/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

IND vs AUS : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದು ಕೊಂಡಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿಯೇ  ರವಿಚಂದ್ರನ್ ಅಶ್ವಿನ್ ದಾಖಲೆ ಬರೆದಿದ್ದಾರೆ. ಈ ಸರಣಿಯಲ್ಲಿ ಮೊದಲ ವಿಕೆಟ್ ಪಡೆದ ಕೂಡಲೇ ಅಶ್ವಿನ್ ತಮ್ಮ ಹೆಸರಿಗೆ ಹೊಸ ದಾಖಲೆ ಸೇರಿಸಿಕೊಂಡಿದ್ದಾರೆ. 

ಭಾರತ vs ಆಸ್ಟ್ರೇಲಿಯಾ ಟೆಸ್ಟ್ : 
ಅಶ್ವಿನ್ ವೇಗವಾಗಿ 450 ಟೆಸ್ಟ್ ವಿಕೆಟ್‌ಗಳನ್ನು ಪಡೆದ ದಾಖಲೆ ಮಾಡಿದ್ದಾರೆ. ನಾಗ್ಪುರದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮೊದಲ ವಿಕೆಟ್ ಪಡೆದ ತಕ್ಷಣ ಈ ದಾಖಲೆ ಬರೆದಿದ್ದಾರೆ. ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಗುರುವಾರ ನಾಲ್ಕು ಪಂದ್ಯಗಳ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ 450 ನೇ ಟೆಸ್ಟ್ ವಿಕೆಟ್ ಪಡೆದರು. ತಮ್ಮ 89 ನೇ ಟೆಸ್ಟ್ ಪಂದ್ಯದಲ್ಲಿ 450 ನೇ ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ಅವರ ದಾಖಲೆ ಮುರಿದಿದ್ದಾರೆ. 

ಇದನ್ನೂ ಓದಿ : IND vs AUS 1st Test : ದ್ವಿಶತಕ ಸಿಡಿಸಿದ ಈ ಆಟಗಾರನಿಗೆ ಟೀಂನಲ್ಲಿ ಸ್ಥಾನ ನೀಡದೆ ಅನ್ಯಾಯ!

ವಿಕೆಟ್‌ಗಳ ದಾಖಲೆ :
ತನ್ನ 80 ನೇ ಟೆಸ್ಟ್ ಪಂದ್ಯದಲ್ಲಿ ಸಾಧನೆ ಮಾಡಿದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ತನ್ನ 450 ನೇ ಟೆಸ್ಟ್ ವಿಕೆಟ್ ಅನ್ನು ತಲುಪಿದ ವಿಶ್ವದ ಎರಡನೇ ವೇಗದ ಬೌಲರ್ ಆಗಿ ಆರ್ ಅಶ್ವಿನ್ ಹೊರ ಹೊಮ್ಮಿದ್ದಾರೆ.  ಆಸ್ಟ್ರೇಲಿಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ  ವವಿಕೆಟ್ ಪಡೆಯುವ ಮೂಲಕ ಅಶ್ವಿನ್ ಟೆಸ್ಟ್ ಪಂದ್ಯದಲ್ಲಿ 450ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 

ಇದನ್ನೂ ಓದಿ : IND vs AUS: ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರರಿಗೆ ಅವಕಾಶ ನೀಡಿದ ನಾಯಕ ರೋಹಿತ್ ಶರ್ಮಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
IND vs AUS Test ravichandran ashwin breaks record by 450th wicket
News Source: 
Home Title: 

IND vs AUS : ಆಸ್ಟ್ರೇಲಿಯಾ  ವಿರುದ್ದದ ಮೊದಲ ಪಂದ್ಯದಲ್ಲಿಯೇ ಹೊಸ ದಾಖಲೆ ಬರೆದ ಆರ್. ಅಶ್ವಿನ್ !

IND vs AUS : ಆಸ್ಟ್ರೇಲಿಯಾ  ವಿರುದ್ದದ ಮೊದಲ ಪಂದ್ಯದಲ್ಲಿಯೇ ಹೊಸ ದಾಖಲೆ ಬರೆದ ಆರ್. ಅಶ್ವಿನ್ !
Yes
Is Blog?: 
No
Tags: 
Facebook Instant Article: 
Yes
Highlights: 

ನಾಗ್ಪುರದಲ್ಲಿ ನಡೆಯುತ್ತಿದೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ 

ಹೊಸ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್ 

450 ನೇ ವಿಕೆಟ್ ಪಡೆಯುವ ಮೂಲಕ  ಸಾಧನೆ 

Mobile Title: 
IND vs AUS : ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿಯೇ ಹೊಸ ದಾಖಲೆ ಬರೆದ ಆರ್. ಅಶ್ವಿನ್ !
Ranjitha R K
Publish Later: 
No
Publish At: 
Thursday, February 9, 2023 - 14:34
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No