close

News WrapGet Handpicked Stories from our editors directly to your mailbox

'ಗುಡ್ ಫ್ರೆಂಡ್ ' ವಿರಾಟ್ ಕೊಹ್ಲಿ ಔಟ್ ಮಾಡುವತ್ತ ಮೊಯಿನ್ ಅಲಿ ಚಿತ್ತ..!

ಭಾನುವಾರ ಭಾರತ -ಇಂಗ್ಲೆಂಡ್ ನಡುವಿನ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.ಈ ಹಿನ್ನಲೆಯಲ್ಲಿ ಈಗ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಮೊಯಿನ್ ಅಲಿ ವಿರಾಟ್ ಕೊಹ್ಲಿ ವಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

Updated: Jun 29, 2019 , 03:08 PM IST
'ಗುಡ್ ಫ್ರೆಂಡ್ ' ವಿರಾಟ್ ಕೊಹ್ಲಿ ಔಟ್ ಮಾಡುವತ್ತ ಮೊಯಿನ್ ಅಲಿ ಚಿತ್ತ..!
file photo

ನವದೆಹಲಿ: ಭಾನುವಾರ ಭಾರತ -ಇಂಗ್ಲೆಂಡ್ ನಡುವಿನ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.ಈ ಹಿನ್ನಲೆಯಲ್ಲಿ ಈಗ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಮೊಯಿನ್ ಅಲಿ ವಿರಾಟ್ ಕೊಹ್ಲಿ ವಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಅಂಡರ್-19 ನಿಂದಲೂ ಚಿರಪರಿಚಿತರಾಗಿರುವ ಮೊಯಿನ್ ಅಲಿ ಹಾಗೂ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈಗ ದಿ ಗಾರ್ಡಿಯನ್ ಗೆ ಬರೆದಿರುವ ಅಂಕಣದಲ್ಲಿ ಮೊಯಿನ್ ಅಲಿ" ವಿರಾಟ್ ಕೊಹ್ಲಿ ಭಾರತದ ಪರವಾಗಿ ರನ್ ಗಳಿಸಲಿಕ್ಕೆ ಇರುವುದು, ಆದರೆ ನಾನು ಅವರನ್ನು ಔಟ್ ಮಾಡುವೆ ಎಂದು ಹೇಳಿದ್ದಾರೆ"

ಇನ್ನು ಮುಂದುವರೆದು 'ಐಪಿಲ್ ನಲ್ಲಿ ವಿರಾಟ್ ಕೊಹ್ಲಿ ಜೊತೆ ಆಡಿದ್ದೇನೆ. ಅಂಡರ್-19 ಕ್ರಿಕೆಟ್ ನಿಂದಲೂ ನಮಗೆ ಪರಸ್ಪರ ಪರಿಚಯವಿದೆ. ಕೆಲವು ವರ್ಷಗಳಿಂದ ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವುದರಿಂದ ಉತ್ತಮ ಫ್ರೆಂಡ್ಸ್ ಆಗಿದ್ದೇವೆ. ಅವರೊಬ್ಬ ಸ್ಪೂರ್ತಿದಾಯಕ ಹಾಗೂ ಅರ್ಪಣಾ ಮನೋಭಾವದ ಆಟಗಾರ' ಎಂದು ಮೊಯಿನ್ ಅಲಿ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

ಈ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಇಂಗ್ಲೆಂಡ್ ಈಗ ಸತತವಾಗಿ ಪಂದ್ಯಗಳನ್ನು ಸೋತಿರುವ ಹಿನ್ನಲೆಯಲ್ಲಿ ಈಗ ಉಳಿದ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಹಿನ್ನಲೆಯಲ್ಲಿ ಈಗ ಭಾರತ ತಂಡದ ವಿರುದ್ಧದ ಭಾನುವಾರದ ಪಂದ್ಯ ನಿರ್ಣಾಯಕವಾಗಿದೆ. ಇನ್ನೊಂದೆಡೆಗೆ ಭಾರತ ತಂಡವು ಈ ಪಂದ್ಯವನ್ನು ಗೆದ್ದದ್ದೆ ಆದಲ್ಲಿ ಸೆಮಿಫೈನಲ್ ಗೆ ಪ್ರವೇಶಿಸಲಿದೆ.