ನವದೆಹಲಿ: ಮಾಜಿ ಕ್ರಿಕೆಟ ಆಟಗಾರು ಮತ್ತು ಕ್ರಿಕೆಟ್ ಪಂಡಿತರನ್ನು ದಾಟಿ ಈಗ ಬ್ರೆಂಡನ್ ಮೆಕಲಮ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದೇನಪ್ಪಾ ಅಂದರೆ ಟೂರ್ನಿ ಬಹುತೇಕ ಪ್ರತಿಯೊಂದು ಪಂದ್ಯದ ಫಲಿತಾಂಶದ ಭವಿಷ್ಯವನ್ನು ಬರೆದಿದ್ದಾರೆ.
ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ ಬರೆದಿಟ್ಟಿರುವ ಭವಿಷ್ಯದಲ್ಲಿ ಇಂಗ್ಲೆಂಡ್, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲು ಮೆಚ್ಚಿನ ತಂಡಗಳಾಗಿವೆ. ಇನ್ನು ನಾಲ್ಕನೇ ಮೆಚ್ಚಿನ ತಂಡವಾಗಿ ನ್ಯೂಝಿಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಮುಕ್ತ ಅವಕಾಶ ನೀಡಿದ್ದಾರೆ.
ಮೆಕಲಂ ಬರೆದಿರುವ ಭವಿಷ್ಯದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳನ್ನು ಕಡೆಗಣಿಸಿದ್ದಾರೆ.ಇನ್ನು ಅತಿಥೇಯ ಇಂಗ್ಲೆಂಡ್ ತಂಡವು 9 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್ ಟ್ರೋಪಿಯನ್ನು ಎತ್ತಿಹಿಡಿಯಲಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆಗೆ ಭಾರತವು ಕೂಡ 9 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆಲ್ಲಬಹುದು ಆದರೆ ಇಂಗ್ಲೆಂಡ್ ತಂಡವು ಮಾತ್ರ ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಆಸ್ಟ್ರೇಲಿಯಾದ ವಿಚಾರವಾಗಿ ಬರುವುದಾದಲ್ಲಿ ಅದು ವೆಸ್ಟ್ ಇಂಡೀಸ್ , ಭಾರತ ,ಪಾಕಿಸ್ತಾನದ ವಿರುದ್ಧ ಸೋಲನ್ನು ಅನುಭವಿಸಲಿದೆ. ಎಂದು ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ಫೆಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