ಪ್ಯಾರಿಸ್‌ ಒಲಂಪಿಕ್ಸ್‌ 2024: ಭಾರತೀಯ ಅಥ್ಲೆಟ್ಸ್‌ ಪಟ್ಟಿ ರಿಲೀಸ್‌..!

Paris Olympics 2024: ಇಡೀ ಜಗತ್ತು ಕುತೂಹಲದಿಂದ ಕಾಯುವ ಬಹು ನಿರೀಕ್ಷಿತ ಪ್ರಾರಿಸ್‌ ಒಲಂಪಿಕ್ಸ್‌ 2024 ಗೆ ವೇದಿಕೆ ಸಜ್ಜಾಗಿದೆ. ಇನ್ನೂ, ಕೇವಲ 17 ದಿನಗಳಲ್ಲಿ ಈ ಕಾಯುವಿಕೆಗೆ ತೆರೆ ಬೀಳಲಿದೆ.  

Written by - Zee Kannada News Desk | Last Updated : Jul 9, 2024, 07:50 AM IST
  • 17 ದಿನಗಳಲ್ಲಿ ಪ್ಯಾರಿಸ್‌ ಒಲಂಪಿಕ್ಸ್‌ 2024 ಶುರುವಾಗಲಿದೆ.
  • ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿ ಅಚಂತಾ ಶರತ್ ಮತ್ತು ಪಿವಿ ಸಿಂಧು ಕಾರ್ಯನಿರ್ವಹಿಸಲಿದ್ದಾರೆ.
  • ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್‌ನಲ್ಲಿ ಅರ್ಹತೆ ಪಡೆದ ಭಾರತದ ಆಟಗಾರರು ಈ ಬಾರಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.
ಪ್ಯಾರಿಸ್‌ ಒಲಂಪಿಕ್ಸ್‌ 2024: ಭಾರತೀಯ ಅಥ್ಲೆಟ್ಸ್‌ ಪಟ್ಟಿ ರಿಲೀಸ್‌..! title=

Paris Olympics 2024: ಇಡೀ ಜಗತ್ತು ಕುತೂಹಲದಿಂದ ಕಾಯುವ ಬಹು ನಿರೀಕ್ಷಿತ ಪ್ಯಾರಿಸ್‌ ಒಲಂಪಿಕ್ಸ್‌ 2024 ಗೆ ವೇದಿಕೆ ಸಜ್ಜಾಗಿದೆ. ಇನ್ನೂ, ಕೇವಲ 17 ದಿನಗಳಲ್ಲಿ ಈ ಕಾಯುವಿಕೆಗೆ ತೆರೆ ಬೀಳಲಿದೆ.

ಜುಲೈ 26 ರಿಂದ ಆಗಸ್ಟ್‌ 11 ರವರೆಗೆ ಪ್ಯಾರಿಸ್‌ ಒಲಂಪಿಕ್ಸ್‌ ನಡೆಯಲಿದ್ದು, 32 ಕ್ರೀಡೆಗಳಲ್ಲಿ 329 ಸ್ಪರ್ಧಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಹಾಗಾದರೆ ಯಾವೆಲ್ಲಾ ಭಾರತ ಕ್ರೀಡಾಪಟುಗಳು ಒಲಂಪಿಕ್ಸ್‌ಗೆ ಆರ್ಹತೆ ಪಡೆದಿದ್ದಾರೆ? ತಿಳಿಯಲು ಮುಂದೆ ಓದಿ....

1920 ರಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳು, 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿ ಅಚಂತಾ ಶರತ್ ಮತ್ತು ಪಿವಿ ಸಿಂಧು ಕಾರ್ಯನಿರ್ವಹಿಸಲಿದ್ದಾರೆ. 

ಇದನ್ನೂ ಓದಿ: ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿ: ತಂಡಕ್ಕೆ ರೋಹಿತ್‌, ಕೊಹ್ಲಿ ರೀ ಎಂಟ್ರಿ..!

