ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 50ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ 21 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದೆಹಲಿ ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು.
ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ಕೊನೆ ಓವರ್‍ವರೆಗೂ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಪರಿಣಾಮ ದೆಹಲಿ ಎದುರು ವಿರೋಚಿತ ಸೋಲು ಕಾಣಬೇಕಾಯಿತು. ದೆಹಲಿ ಪರ ಡೇವಿಡ್ ವಾರ್ನರ್ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್ ಬೌಲರ್‍ಗಳ ಬೆವರಿಳಿಸಿದರು. ಕೊನೆ ಓವರ್‍ವರೆಗೂ ಕ್ರೀಸ್‍ನಲ್ಲಿ ನಿಂತು ಆಡಿದ ವಾರ್ನರ್ 58 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಇದ್ದ ಅಜೇಯ 92 ರನ್ ಗಳಿಸಿದರು. ಇವರಿಗೆ ರೋವ್ಮನ್ ಪೊವೆಲ್ ಉತ್ತಮ ಸಾಥ್ ನೀಡಿದರು.
ಇದನ್ನೂ ಓದಿ: IND vs PAK : ಟಿ20 ವಿಶ್ವಕಪ್‌ನಲ್ಲಿ ಉಮ್ರಾನ್ ಮಲಿಕ್-ಬಾಬರ್ ಮುಖಾಮುಖಿ, ಇಬ್ಬರ ನಡುವೆ ರೋಚಕ ಕದನ
Unbeaten at the Brabourne so far and HOW 🔥#YehHaiNayiDilli | #IPL2022 | #DCvSRH#TATAIPL | #IPL | #DelhiCapitals pic.twitter.com/rZEmmOMAO2
— Delhi Capitals (@DelhiCapitals) May 5, 2022
ಪೊವೆಲ್ 35 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ಇದ್ದ ಅಜೇಯ 67 ರನ್ ಗಳಿಸಿ ತಂಡವು 200 ರನ್‍ಗಳ ಗಡಿ ದಾಟಲು ನೆರವಾದರು. ಕೊನೆ ಓವರ್‍ಗಳಲ್ಲಿ ಅವರು ರನ್‍ಗಳ ಸುರಿಮಳೆಯನ್ನೇ ಸುರಿಸಿದರು. ಸಿಕ್ಸರ್ ಮತ್ತು ಬೌಂಡರಿ ಅಟ್ಟುವ ಮೂಲಕ ಭರ್ಜರಿ ಮನರಂಜಿಸಿದರು. ಇನ್ನುಳಿದಂತೆ ನಾಯಕ ರಿಷಭ್ ಪಂತ್(26), ಮಿಚೆಲ್ ಮಾರ್ಷ್(10) ರನ್ ಗಳಿಸಿದರು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಸೀನ್ ಅಬಾಟ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ವ್ಯರ್ಥವಾದ ನಿಕೋಲಸ್ ಪೂರನ್ ಆಟ
ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್ ಕೊನೆ ಓವರ್‍ವರೆಗೂ ಹೋರಾಟ ನಡೆಸಿತು. ಆದರೆ, 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡ ವಿಲಿಯಮ್ಸನ್ ಪಡೆ ಕೇವಲ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ನಿಕೋಲಸ್ ಪೂರನ್(62) ಸ್ಫೋಟಕ ಆಟವಾಡಿ ಅರ್ಧಶತಕ ಬಾರಿಸಿದರು. ಇನ್ನುಳಿದಂತೆ ಐಡೆನ್ ಮಾರ್ಕ್ರಾಮ್(42), ರಾಹುಲ್ ತ್ರಿಪಾಠಿ(22) ಮತ್ತು ಶಶಾಂಕ್ ಸಿಂಗ್(10) ರನ್ ಗಳಿಸಿದರು. ದೆಹಲಿ ಪರ ಖಲೀಲ್ ಅಹಮದ್ 3, ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದು ಮಿಂಚಿದರೆಮ, ಅನ್ರಿಚ್ ನಾರ್ಟ್ಜೆ, ಮಿಚೆಲ್ ಮಾರ್ಷ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ದೆಹಲಿ ಅಂಕಪಟ್ಟಿಯಲ್ಲಿ ದೆಹಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಹೈದರಾಬಾದ್ 6ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: IPL 2022 : ಈ ಆಟಗಾರನನ್ನು ಕೈ ಬಿಟ್ಟ ಡೆಲ್ಲಿ ಟೀಂ : ಟೀಂ ಇಂಡಿಯಾ ಈಗಾಗಲೇ ಹೊರಗಿಟ್ಟಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.