾಗಿ ನಿದ್ದೆ ಬರುತ್ತದೆ” ಎಂದು ಅಭಿಷೇಕ್ ತಮಾಷೆಯಾಗಿ ಹೇಳಿದ್ದಾರೆ.

7 /7

ಮಾತು ಮುಂದುವರೆಸಿದ ಅಭಿಷೇಕ್, “ಮಹಿಳೆಯರು ಯಾವಾಗಲೂ ಸರಿಯಾಗಿರುತ್ತಾರೆ. ಪುರುಷರು ಈ ಸಿದ್ಧಾಂತ ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ನೀವು ಏನು ಹೇಳಿದರೂ ಪರವಾಗಿಲ್ಲ. ನಿಮ್ಮ ಬಳಿ ಗಟ್ಟಿಯಾದ ಸಾಕ್ಷ್ಯವಿದ್ದರೂ, ಅವರ ಜಗತ್ತಿನ ಮುಂದೆ ಅದು ಅರ್ಥಹೀನ, ಅದು ಏನೂ ಅಲ್ಲ” ಎಂದಿದ್ದಾರೆ.