Cricket: ಅಂತರರಾಷ್ಟ್ರೀಯ ಪಂದ್ಯದಲ್ಲಿ ಕೇವಲ 8 ರನ್ ಗಳಿಗೆ ಇಡೀ ತಂಡವೇ ಉಡಿಸ್

Lowest Score in Cricket: ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಪಂದ್ಯದಲ್ಲಿ ನೇಪಾಳದ ಯುವತಿಯರ ತಂಡ ಕೇವಲ 8 ರನ್ ಗಳಿಗೆ ಉಡಿಸ್ ಆಗಿದೆ.  

Written by - Nitin Tabib | Last Updated : Jun 4, 2022, 07:47 PM IST
  • ಅಂಡರ್- 19 ಮಹಿಳಾ ಟಿ20 ವಿಶ್ವಕಪ್ ಕ್ವಾಲಿಫೈಯರ್‌ ಪಂದ್ಯ
  • ನೇಪಾಳ್ ವಿರುದ್ಧ ಯುಎಇ ಪಂದ್ಯ
  • ಕೇವಲ 8 ರನ್ ಗಳಿಸಿ ಆಲ್ ಔಟ್ ಆದ ನೇಪಾಳ್ ತಂಡ
Cricket: ಅಂತರರಾಷ್ಟ್ರೀಯ ಪಂದ್ಯದಲ್ಲಿ ಕೇವಲ 8 ರನ್ ಗಳಿಗೆ ಇಡೀ ತಂಡವೇ ಉಡಿಸ್  title=
Lowest Score in cricket

Lowest Score in cricket: ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಪಂದ್ಯದಲ್ಲಿ ನೇಪಾಳದ ಯುವತಿಯರ ತಂಡ 8 ರನ್‌ಗಳಿಗೆ ಆಲೌಟ್ ಆಗಿದೆ. ನೇಪಾಳ, ಯುಎಇ, ಥಾಯ್ಲೆಂಡ್, ಭೂತಾನ್ ಮತ್ತು ಕತಾರ್ ತಂಡಗಳು ಮೊದಲ ಬಾರಿಗೆ ನಡೆಯುತ್ತಿರುವ ಅಂಡರ್- 19 ಮಹಿಳಾ ಟಿ20 ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಭಾಗವಹಿಸುತ್ತಿವೆ.

ನೇಪಾಳ ತಂಡದಿಂದ ಅತ್ಯಂತ ಕಳಪೆ ಪ್ರದರ್ಶನ
ಐದು ದೇಶಗಳ ನಡುವೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ತಂಡ 2023ರ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆಯಲಿದೆ. ಇದಕ್ಕೂ ಮೊದಲಿನ ಪಂದ್ಯದಲ್ಲಿ ಕತಾರ್ ತಂಡವನ್ನು ಕೇವಲ 38 ರನ್ ಗಳಿಗೆ ಕಟ್ಟಿಹಾಕಿದ್ದ ನೇಪಾಳ ತಂಡ ಪಂದ್ಯವನ್ನು 79 ರನ್ ಗಳಿಂದ ತನ್ನದಾಗಿಸಿಕೊಂಡಿತ್ತು. ಆದರೆ, ಶನಿವಾರ ನಡೆದ ಪಂದ್ಯ ತಂಡದ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿದೆ. ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡ ಈ ಪಂದ್ಯದಲ್ಲಿ ಕೇವಲ 9.2 ಓವರ್ ಗಳಲ್ಲಿಯೇ ಫಲಿತಾಂಶ ಪ್ರಕಟಗೊಂಡಿದೆ. 

