Virat Kohli Controversial Out and Explain: ಇಂದು ಐಪಿಎಲ್ 2024ರ 36 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 222 ರನ್ ಗಳಿಸಿತ್ತು.
223 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿಗೆ, ವಿರಾಟ್ ಉತ್ತಮ ಆರಂಭ ನೀಡಿದ್ದರು. ಕೇವಲ 6 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 18 ರನ್ ಗಳಿಸಿದ್ದರು. ಆದರೆ ಮೂರನೇ ಓವರ್’ನಲ್ಲಿ ಬೌಲಿಂಗ್’ಗೆ ಬಂದ ಹರ್ಷಿತ್ ರಾಣಾ, ವಿರಾಟ್ ವಿಕೆಟ್ ಕಿತ್ತರು. ಈ ಸಂದರ್ಭದಲ್ಲಿ ವಿರಾಟ್ ನೋ ಬಾಲ್ ರಿವ್ಯೂ ತೆಗೆದುಕೊಂಡರು. ಥರ್ಡ್ ಅಂಪೈರ್ ತೋರಿಸಿದಾಗ, ಚೆಂಡು ಸೊಂಟದ ಮೇಲಿರುವಂತೆ ಕಂಡುಬಂದಿತು. ಆದರೂ ನಿರ್ಧಾರ ವಿರಾಟ್ ಪರವಾಗಿ ಇರಲಿಲ್ಲ. ಇದಕ್ಕೆ ಕೋಪಗೊಂಡ ಕೊಹ್ಲಿ ಅಂಪೈರ್ ಜೊತೆ ವಾದ ಮಾಡಿದ್ದಾರೆ.
ಇದನ್ನೂ ಓದಿ: ಸೂಪರ್ಮ್ಯಾನ್ ಥರ ಹಾರಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದ ಕ್ಯಾಮರೂನ್ ಗ್ರೀನ್: ವಿರಾಟ್ ಕೊಹ್ಲಿ ಫುಲ್ ಶಾಕ್! ಈ ವಿಡಿಯೋ ನೋಡಿ
ಇದೀಗ ಈ ವಿಷಯ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಕೆಲವರು ಇದು ಔಟ್ ಎಂದರೆ, ಇನ್ನೂ ಕೆಲವರು ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ವಿಷಯ ವಿಮರ್ಶೆ ಮಾಡಿದಾಗ ಕ್ರಿಕೆಟ್ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.
ಐಸಿಸಿ ನಿಯಮ 41.7 ರ ಪ್ರಕಾರ 'Bowling of dangerous and unfair non-pitching deliveries': ಕ್ರೀಸ್’ನಲ್ಲಿ ನೇರವಾಗಿ ನಿಂತಿರುವ ಸ್ಟ್ರೈಕರ್ (ಬ್ಯಾಟರ್)ನ ಸೊಂಟದ ಎತ್ತರಕ್ಕೆ, ಪಿಚ್ ಮಾಡದೆಯೇ ಅಥವಾ ಪಿಚ್ ಮಾಡಿ ಹಾದುಹೋಗುವ ಬಾಲ್ ಅನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಸ್ಟ್ರೈಕರ್’ನ ಮೇಲೆ ದೈಹಿಕ ಗಾಯವನ್ನು ಉಂಟುಮಾಡುವ ಸಾಧ್ಯತೆಯಿದೆಯೋ ಅಥವಾ ಇಲ್ಲವೋ, ಒಟ್ಟಾರೆಯಾಗಿ ಅಂತಹ ಬೌಲಿಂಗ್ ಕಂಡರೆ ಅದನ್ನು ಅಂಪೈರ್ ತಕ್ಷಣವೇ ನೋ ಬಾಲ್ ಎಂದು ಸೂಚಿಸಬಹುದು.
ಕ್ರೀಸ್’ನಲ್ಲಿ ನಿಂತಿರಬೇಕು, ಜೊತೆಗೆ ಸ್ಟ್ರೈಕರ್’ನ ಸೊಂಟಕ್ಕಿಂತ ಮೇಲೆ ಚೆಂಡು ಇರಬೇಕು ಎಂದು ಐಸಿಸಿ ನಿಯಮವು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಆದರೆ ಇಂದು ನಡೆದ ಪಂದ್ಯದ ವೇಳೆ, ವಿರಾಟ್ ಕ್ರೀಸ್’ನಿಂದ ಹೊರಗಿದ್ದು, ದುರಾದೃಷ್ಟ ಎಂಬಂತೆ ಔಟ್ ಆಗಿದ್ದಾರೆ.
ಇದನ್ನೂ ಓದಿ: ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?
ಇನ್ನು ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಕೇವಲ 7 ಎಸೆತಗಳಲ್ಲಿ 18 ರನ್ ಗಳಿಸಿ ಅವರು, 1 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.