ಇನ್ನೂ, ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 124 ಅಥ್ಲೀಟ್‌ಗಳು ಕಣಕ್ಕೆ ಇಳಿದಿದ್ದರೆ, ಈ ಬಾರಿ ಈ ಸಂಖ್ಯೆ 111ಕ್ಕೆ ಇಳಿದಿದೆ. ಕ್ರೀಡೆಗಳ ಸಂಖ್ಯೆಯೂ 18ರಿಂದ 16ಕ್ಕೆ ಇಳಿದಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್‌ನಲ್ಲಿ ಅರ್ಹತೆ ಪಡೆದ ಭಾರತದ ಆಟಗಾರರು ಈ ಬಾರಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕಗಳನ್ನು ಗೆದ್ದಿದ್ದು, ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಮೀರಾಭಾಯಿ ಚಾನು ಮತ್ತು ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಿವಿ ಸಿಂಧು, ಲೊವ್ಲಿನಾ ಬೊರ್ಗೊಹೈನ್ ಮತ್ತು ಬಜರಂಗ್ ಪುನಿಯಾ ಕಂಚಿನ ಪದಕ ಪಡೆದಿದ್ದರು.

ಇದನ್ನೂ ಓದಿ: ವಿಸ್ವಕಪ್‌ ಗೆದ್ದು ಮನೆಗೆ ಮರಳಿದ ಪಾಂಡ್ಯ..! ಮಗನನ್ನು ಬಿಗಿದಪ್ಪಿ ಭಾವುರಾದ ಹಾರ್ದಿಕ್‌..?

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳು:

• ಅಥ್ಲೆಟಿಕ್ಸ್
ಪುರುಷರ 20 ಕಿ.ಮೀ ಓಟದ ನಡಿಗೆ
ಆಕಾಶದೀಪ್ ಸಿಂಗ್, ವಿಕಾಸ್ ಸಿಂಗ್, ಪರಮ್‌ಜೀತ್ ಬಿಶ್ತ್, ರಾಮ್ ಬಾಬು

• ಮಹಿಳೆಯರ 20 ಕಿ.ಮೀ ಓಟದ ನಡಿಗೆ
 ಪ್ರಿಯಾಂಕಾ ಗೋಸ್ವಾಮಿ

• ಪುರುಷರ 3000ಮೀ ಸ್ಟೀಪಲ್ ಚೇಸ್
  ಅವಿನಾಶ್ ಸೇಬಲ್

• ಮಹಿಳೆಯರ 3000ಮೀ ಸ್ಟೀಪಲ್‌ಚೇಸ್
  ಪಾರುಲ್ ಚೌಧರಿ

• ಪುರುಷರ ಲಾಂಗ್ ಜಂಪ್
  ಮುರಳಿ ಶ್ರೀಶಂಕರ್ 

• ಪುರುಷರ ಜಾವೆಲಿನ್ ಥ್ರೋ
  ನೀರಜ್ ಚೋಪ್ರಾ

• ಪುರುಷರ ಜಾವೆಲಿನ್ ಥ್ರೋ
  ಕಿಶೋರ್ ಜೆನಾ

• ಮ್ಯಾರಥಾನ್ ರೇಸ್ ವಾಕ್ ಮಿಶ್ರ ರಿಲೇ
  ಪ್ರಿಯಾಂಕಾ ಗೋಸ್ವಾಮಿ, ಅರ್ಷದೀಪ್ ಸಿಂಗ್

• ಪುರುಷರ 4X100ಮೀ ರಿಲೇ
  ಮುಹಮ್ಮದ್ ಅನಸ್, ಮುಹಮ್ಮದ್ ಅಜ್ಮಲ್, ಅರೋಕಿಯಾ, ಅಮೋಜ್ ಜಾಕೋಬ್ 

•  ಮಹಿಳೆಯರ 4X400ಮೀ ರಿಲೇ
   ರೂಪಲ್, ಜ್ಯೋತಿಕಾ, ಪೂವಮ್ಮ, ಶುಭಾ ವೆಂಕಟೇಶ್ 

•  ಮಹಿಳೆಯರ 400 ಮೀ
   ಕಿರಣ್ ಪಹಲ್

•  ಬಿಲ್ಲುಗಾರಿಕೆ

   ಧೀರಜ್ ಬೊಮ್ಮದೇವರ, ಭಜನ್ ಕೌರ್, ತರುಣ್‌ದೀಪ್ ರಾಯ್, ಪ್ರವೀಣ್ ಜಾಧವ್, ದೀಪಿಕಾ ಕುಮಾರಿ, ಅಂಕಿತಾ ಭಕತ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News