Azam Khan: ಹಮಾಸ್​ಗೆ ಬೆಂಬಲ ನೀಡಿದ ಪಾಕ್​ ಆಟಗಾರನಿಗೆ ಪಾಕಿಸ್ತಾನದಲ್ಲೇ ಶಿಕ್ಷೆ..!

Palestine Flag On Azam Khan Bat: ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಕರಾಚಿ ವೈಟ್ಸ್ ಮತ್ತು ಲಾಹೋರ್ ಬ್ಲೂಸ್ ನಡುವಿನ ಪಂದ್ಯದ ವೇಳೆ ಅಜಂಖಾನ್ ತಮ್ಮ ಬ್ಯಾಟ್‍ನಲ್ಲಿ ಪ್ಯಾಲೆಸ್ತೀನ್ ಧ್ವಜದ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು.

Written by - Puttaraj K Alur | Last Updated : Nov 27, 2023, 10:59 PM IST
  • ಹಮಾಸ್​ಗೆ ಬೆಂಬಲ ನೀಡಿದ ಪಾಕ್​ ಆಟಗಾರನಿಗೆ ಪಾಕಿಸ್ತಾನದಲ್ಲೇ ಶಿಕ್ಷೆ ನೀಡಲಾಗಿದೆ
  • ಟಿ-20 ಪಂದ್ಯದ ವೇಳೆ ಪಾಕಿಸ್ತಾನದ ಯುವ ಆಟಗಾರ ಅಜಂಖಾನ್ ಐಸಿಸಿ ನಿಯಮ ಉಲ್ಲಂಘಿಸಿದ್ದರು
  • ಅಜಂಖಾನ್ ತಮ್ಮ ಬ್ಯಾಟ್‍ನಲ್ಲಿ ಪ್ಯಾಲೆಸ್ತೀನ್ ಧ್ವಜದ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು
Azam Khan: ಹಮಾಸ್​ಗೆ ಬೆಂಬಲ ನೀಡಿದ ಪಾಕ್​ ಆಟಗಾರನಿಗೆ ಪಾಕಿಸ್ತಾನದಲ್ಲೇ ಶಿಕ್ಷೆ..! title=
ಪಾಕ್ ಆಟಗಾರನಿಗೆ ಪಾಕಿಸ್ತಾನದಲ್ಲೇ ಶಿಕ್ಷೆ..!

ನವದೆಹಲಿ: ಹಮಾಸ್​ಗೆ ಬೆಂಬಲ ನೀಡಿದ ಪಾಕ್​ ಆಟಗಾರನಿಗೆ ಪಾಕಿಸ್ತಾನದಲ್ಲೇ ಶಿಕ್ಷೆ ನೀಡಲಾಗಿದೆ. ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಟಿ-20 ಪಂದ್ಯದ ವೇಳೆ ಪಾಕಿಸ್ತಾನದ ಯುವ ಆಟಗಾರ ಅಜಂಖಾನ್ ಹಮಾಸ್ ಬೆಂಬಲಿಸಿ ಧಿರಿಸು ಮತ್ತು ಕ್ರಿಕೆಟ್ ಸಲಕರಣೆಗಳ ನಿಯಮಗಳನ್ನು ಉಲ್ಲಂಘಿಸಿದ್ದರು. ಹೀಗಾಗಿ ಪಾಕಿಸ್ತಾನದ ಕ್ರಿಕೆಟ್ ಮಂಡಳಿ (PCB) ಈ ಆಟಗಾರನಿಗೆ ಪಂದ್ಯದ ಶುಲ್ಕದ ಶೇ.50ರಷ್ಟು ದಂಡ ವಿಧಿಸಿದೆ.  

ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಕರಾಚಿ ವೈಟ್ಸ್ ಮತ್ತು ಲಾಹೋರ್ ಬ್ಲೂಸ್ ನಡುವಿನ ಪಂದ್ಯದ ವೇಳೆ ಅಜಂಖಾನ್ ತಮ್ಮ ಬ್ಯಾಟ್‍ನಲ್ಲಿ ಪ್ಯಾಲೆಸ್ತೀನ್ ಧ್ವಜದ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು. ಇದು ಕ್ರಿಕೆಟ್ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ‘ನನ್ನ ಎಲ್ಲಾ ಬ್ಯಾಟ್‍ಗಳು ಒಂದೇ ರೀತಿಯ ಸ್ಟಿಕ್ಕರ್‍ ಹೊಂದಿವೆ. ಇದು ದೊಡ್ಡ ವಿಷಯವೇ ಅಲ್ಲಾ’ ಅಂತಾ ಅಜಂಖಾನ್ ಹೇಳಿದ್ದರು.

ಇದನ್ನೂ ಓದಿ: ನಾಚುತ್ತಾ ರೊಮ್ಯಾಂಟಿಕ್ ಹಾಡು ಹಾಡಿದ ಶಮಿ ಮಾಜಿ ಪತ್ನಿ: ಯಾರಿಗೆ ಡೆಡಿಕೇಟ್ ಮಾಡ್ತೀರಾ ಎಂದಿದಕ್ಕೆ ಕೊಟ್ಟ ಉತ್ತರವೇನು ಗೊತ್ತಾ?

‘ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಯುವ ಬ್ಯಾಟ್ಸ್​ಮನ್​ಗೆ ಪಂದ್ಯದ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿದೆ. ಅಜಂಖಾನ್ ತಮ್ಮ ಬ್ಯಾಟ್‍ನಲ್ಲಿ ಪ್ಯಾಲೆಸ್ತೀನ್ ಧ್ವಜದ ಸ್ಟಿಕ್ಕರ್ ಅಂಟಿಸಿದ್ದರು. ಆದರೆ ಇದಕ್ಕೆ ಯಾವುದೇ ರೀತಿಯ ಅನುಮತಿ ಇಲ್ಲ. ಈ ಬಗ್ಗೆ ಯುವ ಆಟಗಾರನಿಗೆ ರೆಫರಿ ಎಚ್ಚರಿಕೆ ಸಹ ನೀಡಿದ್ದರು. ಆದರೆ ಅಜಂಖಾನ್ ತಮ್ಮ ತಪ್ಪನ್ನು ಪುನರಾವರ್ತನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಿಸಿಬಿ ಮೂಲಗಳು ಹೇಳಿದೆ.

ಅಜಂಖಾನ್‍ಗೆ ಪಿಸಿಬಿ ದಂಡ ವಿಧಿಸಿರುವ ಕ್ರಮವನ್ನು ಅನೇಕ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಖಂಡಿಸಿದ್ದಾರೆ. ಈ ಬಗ್ಗೆ Khurram ಎಂಬುವರು ಟ್ವೀಟ್ ಮಾಡಿದ್ದು, ‘ದೇಶೀಯ ಪಂದ್ಯದ ವೇಳೆ ತಮ್ಮ ಬ್ಯಾಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಹೊಂದಿರುವ ಸ್ಟಿಕ್ಕರ್ ಅಂಟಿಸಿದ್ದಕ್ಕೆ ಅಜಂಖಾನ್ ಅವರಿಗೆ ದಂಡ ವಿಧಿಸಲಾಗಿದೆ. ಪಿಸಿಬಿಯ ಈ ಕ್ರಮದಿಂದ ನನಗೆ ಆಶ್ಚರ್ಯವಾಗಿದೆ. #ShameOnYouZaka #ShameOnPCB. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ ಅಜಂಖಾನ್’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಜೀವಕ್ಕೆ ಅಪಾಯವಿದೆ, ಏನಾದರೂ ಸಂಭವಿಸಿದರೆ ರಾಷ್ಟ್ರಪತಿಗಳೇ ಹೊಣೆ”- ಕ್ರೀಡಾ ಸಚಿವರ ಶಾಕಿಂಗ್ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News