ಪಂದ್ಯದ ಹೆಸರಿನಲ್ಲಿ ತಮಾಷೆ ನಡೆದಿದೆ 
ಈ ಪಂದ್ಯದಲ್ಲಿ ಪಾಲ್ಗೊಂಡ ಎರಡು ತಂಡಗಳ ಓರ್ವ ಆಟಗಾರ್ತಿಯೂ ಕೂಡ 10 ರನ್ ನಳ ಗಡಿ ದಾಟಿಲ್ಲ. ಯುಎಇ ತಂಡದ ಪರ ತೀರ್ಥ್ ಸತೀಶ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನೆಸಿಕೊಂಡಿದ್ದು, ಔಟಾಗದೆ 4 ರನ್ ಗಳಿಸಿದ್ದಾಳೆ. ನೇಪಾಳಗ 6 ಆಟಗಾರ್ತಿಯರು ಖಾತೆ ತೆರೆಯದೆಯೇ ಪೆವಿಲಿಯನ್ ಗೆ ಮರಳಿದ್ದಾರೆ. ತಂಡದ ಪರ ಸ್ನೇಹಾ ಮಾಹರಾ ಅತಿ ಹೆಚ್ಚು ರನ್ ಗಳಿಸಿದ್ದಾಳೆ. ಆಕೆ ಒಟ್ಟು 10 ಎಸೆತಗಳಲ್ಲಿ 3 ರನ್ ಗಳಿಸಿದ್ದಾಳೆ. ನೇಪಾಲದ ಆಟಗಾರ್ತಿ ಮನೀಷಾ ರಾಣಾ ಎರಡು ರನ್ ಗಳನ್ನು ಗಳಿಸಿದರೆ, ಮೂವರು ಆಟಗಾರರು ತಲಾ ಒಂದೊಂದು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 

ಇದನ್ನೂ ಓದಿ-ಐಪಿಎಲ್‌ನಲ್ಲಿ ಕಮಾಲ್‌ ಮಾಡಿದ ಈ ಆಟಗಾರರು ಸೋಲ್ಡ್‌ಔಟ್‌ ಆಗಿದ್ದು ಕೇವಲ 20 ಲಕ್ಷ ರೂ.ಗೆ!

ಯುಎಇ ಪರ ಮಾರಕ ಬೌಲಿಂಗ್ ಮಾಡಿದ ಮಾಹಿಕಾ ಗೌಡ್, ಒಟ್ಟು 4 ಓವರ್ ಗಳಲ್ಲಿ ಎರಡು ಮೇಡನ್ ಸೇರಿದಂತೆ ಒಟ್ಟು ಎರಡು ರನ್ ನೀಡಿ ಐದು ವಿಕೆಟ್ ಕಬಳಿಸಿದ್ದಾಳೆ. ಹೀಗಾಗಿ ನೇಪಾಳ ತಂಡ ಒಟ್ಟು 8.1 ಓವರ್ ಗಳಲ್ಲಿ ತನ್ನ ಆಟ ಮುಗಿಸಿದೆ.

ಇದನ್ನೂ ಓದಿ-ಸೌತ್‌ ಆಫ್ರಿಕಾದಲ್ಲಿ ನಡೆಯುತ್ತಾ ಕನ್ನಡಿಗನ ಕಮಾಲ್‌: ಕೆಎಲ್‌ ರಾಹುಲ್‌ ಮುಂದಿವೆ ಈ ಸವಾಲ್‌!

ಅಸೋಸಿಯೇಟ್ ಸದಸ್ಯ ರಾಷ್ಟ್ರಗಳಲ್ಲಿ ಜೂನಿಯರ್ ಮಟ್ಟದಲ್ಲಿ ಮಹಿಳೆಯರ ಆಟವನ್ನು ಉತ್ತೇಜಿಸಲು ICC ಪ್ರಯತ್ನಿಸುತ್ತಿದೆ. ನೇಪಾಳದಲ್ಲಿ ಆಟಗಾರರು ಉತ್ತಮ ಪಿಚ್ ಸೌಲಭ್ಯಗಳನ್ನು ಹೊಂದಿಲ್ಲ, ಆದರೂ ತಂಡವು ಈ ನಿರಾಶಾದಾಯಕ ಪ್ರದರ್ಶನದ ಮೊದಲು ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಇದು ಪ್ರಶಂಸೆಗೆ ಪಾತ್ರವಾಗಿದೆ. ಯುಎಇ ತಂಡವು ದಕ್ಷಿಣ ಏಷ್ಯಾದ ವಲಸಿಗ ಸಮುದಾಯದ ಹುಡುಗಿಯರಿಂದ ತುಂಬಿದೆ ಮತ್ತು ತಂಡದಲ್ಲಿ ಅವರೇ ಗೆಲುವಿನ ರೂವಾರಿಗಳಾಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

Trending News