ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ರಿಕೆಟಿಗ ರಾಯುಡು ರೆಡಿ..! ವೈಸಿಪಿಯಿಂದ ಸ್ಪರ್ಧೆ ಸಾಧ್ಯತೆ

Ambati rayudu politics : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಂಬಟಿ ರಾಯುಡು ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದು, ಈಗಾಗಲೇ ವೈಸಿಪಿಯಿಂದ ಸ್ಪರ್ಧೆ ಮಾಡಲು ಅಂಬಾಟಿಗೆ ಲೈನ್ ಕ್ಲಿಯರ್ ಆಗಿದೆಯಂತೆ.  

Written by - Krishna N K | Last Updated : Jun 17, 2023, 11:18 AM IST
  • ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಂಬಟಿ ರಾಯುಡು ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ.
  • ಇತ್ತೀಚೆಗಷ್ಟೇ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಸರಣಿ ಸಭೆ ನಡೆಸಿ ಸುದ್ದಿಯಾಗಿದ್ದರು.
  • ಅಂಬಟಿ ರಾಯುಡು ವೈಸಿಪಿ ಪಕ್ಷದಿಂದ ರಾಜಕೀಯರಂಗ ಪ್ರವೇಶದ ಸುಳಿವು ನೀಡಿದ್ದರು.
ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ರಿಕೆಟಿಗ ರಾಯುಡು ರೆಡಿ..! ವೈಸಿಪಿಯಿಂದ ಸ್ಪರ್ಧೆ ಸಾಧ್ಯತೆ title=

Ambati Rayudu : ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಸರಣಿ ಸಭೆ ನಡೆಸಿ ಸುದ್ದಿಯಾಗಿದ್ದರು. ಅಲ್ಲದೆ, ವೈಸಿಪಿ ಸರ್ಕಾರದ ಆಡಳಿತವನ್ನು ಹೊಗಳಿ ಟ್ವೀಟ್, ಕಮೆಂಟ್ ಮಾಡುವ ಮೂಲಕ ವೈಸಿಪಿಯಿಂದ ರಾಜಕೀಯರಂಗ ಪ್ರವೇಶದ ಸುಳಿವು ನೀಡಿದ್ದರು.

ರಾಯುಡು ಕೃಷ್ಣ ಅಥವಾ ಗುಂಟೂರು ಜಿಲ್ಲೆಗಳಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯೋಜಿಸಿದ್ದಾರೆ. ಕ್ರಿಕೆಟ್ ಪಿಚ್‌ನಲ್ಲಿ ಬ್ಯಾಟಿಂಗ್ ಮೂಲಕ ಧೂಳು ಎಬ್ಬಿಸಿದ್ದ ಅಂಬಟಿ ರಾಜಕೀಯ ಪಿಚ್‌ನಲ್ಲಿ ಬ್ಯಾಟ್ ಮಾಡಲು ರೆಡಿಯಾಗುತ್ತಿದ್ದಾರೆ. ಶೀಘ್ರದಲ್ಲೇ ಅವರು ವೈಎಸ್‌ಆರ್‌ಸಿಪಿ ಸೇರಲು ಸಿದ್ಧರಾಗಿದ್ದಾರೆ. 

ಇದನ್ನೂ ಓದಿ: ಇನ್ಮುಂದೆ ಸೂಪರ್ ಕಿಂಗ್ಸ್’ಗೆ ಫಾಫ್ ಡುಪ್ಲೆಸಿಸ್ ನಾಯಕ! ದಿಢೀರಾಗಿ ಹೊರಬಿತ್ತು ಬಿಗ್ ಅಪ್ಡೇಟ್

ರಾಯುಡು ಗುಂಟೂರಿನಿಂದ ಬಂದು ಕಳೆದ ವಾರದಲ್ಲಿ ಎರಡು ಬಾರಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಜಗನ್ ಮುಂದಿನ ಚುನಾವಣೆಯಲ್ಲಿ ರಾಯುಡು ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಅದ್ರೆ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಮೂಲಕ ಕಣಕ್ಕಿಳಿಸಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ರಾಯುಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದರೆ ಪೊನ್ನೂರು ಅಥವಾ ಗುಂಟೂರು ಪಶ್ಚಿಮ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಪಕ್ಷದ ಹಿರಿಯ ರಾಜಕಾರಣಿಗಳು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಚಲಿಪಟ್ಟಣ ಲೋಕಸಭೆ ಕ್ಷೇತ್ರವೇ ಅವರಿಗೆ ಉತ್ತಮ ಆಯ್ಕೆ ಎಂದು ವೈಸಿಪಿಯ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News