ನವದೆಹಲಿ: ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2021ರ ಟೂರ್ನಿಯ 9 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ವಿರುದ್ಧ 13 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.ಮುಂಬೈ ಪರವಾಗಿ ಡಿಕಾಕ್ 40,ರೋಹಿತ್ ಶರ್ಮಾ 32, ಪೋಲ್ಲಾರ್ದ್ 35 ರನ್ ಗಳಿಸುವುದರ ಮೂಲಕ ತಂಡಕ್ಕೆ ಆಸರೆಯಾದರು. ಹೈದರಾಬಾದ್ ಪರವಾಗಿ ವಿಜಯ ಶಂಕರ್ ಹಾಗೂ ಮುಜೀಬ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
ಇದನ್ನೂ ಓದಿ: Punjab vs Chennai, 8th Match: ಚೆನ್ನೈಗೆ ಸೂಪರ್ ಗೆಲುವು ತಂದಿತ್ತ ದೀಪಕ್ ಚಹಾರ್
That's that from Match 9 of #VIVOIPL.
Stupendous bowling performance from @mipaltan as they bowl out #SRH for 137 and win by 13 runs.
Scorecard - https://t.co/9qUSq70YpW #MIvSRH pic.twitter.com/4NOFJqVUqA
— IndianPremierLeague (@IPL) April 17, 2021
151 ರನ್ ಗಳ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡವು ಉತ್ತಮ ಆರಂಭವನ್ನೇ ಕಂಡಿತು. ಒಂದು ಹಂತದಲ್ಲಿ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ ಸ್ಟೋ ಕ್ರಮವಾಗಿ 36 ಹಾಗೂ 43 ರನ್ ಗಳಿಸುವ ಮೂಲಕ ಮೊದಲ ವಿಕೆಟ್ ಗೆ 67 ರನ್ ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದ್ದರು. ಆದರೆ ಇವರ ಜೊತೆಯಾಟ ಮುರಿದ ನಂತರ ವಿಜಯ್ ಶಂಕರ್ 28 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಕೂಡ 20 ಗಡಿ ದಾಟಲಿಲ್ಲ. ಕೊನೆಗೆ 19.4 ಓವರ್ ಗಳಲ್ಲಿ 137 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಇದನ್ನೂ ಓದಿ: Rajasthan vs Delhi, 7th Match: ರಾಜಸ್ಥಾನ ರಾಯಲ್ಸ್ ಗೆ 3 ವಿಕೆಟ್ ಗಳ ರೋಚಕ ಗೆಲುವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.