MS Dhoni: ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ? CSK ಸಿಇಒ ಕೊಟ್ರು ಬಿಗ್‌ ಅಪ್‌ಡೇಟ್‌

Dhoni in IPL 2025: ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದ ಧೋನಿ, ಈ ಸೀಸನ್ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು.‌ 

Written by - Chetana Devarmani | Last Updated : May 24, 2024, 07:58 AM IST
  • ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ?
  • ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂ.ಎಸ್ ಧೋನಿ
  • CSK ಸಿಇಒ ಕೊಟ್ರು ಬಿಗ್‌ ಅಪ್‌ಡೇಟ್‌
MS Dhoni: ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ? CSK ಸಿಇಒ ಕೊಟ್ರು ಬಿಗ್‌ ಅಪ್‌ಡೇಟ್‌  title=

MS Dhoni: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಸಿಎಸ್‌ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಡುತ್ತಾರೆ ಎಂಬ ಸಂಪೂರ್ಣ ಭರವಸೆ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಶ್ವನಾಥನ್ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದ ಧೋನಿ, ಈ ಸೀಸನ್‌ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ರುತುರಾಜ್ ಗಾಯಕ್ವಾಡ್ ಅವರಿಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸಿದರು.  

ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ?

ಇದು ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಅವರ ಕೊನೆಯ ಸೀಸನ್ ಇರಬಹುದು ಎಂಬ ಊಹಾಪೋಹವಿದೆ. ಆದರೆ ವಿಶ್ವನಾಥನ್ ಅವರು ತಮ್ಮ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಸಂಪೂರ್ಣವಾಗಿ ಭಾರತದ ಮಾಜಿ ನಾಯಕ ಧೋನಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ. 

ಇದನ್ನೂ ಓದಿ:  RR vs SRH: ನಾನು 100% ಫಿಟ್ ಇಲ್ಲ ಎಂದ ರಾಜಸ್ಥಾನ್‌ ಕ್ಯಾಪ್ಟನ್ ಸಂಜು ಸ್ಯಾಮ್ಸನ್! 

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಶ್ವನಾಥನ್ ಅವರು ಸಿಎಸ್‌ಕೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. "ನನಗೆ ಗೊತ್ತಿಲ್ಲ. ಇದು ಧೋನಿ ಮಾತ್ರ ಉತ್ತರಿಸಬಹುದಾದ ಪ್ರಶ್ನೆಯಾಗಿದೆ. ಎಂಎಸ್ ಅವರ ನಿರ್ಧಾರವನ್ನು ನಾವು ಯಾವಾಗಲೂ ಗೌರವಿಸುತ್ತೇವೆ. ಅದನ್ನು ಅವರಿಗೆ ಬಿಟ್ಟಿದ್ದೇವೆ" ಎಂದರು. 

ವಿಶ್ವನಾಥನ್ ಅವರು, 'ನಿಮಗೆಲ್ಲ ತಿಳಿದಿರುವಂತೆ, ಅವರು ತಮ್ಮ ನಿರ್ಧಾರಗಳನ್ನು ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಅವರು ನಿರ್ಧಾರ ತೆಗೆದುಕೊಂಡಾಗ ಮಾತ್ರ ಅದರ ಬಗ್ಗೆ ನಮಗೆ ತಿಳಿಯುತ್ತದೆ. ಮುಂದಿನ ವರ್ಷ ಅವರು ಸಿಎಸ್‌ಕೆ ತಂಡದಲ್ಲಿ ಆಡುತ್ತಾರೆ ಎಂಬ ಸಂಪೂರ್ಣ ಭರವಸೆ ಇದೆ. ಇದು ನನ್ನ ಮತ್ತು ಅಭಿಮಾನಿಗಳ ನಿರೀಕ್ಷೆ ಎಂದಿದ್ದಾರೆ. 

ಈ ವರ್ಷಾಂತ್ಯದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ

ಕಳೆದ ವರ್ಷ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹೇಂದ್ರ ಸಿಂಗ್ ಧೋನಿ ಈ ಸೀಸನ್‌ನಲ್ಲಿ 73 ಎಸೆತಗಳಲ್ಲಿ 161 ರನ್ ಗಳಿಸಿದರು. ಈ ವರ್ಷಾಂತ್ಯದಲ್ಲಿ ಐಪಿಎಲ್‌ನ ಮೆಗಾ ಹರಾಜು ನಡೆಯಲಿದ್ದು, ಧೋನಿ ಆಡುವುದಾದರೆ ಸಿಎಸ್‌ಕೆ ಅವರನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: Virat Kohli: ಗೇಲ್ ಕಾಕಾ! ಯೂನಿವರ್ಸಲ್ ಬಾಸ್ ಗೆ ಸ್ಪೆಷಲ್‌ ಗಿಫ್ಟ್‌ ಜೊತೆ ಬಂಪರ್‌ ಆಫರ್‌ ಕೊಟ್ಟ ಕಿಂಗ್‌ ಕೊಹ್ಲಿ ! 

Lemon Water to reduce blood sugar: ಕೆಲವು ಮನೆಮದ್ದುಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News