Punjab vs Chennai, 8th Match: ಚೆನ್ನೈಗೆ ಸೂಪರ್ ಗೆಲುವು ತಂದಿತ್ತ ದೀಪಕ್ ಚಹಾರ್

 ವಾಂಖೆಡನಲ್ಲಿ ನಡೆದ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಚೆನ್ನೈ ತಂಡವು ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

Last Updated : Apr 16, 2021, 11:39 PM IST
  • ವಾಂಖೆಡನಲ್ಲಿ ನಡೆದ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಚೆನ್ನೈ ತಂಡವು ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
Punjab vs Chennai, 8th Match: ಚೆನ್ನೈಗೆ ಸೂಪರ್ ಗೆಲುವು ತಂದಿತ್ತ  ದೀಪಕ್ ಚಹಾರ್

ನವದೆಹಲಿ: ಮುಂಬೈನಲ್ಲಿನ ವಾಂಖೆಡನಲ್ಲಿ ನಡೆದ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಚೆನ್ನೈ ತಂಡವು ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಕ್ಷೇತ್ರರಕ್ಷಣೆ ಆರಿಸಿಕೊಂಡ ಚೆನ್ನೈ ತಂಡವು ಪಂಜಾಬ್ ತಂಡವನ್ನು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ106 ರನ್ ಗಳಿಗೆ ಕಟ್ಟಿ ಹಾಕಿತು. ಪಂಜಾಬ್ ತಂಡದ ಪರವಾಗಿ ಶಾರುಖ್ ಖಾನ್ 47 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಕೂಡ 20 ರ ಗಡಿ ದಾಟಲಿಲ್ಲ.ಇನ್ನೊಂದೆಡೆಗೆ ಚೆನ್ನೈ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ದೀಪಕ್ ಚಹಾರ್ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಇದಾದ ನಂತರ 107 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಗೆಲುವಿನ ಗುರಿಯನ್ನು 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ತಲುಪಿತು. ದುಪ್ಲೆಸಿಸ್ 36 ಹಾಗೂ ಮೊಯಿನ್ ಅಲಿ 46 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ತಡ ಸೇರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News