ನವದೆಹಲಿ: ಎಡ್ಜ್ಬಾಸ್ಟನ್ನಲ್ಲಿ ಬುಧವಾರ ನಡೆದ 49 ಓವರ್ಗಳ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು. ಆ ಮೂಲಕ 2019 ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಅಜೇಯ ಗೆಲುವನ್ನು ಮುಂದುವರೆಸಿದೆ. ಇನ್ನೊಂದೆಡೆಗೆ ದಕ್ಷಿಣ ಆಫ್ರಿಕಾ ತಂಡವು ಆರು ಪಂದ್ಯಗಳಲ್ಲಿ ನಾಲ್ಕನೇ ಸೋಲನ್ನು ಅನುಭವಿಸಿದೆ.
ಆದರೆ ಈಗ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರು ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.ಬ್ಯಾಟಿಂಗ್ ಎಡ್ಜ್ ಗೆ ಚೆಂಡು ತಗುಲಿದರೂ ಯಾಕೆ ಕೇನ್ ವಿಲಿಯಮ್ಸನ್ ಹೊರ ನಡೆಯಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
Why didn’t Kane Williamson walk 👀 #CWC19 #SAvsNZ pic.twitter.com/H3Cj6M4pGy
— Paul Adams (@PaulAdams39) June 19, 2019
ಎಡ್ಜ್ ಆಗಿರುವ ಫೋಟೋವೊಂದನ್ನು ಅವರು ಟ್ವೀಟ್ ಮಾಡಿ ಕೇನ್ ವಿಲಿಯಮ್ಸನ್ ಕ್ರಮಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಂದ್ಯದ ಆರಂಭದಿಂದಲೂ ನ್ಯೂಜಿಲೆಂಡ್ ಗೆಲುವಿನ ವಿಶ್ವಾಸದಿಂದ ಕಾಣುತ್ತಿದ್ದರೂ, ಆದರೆ ದಕ್ಷಿಣ ಆಫ್ರಿಕಾ ಪಂದ್ಯವನ್ನು ಬದಲಿಸುವ ಅವಕಾಶ ತಪ್ಪಿಸಿಕೊಂಡಿತು.
ಮಳೆಯ ಕಾರಣ 49 ಓವರ್ ಗಳಿಗೆ ನಿಗದಿಪಡಿಸಲಾದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ತಂಡವು 49 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡವು 6 ವಿಕೆಟ್ ಗಳ ನಷ್ಟಕ್ಕೆ 48.3 ಓವರ್ ಗಳಲ್ಲಿ 245 ರನ್ ಗಳ ಗೆಲುವಿನ ಗುರಿಯನ್ನು ತಲುಪಿತು.