ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಗೆಲುವಿನ ಶುಭಾರಂಭಗೈದ ಲಕ್ಷ್ಯ ಸೇನ್‌

ಕೊರಿಯಾದ ಚೋಯ್ ಜಿ ಹೂನ್ ವಿರುದ್ಧ 14-21, 21-16, 21-18 ಪಾಯಿಂಟ್‌ಗಳ ಅಂತರದಿಂದ ಲಕ್ಷ್ಯ ಸೇನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.   

Written by - Zee Kannada News Desk | Edited by - Zee Kannada News Desk | Last Updated : Apr 5, 2022, 12:02 PM IST
  • ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಆರಂಭ
  • ಭಾರತದ ಶಟ್ಲರ್‌ ಲಕ್ಷ್ಯ ಸೇನ್‌ ಗೆಲುವಿನ ಶುಭಾರಂಭ
  • ಶಟ್ಲರ್‌ ಪಿ.ವಿ.ಸಿಂಧು ಆಟದ ಮೇಲೂ ಎಲ್ಲರ ಚಿತ್ತ
 ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಗೆಲುವಿನ ಶುಭಾರಂಭಗೈದ ಲಕ್ಷ್ಯ ಸೇನ್‌ title=
Lakshya Sen

ಸಂಚಿಯಾನ್‌:  ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ (Korea Open Badminton) ಇಂದಿನಿಂದ  ಪ್ರಾರಂಭವಾಗಿದ್ದು, ಭಾರತದ ಶಟ್ಲರ್‌ ಲಕ್ಷ್ಯ ಸೇನ್‌ ಗೆಲುವಿನ ಶುಭಾರಂಭ ಮಾಡಿದ್ದಾರೆ. ಕೊರಿಯಾದ ಚೋಯ್ ಜಿ ಹೂನ್ ವಿರುದ್ಧ 14-21, 21-16, 21-18 ಪಾಯಿಂಟ್‌ಗಳ ಅಂತರದಿಂದ ಲಕ್ಷ್ಯ ಸೇನ್‌ (Lakshya Sen) ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. 

ಇದನ್ನೂ ಓದಿ: Orleans Masters:ಓರ್ಲಿಯನ್ಸ್ ಮಾಸ್ಟರ್ಸ್- ತೋಮಾ ವಿನ್ನರ್‌, ಬೆಳ್ಳಿಗೆ ತೃಪ್ತಿಪಟ್ಟ ಮಿಥುನ್

ಇನ್ನು ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಆಟದ ಮೇಲೂ ಎಲ್ಲರ ಚಿತ್ತವಿದೆ. ಈ ಹಿಂದೆ 2017ರಲ್ಲಿ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದು ಭಾರತ ಈವರೆಗೆ ಟೂರ್ನಿಯಲ್ಲಿ ಗೆದ್ದಿರುವ ಏಕೈಕ ಚಿನ್ನದ ಪದಕ ಇದಾಗಿದೆ. 

ಕೊರಿಯಾದ ಪಾಲ್ಮಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಒಂದು ಗಂಟೆ ಎರಡು ನಿಮಿಷಗಳ ಕಾಲ ಸೆಣಸಾಡಿದ ಇಬ್ಬರೂ ಭರ್ಜರಿ ಕ್ರೀಡಾ ಪ್ರದರ್ಶನ ನೀಡಿದ್ದರು. 

ಇದನ್ನೂ ಓದಿ: IPL 2022, SRH vs LSG: ಇಂದು ಹೈದರಾಬಾದ್ & ಲಕ್ನೋ ಸೆಣಸಾಟ, ಯಾರಿಗೆ ಗೆಲುವು..?

ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌, ಮಾಳವಿಕಾ ಬನ್ಸೋದ್‌, ಶ್ರೀ ಕೃಷ್ಣ ಪ್ರಿಯಾ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಕಿರಣ್‌ ಜಾರ್ಚ್‌, ಸೌರಭ್‌ ವರ್ಮಾ ಹಾಗೂ ಪಾರುಪಳ್ಳಿ ಕಶ್ಯಪ್‌ ಕೂಡಾ ಕಣದಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News