ವಿರಾಟ್ ಕೊಹ್ಲಿ ಔಟ್ ಮಾಡುವುದು ಹೇಗೆ? ಶೋಯಬ್ ಅಖ್ತರ್ ಬಳಿಯಲ್ಲಿದೆ ಈ ಸೂತ್ರ....!

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಇದೀಗ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರತಿ ಬಾರಿ ಕೊಹ್ಲಿ ಮೈದಾನಕ್ಕೆ ಬಂದಾಗ, ಸ್ವರೂಪವನ್ನು ಲೆಕ್ಕಿಸದೆ ಅವರು ಆಡುವ ರೀತಿ ಎಲ್ಲರನ್ನು ದಂಗುಬಡಿಸುತ್ತದೆ.

Last Updated : Apr 16, 2020, 07:35 PM IST
ವಿರಾಟ್ ಕೊಹ್ಲಿ ಔಟ್ ಮಾಡುವುದು ಹೇಗೆ? ಶೋಯಬ್ ಅಖ್ತರ್ ಬಳಿಯಲ್ಲಿದೆ ಈ ಸೂತ್ರ....! title=

ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಇದೀಗ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರತಿ ಬಾರಿ ಕೊಹ್ಲಿ ಮೈದಾನಕ್ಕೆ ಬಂದಾಗ, ಸ್ವರೂಪವನ್ನು ಲೆಕ್ಕಿಸದೆ ಅವರು ಆಡುವ ರೀತಿ ಎಲ್ಲರನ್ನು ದಂಗುಬಡಿಸುತ್ತದೆ.

ಬಹುತೇಕ ಬೌಲರ್ ಗಳಿಗೆ ಕೊಹ್ಲಿ ಕ್ರಿಸ್ ಗೆ ಬಂದಾಗ ಅವರನ್ನು ಹೇಗೆ ಔಟ್ ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುತ್ತಾರೆ. ಕೊಹ್ಲಿ ಈಗಾಗಲೇ 43 ಏಕದಿನ ಶತಕಗಳನ್ನು ಮತ್ತು 27 ಟೆಸ್ಟ್ ಶತಕಗಳನ್ನು ಹೊಡೆದಿದ್ದಾರೆ. ಆದರೆ ಪಾಕಿಸ್ತಾನದ ದಂತಕಥೆ ಶೋಯಬ್ ಅಖ್ತರ್ ಮಾತ್ರ ಅವರನ್ನು ಹೇಗೆ ಔಟ್ ಮಾಡಬಹುದು ಎನ್ನುವ ಬಗ್ಗೆ ಸೂತ್ರವನ್ನು ಹೊಂದಿರುವುದಾಗಿ ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್ ವಿಡಿಯೋವೊಂದರಲ್ಲಿ  ಶೋಯೆಬ್ ಅಖ್ತರ್  ಕೊಹ್ಲಿಗೆ ಬೌಲಿಂಗ್ ಮಾಡಿದರೆ ಅವರನ್ನು  ಹೇಗೆ ಔಟ್ ಮಾಡುವುದಾಗಿ ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. "ನಾನು ಬೌಲಿಂಗ್ ಮಾಡುತ್ತಿದ್ದರೆ, ನಾನು ಕ್ರೀಸ್‌ನ ಅಗಲಕ್ಕೆ ಹೋಗಿ ಚೆಂಡನ್ನು [ಕೊಹ್ಲಿಗೆ] ಪಿಚ್ ಮಾಡುತ್ತೇನೆ ಮತ್ತು ಆ ಮೂಲಕ ಅವನು ಆ ಎಸೆತವನ್ನು ಹೊಡೆಯುವಂತೆ ರೂಪಿಸುತ್ತೇನೆ ಎಂದು ಅಖ್ತರ್ ಹೇಳಿದರು.
 
ಅದು ವರ್ಕೌಟ್ ಆಗದಿದ್ದರೆ ಮಾಡದಿದ್ದರೆ, ನಾನು ಅವರಿಗೆ 150 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡುತ್ತೇನೆ ಆಗ ಅವರು ಔಟ್ ಆಗುತ್ತಾರೆ ಎಂದು ಅಖ್ತರ್ ಹೇಳಿದರು. ಅಖ್ತರ್ ತಮ್ಮ ವೃತ್ತಿಜೀವನದಲ್ಲಿ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 25.69 ಸರಾಸರಿಯಲ್ಲಿ 178 ವಿಕೆಟ್ ಪಡೆದರು. ಅವರು ಪಾಕಿಸ್ತಾನ ಪರ 163 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 24.97 ಸರಾಸರಿಯಲ್ಲಿ 247 ವಿಕೆಟ್ ಪಡೆದರು.

Trending News