IND Vs NZ 2nd ODI: ಭಾರತ - ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯ ರದ್ದು.!? ಕ್ರಿಕೆಟ್‌ ಫ್ಯಾನ್ಸ್ ಆತಂಕಕ್ಕೆ ಇದೇ ಕಾರಣ

IND Vs NZ 2nd ODI: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಎರಡನೇ ಏಕದಿನ ಪಂದ್ಯವನ್ನು ರಾಯ್‌ಪುರದಲ್ಲಿ ಆಡಬೇಕಿದೆ. ಅನುಭವಿ ಓಪನರ್ ರೋಹಿತ್ ಶರ್ಮಾ ಅವರ ನಾಯಕತ್ವ ವಹಿಸಿದ್ದ ತಂಡವು ಮೊದಲ ಏಕದಿನ ಪಂದ್ಯವನ್ನು ಗೆದ್ದಿದೆ ಮತ್ತು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

Written by - Chetana Devarmani | Last Updated : Jan 20, 2023, 07:17 AM IST
  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿ
  • ರಾಯ್‌ಪುರದಲ್ಲಿ ಎರಡನೇ ಏಕದಿನ ಪಂದ್ಯ
  • ಎರಡನೇ ಏಕದಿನ ಪಂದ್ಯ ರದ್ದು.!?
IND Vs NZ 2nd ODI: ಭಾರತ - ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯ ರದ್ದು.!? ಕ್ರಿಕೆಟ್‌ ಫ್ಯಾನ್ಸ್ ಆತಂಕಕ್ಕೆ ಇದೇ ಕಾರಣ  title=
IND Vs NZ

IND Vs NZ 2nd ODI: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಎರಡನೇ ಏಕದಿನ ಪಂದ್ಯವನ್ನು ರಾಯ್‌ಪುರದಲ್ಲಿ ಆಡಬೇಕಿದೆ. ಅನುಭವಿ ಓಪನರ್ ರೋಹಿತ್ ಶರ್ಮಾ ಅವರ ನಾಯಕತ್ವ ವಹಿಸಿದ್ದ ತಂಡವು ಮೊದಲ ಏಕದಿನ ಪಂದ್ಯವನ್ನು ಗೆದ್ದಿದೆ ಮತ್ತು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೈದರಾಬಾದ್‌ನಲ್ಲಿ ಆಡಿದ ಸರಣಿಯ ಮೊದಲ ಏಕದಿನ ಪಂದ್ಯವು ಹೆಚ್ಚು ಸ್ಕೋರಿಂಗ್ ಪಂದ್ಯವಾಗಿದ್ದು, ಅಂತಿಮ ಓವರ್‌ನಲ್ಲಿ ಭಾರತ ತಂಡ ಗೆದ್ದಿದೆ. ಈಗ ಎರಡೂ ತಂಡಗಳ ಆಟಗಾರರು ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಮೊದಲ ಏಕದಿನ ಪಂದ್ಯವನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಾಯಿತು. ಆ ಪಂದ್ಯದಲ್ಲಿ ಒಟ್ಟು 686 ರನ್ ಗಳಿಸಲಾಗಿದೆ. ಭಾರತವು 8 ವಿಕೆಟ್‌ಗಳಿಗೆ 349 ರನ್ ಗಳಿಸಿತು, ನಂತರ ಕಿವಿ ತಂಡವು 49.2 ಓವರ್‌ಗಳಲ್ಲಿ 337 ರನ್‌ಗಳಿಗೆ ಆಲ್‌ ಔಟ್‌ ಆಯಿತು. 

ಇದನ್ನೂ ಓದಿ : IND vs NZ ಸರಣಿಯ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಹೊರಬಿತ್ತು ಬಿಗ್ ನ್ಯೂಸ್!

ರಾಯ್‌ಪುರದಲ್ಲಿ ಹವಾಮಾನ ಖಳನಾಯಕನಾಗುತ್ತದೆಯೇ?

ಛತ್ತೀಸ್‌ಗಡದ ರಾಯ್‌ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಎರಡನೇ ಏಕದಿನ ಪಂದ್ಯವನ್ನು ಜನವರಿ 21 ರಂದು ನಿಗದಿಪಡಿಸಲಾಗಿದೆ. ಭಾರತ ಈ ಪಂದ್ಯವನ್ನು ಸಹ ಗೆದ್ದರೆ ಸರಣಿಯನ್ನು ವಶಪಡಿಸಿಕೊಂಡತ್ತಾಗುತ್ತದೆ. ಆದರೆ ಈ ಮಧ್ಯೆ ಕ್ರಿಕೆಟ್ ಅಭಿಮಾನಿಗಳ ಚಿಂತೆಗೆ ಕಾರಣವಾಗಿರುವುದು ಹವಾಮಾನದ ವಿಚಾರ. ಈ ಪಂದ್ಯಕ್ಕೆ ಹವಾಮಾನ ಸಾಥ್‌ ಕೊಡದಿದ್ದರೆ ಎಂಬ ಚಿಂತೆ ಕ್ರಿಕೆಟ್‌ ಅಭಿಮಾನಿಗಳನ್ನ ಕಾಡುತ್ತಿತ್ತು. 

AQUEDER.COM ಪ್ರಕಾರ, ರಾಯ್‌ಪುರದ ಗರಿಷ್ಠ ತಾಪಮಾನವು ಜನವರಿ 21 ರಂದು 32 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪಬಹುದು. ಅದೇ ಸಮಯದಲ್ಲಿ, ರಾತ್ರಿಯಲ್ಲಿ ತಾಪಮಾನವು 16 ° C ಗೆ ಬೀಳಬಹುದು. ಮ್ಯಾಚ್‌ ದಿನ ಅಥವಾ ಅದಕ್ಕೂ ಮೊದಲು ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಊಹಿಸಲಾಗಿದೆ. ಆದ ಕಾರಣ ಹವಾಮಾನವು ಆಟದಲ್ಲಿ ಅಡಚಣೆಯಾಗುವುದಿಲ್ಲ ಎಂಬುದು ಅಭಿಮಾನಿಗಳಿಗೆ ಸಂತೋಷದ ವಿಷಯವಾಗಿದೆ. 

ಪಿಚ್ ರಿಪೋರ್ಟ್‌ ಇಲ್ಲಿದೆ : 

ರಾಯ್‌ಪುರದ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡುವುದಾದರೆ, ಇದು ಬ್ಯಾಟ್ಸ್‌ಮನ್‌ಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಬೌಲರ್‌ಗಳು ಸಹ ಈ ಪಿಚ್‌ನ ಸಹಾಯ ಪಡೆಯುತ್ತಾರೆ. ಸ್ಪೀಡ್‌ ಬಾಲ್ ಮತ್ತು ಬೌನ್ಸ್ ಎರಡನ್ನೂ ಪಡೆಯಬಹುದು. ಬಿಸಿಸಿಐ ಪಿಚ್ ಕ್ಯುರೇಟರ್ ಸುನಿಲ್ ಚೌಹಾನ್ ಅವರನ್ನು ಹಿಮಾಚಲ ಪ್ರದೇಶದಿಂದ ರಾಯ್‌ಪುರಕ್ಕೆ ವೀಕ್ಷಕರಾಗಿ ಕಳುಹಿಸಿದೆ. 

ಇದನ್ನೂ ಓದಿ : Shubhman Gill: ಶುಭ್ಮನ್ ದ್ವಿಶತಕ ಬಾರಿಸಲು ಈ ಆಟಗಾರ ಮಾಡಿದ್ದ ಮಹಾತ್ಯಾಗ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News