Asia Cup 2023: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿಯು 2023 ರ ಏಷ್ಯಾ ಕಪ್’ಗಾಗಿ ಭಾರತದ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮೂವರು ಕ್ರಿಕೆಟಿಗರಿಗೆ ಸ್ಥಾನ ನೀಡಿದ್ದು, ಅವರಿಂದ ಟೀಂ ಇಂಡಿಯಾಗೆ ಸಂಕಷ್ಟ ಎದುರಾಗುವ ಭೀತಿ ಇದೆ. ಆ ಆಟಗಾರರು ಯಾರೆಂದು ತಿಳಿಯೋಣ.
ಇದನ್ನೂ ಓದಿ: ಏಷ್ಯಾಕಪ್ 2023ಕ್ಕೆ ಪ್ಲೇಯಿಂಗ್ 11 ರೆಡಿ: ಕನ್ನಡಿಗ ಸೇರಿ 29ರ ಹರೆಯದ ಫಾಸ್ಟ್ ಬೌಲರ್ ಔಟ್!!
1. ಕೆಎಲ್ ರಾಹುಲ್:
ಗಾಯದಿಂದ ಚೇತರಿಸಿಕೊಂಡು 3 ತಿಂಗಳ ಬಳಿಕ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಮರಳಿದ್ದಾರೆ. ಆದರೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಕೆಎಲ್ ರಾಹುಲ್ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ರೀತಿಯ ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಮೂಲಕ, ಆಯ್ಕೆಗಾರರು ಕೆಎಲ್ ರಾಹುಲ್ ಅವರನ್ನು ಏಷ್ಯಾ ಕಪ್ 2023 ಗೆ ಆಯ್ಕೆ ಮಾಡಿದ್ದಾರೆ. ಅದೂ ಕೂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ. ಕೆಎಲ್ ರಾಹುಲ್ ವಿಫಲವಾದರೆ, ಏಷ್ಯಾ ಕಪ್ 2023 ರಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್’ನಲ್ಲಿ ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ.
2. ಅಕ್ಷರ್ ಪಟೇಲ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಕೈಬಿಟ್ಟು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರಿಗೆ ಏಷ್ಯಾ ಕಪ್ 2023 ಗಾಗಿ ಭಾರತದ 17 ಸದಸ್ಯರ ತಂಡದಲ್ಲಿ ಅವಕಾಶ ನೀಡಿದೆ. ಆಯ್ಕೆಗಾರರ ಈ ನಿರ್ಧಾರ ಟೀಂ ಇಂಡಿಯಾಗೆ ಅಪಾಯ ತಂದೊಡ್ಡಬಹುದು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಈಗಾಗಲೇ ಏಷ್ಯಾ ಕಪ್ 2023 ಗಾಗಿ ಟೀಮ್ ಇಂಡಿಯಾದಲ್ಲಿ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಬದಲಿಗೆ ಯುಜ್ವೇಂದ್ರ ಚಹಾಲ್ ಅವರನ್ನು ಆಯ್ಕೆ ಮಾಡಿದ್ದರೆ ಟೀಂ ಇಂಡಿಯಾಗೆ ವಿಭಿನ್ನ ರೀತಿಯ ಸ್ಪಿನ್ ಬೌಲರ್ ಸಿಗುತ್ತಿದ್ದರು ಎಂಬುದು ಅನೇಕರ ಅಭಿಪ್ರಾಯ.
3. ಸೂರ್ಯಕುಮಾರ್ ಯಾದವ್:
2023ರ ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಏಷ್ಯಾ ಕಪ್ 2023 ರ ಸ್ವರೂಪವನ್ನು ಸಹ ಏಕದಿನ ಅಂತರಾಷ್ಟ್ರೀಯವಾಗಿ ಇರಿಸಲಾಗಿದೆ. ಭಾರತ ಪರ ODI ಸ್ವರೂಪದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಂಕಿಅಂಶಗಳು ತುಂಬಾ ಕೆಟ್ಟದಾಗಿದೆ. ಭಾರತ ಪರ 26 ಏಕದಿನ ಪಂದ್ಯಗಳಲ್ಲಿ 24.33ರ ಕಳಪೆ ಸರಾಸರಿಯಲ್ಲಿ 511 ರನ್ ಗಳಿಸಿದ್ದಾರೆ. ತಮ್ಮ ಕೊನೆಯ 10 ಏಕದಿನ ಇನ್ನಿಂಗ್ಸ್‌ಗಳಲ್ಲಿ 6, 4, 31, 14, 0, 0, 0, 19, 24, 35 ರನ್ ಗಳಿಸಿದ್ದರು. 2023 ರ ಏಷ್ಯಾ ಕಪ್‌ಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿರುವುದು ಟೀಮ್ ಇಂಡಿಯಾಕ್ಕೆ ಯಾವ ರೀತಿಯ ಫಲಿತಾಂಶ ನೀಡುತ್ತದೆ ಎಂಬುದು ಕಾದುನೋಡಬೇಕಿದೆ.
ಇದನ್ನೂ ಓದಿ: ಭಾರತದ ನಂ.4 ಸ್ಥಾನಕ್ಕೆ ಸಿಕ್ಕಾಯ್ತು ಯುವಿಯಂತೆ ಫಿನಿಶಿಂಗ್ ಮಾಡಬಲ್ಲ 20ರ ಹರೆಯದ ಸ್ಫೋಟಕ ಬ್ಯಾಟರ್!
ಏಷ್ಯಾ ಕಪ್ 2023ಗಾಗಿ ಭಾರತದ 17 ಸದಸ್ಯರ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ ಕೃಷ್ಣ.
ಬ್ಯಾಕಪ್ - ಸಂಜು ಸ್ಯಾಮ್ಸನ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.