ಐಪಿಎಲ್ 2018:ನೂತನ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ

    

Last Updated : Apr 18, 2018, 09:12 AM IST
ಐಪಿಎಲ್ 2018:ನೂತನ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ

ನವದೆಹಲಿ: ಆರ್ ಸಿ ಬಿ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನ್ನುವ ನೂತನ ದಾಖಲೆ ನಿರ್ಮಿಸಿದ್ದಾರೆ. 

ಇದರೊಂದಿಗೆ, ಅವರು  ಚೆನ್ನೈ ಬ್ಯಾಟ್ಸ್ಮನ್ ಸುರೇಶ್ ರೈನಾ ದಾಖಲೆಯನ್ನು ಮೀರಿಸಿದ್ದಾರೆ. ಚೆನ್ನೈ ತಂಡದ ರೈನಾ 163 ಪಂದ್ಯಗಳಲ್ಲಿ 4558 ರನ್ ಗಳಿಸಿದ್ದರು. ಈಗ ಕೊಹ್ಲಿ 4590 ರನ್ ಗಳಿಸಿದ್ದಾರೆ. 2017ರಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್ ಮಾದರಿಯಲ್ಲಿ 68.73 ರ ಸರಾಸರಿಯಲ್ಲಿ 2500 ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇತ್ತೀಚಿಗೆ ಅವರಿಗೆ ವಿಸ್ಡೆನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಯೂ ದೊರೆತಿತ್ತು.

ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಉತ್ತಮ ಪ್ರದರ್ಶನದ ಹೊರತಾಗಿಯೂ ಬೆಂಗಳೂರು ತಂಡವು ಮುಂಬೈ ವಿರುದ್ದ  ಸೋತಿದೆ.ತಾಂತ್ರಿಕವಾಗಿ ವಿರಾಟ್ ಕೊಹ್ಲಿ ಫಿಟ್ ಆಗಿರುವುದರಿಂದ  ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಪ್ರಾರಮ್ಯ ಮೆರೆದಿದ್ದಾರೆ. ಅಲ್ಲದೆ ಅತಿ ಹೆಚ್ಚು ಸಿಕ್ಸ್ ಹೊಡೆದಿರುವ ಆಟಗಾರರಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ.ಮೊದಲೆರಡು ಸ್ಥಾನಗಳನ್ನು ರೈನಾ ಮತ್ತು ರೋಹಿತ್ ಶರ್ಮಾ ಪಡೆದಿದ್ದಾರೆ. 

More Stories

Trending News