Australian Open 2022 - ರಾಫೆಲ್ ನಡಾಲ್ (Rafael Nadal) ಭಾನುವಾರ ರಾಡ್ ಲೇವರ್ ಅರೆನಾದಲ್ಲಿ (Rod Laver Arena ) ಐತಿಹಾಸಿಕ 21 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ (Australian Open 2022) ಫೈನಲ್‌ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ (Daniil Medvedev) ಅವರನ್ನು ಸೋಲಿಸಿದ್ದಾರೆ.
Rafael Nadal becomes the first men's player to win 21 Grand Slams, defeats Daniil Medvedev 2-6, 6-7, 6-4, 6-4, 7-5 in the final to win his second #AustralianOpen title
(File photo) pic.twitter.com/YkVVTB92l0
— ANI (@ANI) January 30, 2022
ಸುಮಾರು ಐದು ಗಂಟೆಗಳ ಕಾಲ ನಡೆದ ಈ ರೋಚಕ ಪಂದ್ಯದಲ್ಲಿ ನಡಾಲ್ ಅವರು ಮೆಡ್ವೆಡೆವ್ ಅವರನ್ನು 2-6, 6-7, 6-4, 6-4, 7-5 ಸೆಟ್‌ಗಳಿಂದ ಸೋಲಿಸಲು ಅದ್ಭುತ ರಿಟರ್ನ್ ನೀಡಿದ್ದಾರೆ. 14 ವರ್ಷಗಳಲ್ಲಿ ನಡಾಲ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನು ಗೆಲ್ಲಲು ಎರಡು ಸೆಟ್‌ಗಳಿಂದ ಕೆಳಗಿಳಿದಿದ್ದು ಇದೆ ಮೊದಲ ಬಾರಿಗೆ. ಕೊನೆಯ ಬಾರಿಗೆ 2007 ರ ವಿಂಬಲ್ಡನ್‌ನಲ್ಲಿ ಅವರು ನಾಲ್ಕನೇ ಸುತ್ತಿನಲ್ಲಿ ರಷ್ಯಾದ ಮಿಖಾಯಿಲ್ ಯೂಜ್ನಿ (Mikhail Youzhny) ಅವರನ್ನು ಸೋಲಿಸಿದ್ದರು.
Champion in Melbourne once again 🏆#AO2022 • #AusOpen pic.twitter.com/NLyuXwUwdt
— #AusOpen (@AustralianOpen) January 30, 2022
ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸೆರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿ 21 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಪುರುಷ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ನಡಾಲ್ ಪಾತ್ರರಾಗಿದ್ದಾರೆ. ಇಬ್ಬರೂ ತಲಾ 20ಕ್ಕೆ ಟೈ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ-WATCH: U-19 World Cup match: ಐರ್ಲೆಂಡ್-ಜಿಂಬಾಬ್ವೆ ಪಂದ್ಯದ ವೇಳೆ ಭೂಕಂಪ..!
5 ಗಂಟೆ 20 ನಿಮಿಷಗಳ ಕಾಲ ನಡೆದ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರಾಫೆಲ್ ನಡಾಲ್ ಮೊದಲ ಎರಡು ಸೆಟ್‌ಗಳನ್ನು 2-6, 6-7 ರಿಂದ ಸೋತ ಬಳಿಕ ನಂತರದ ಮೂರು ಸೆಟ್ ಗಳಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 6-4, 6-4 ಮತ್ತು 7-5 ಅಂತರದಿಂದ ಸೋಲಿಸಿದ್ದಾರೆ. ಇದು 35 ವರ್ಷದ ರಾಫೆಲ್ ನಡಾಲ್ ಅವರ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದೆ. ಇದಕ್ಕಾಗಿ ಅವರು 13 ವರ್ಷ ಕಾಯ್ದಿದ್ದಾರೆ. ಅವರು ಕೊನೆಯ ಬಾರಿಗೆ 2009 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಈ ಗೆಲುವಿನೊಂದಿಗೆ ಸ್ಪೇನ್‌ನ ನಡಾಲ್ ಎಲ್ಲಾ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ.
ಇದನ್ನೂ ಓದಿ-Indian Team : ಟೀಂ ಇಂಡಿಯಾದ ಈ ಆಟಗಾರರ ವೃತ್ತಿಜೀವನಕ್ಕೆ ಅಡ್ಡಿಯಾದ KL Rahul!
ಮೊದಲ ಗ್ರ್ಯಾಂಡ್ ಸ್ಲಾಮ್ ಅನ್ನು 1877 ರಲ್ಲಿ ಜಾನ್ ಗೋರೆ ಗಿದ್ದಿದ್ದಾರೆ. ಇದೇ ವೇಳೆ , ಜಾನ್ ಹಾರ್ಟ್ಲಿ 2 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ಮೊದಲಿಗರಾಗಿದ್ದರು. ಮೊದಲು 3 ರಿಂದ 6 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದ ದಾಖಲೆಯು ವಿಲಿಯಂ ರೆನ್‌ಶಾ ಹೆಸರಿನಲ್ಲಿದೆ. ಬಳಿಕ ಏಳು ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ಗೌರವ ರಿಚರ್ಡ್ ಸಿಯರ್ಸ್ ಸಲ್ಲುತ್ತದೆ. ಬಿಲ್ ಟಿಲ್ಡೆನ್ ಹೆಸರಿಗೆ ಮೊದಲು 8 ರಿಂದ 10 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ದಾಖಲೆ ಇದೆ. 11 ಮತ್ತು 12 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ದಾಖಲೆ ರೋಯ್ ಎಮರ್ಸನ್ ಹೆಸರಿನಲ್ಲಿದೆ. ಅದರ ನಂತರ ಪೀಟ್ ಸಾಂಪ್ರಾಸ್ ಅವರು ಮೊದಲು 13 ಮತ್ತು 14 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದರು. ನಂತರ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸೆರ್ಬಿಯಾದ ನೋವಾಕ್ ಜೊಕೊವಿಕ್ ಮೊದಲ ಬಾರಿಗೆ 15 ರಿಂದ 20 ಪ್ರಶಸ್ತಿಗಳನ್ನು ಗೆದ್ದರು, ಆದರೆ ರಾಫೆಲ್ ನಡಾಲ್ 21 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ಮೊದಲ ಟೆನಿಸ್ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ-IPL 2022 Mega Auction ನಲ್ಲಿ ಈ 2 ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.