ಕೊಲ್ಕತ್ತಾ: ಸೆಮಿಫೈನಲ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಕನಸಿಗೆ ತೆರೆಬಿದ್ದಿದೆ. ಬಂಗಾಳ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಎರಡನೇ ಇನಿಂಗ್ಸ್ ನಲ್ಲಿ 177 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಅನುಭವಿಸಿದೆ.
ರಣಜಿ ಟ್ರೋಪಿ ಗೆಲ್ಲುವ ಪ್ರಬಲ ತಂಡವಾಗಿದ್ದ ಕರ್ನಾಟಕ ತಂಡ ಸೆಮಿಫೈನಲ್ ನ ಎರಡು ಇನಿಂಗ್ಸ್ ನಲ್ಲಿ ಕಳಪೆ ಪ್ರದರ್ಶನ ನೀಡಿದೆ.ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಕರ್ನಾಟಕ ತಂಡವು ಬಂಗಾಳ ತಂಡವು 312 ರನ್ ಗಳನ್ನು ಗಳಿಸಿತು. ಬಂಗಾಳ ಪರವಾಗಿ ಏಕಾಂಗಿ ಹೋರಾಟ ನಡೆಸಿದ ಅನುಸ್ತುಪ್ ಮಜುಮದಾರ್ ಅಜೇಯ 149 ರನ್ ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದರು.
ICYMI: Bengal pacer Mukesh Kumar's 6⃣-wicket haul against Karnataka in the @paytm #RanjiTrophy semifinal. 👏👏
Video 👇👇https://t.co/udLB5mvP7M#BENvKAR @CabCricket pic.twitter.com/qP1eVf78fC
— BCCI Domestic (@BCCIdomestic) March 3, 2020
ಇದಾದ ನಂತರ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ಕೇವಲ 122 ರನ್ ಗಳಿಗೆ ಅಲೌಟ್ ಆಯಿತು.ಕೆ ಗೌತಮ್ 31 ರನ್ ಗಳಿಸಿದ್ದೆ ಕರ್ನಾಟಕದ ಪರವಾಗಿ ಅತ್ಯಧಿಕ ಮೊತ್ತವಾಗಿತ್ತು. ಇನ್ನೊಂದೆಡೆ ಬಂಗಾಳ ತಂಡವು ಎರಡನೇ ಇನಿಂಗ್ಸ್ ನಲ್ಲಿ 161 ರನ್ ಗಳಿಗೆ ಅಲೌಟ್ ಆದರೂ ಕೂಡ ಹೆಚ್ಚಿನ ಮುನ್ನಡೆಯನ್ನು ಪಡೆಯಿತು.
ಬಂಗಾಳ ತಂಡವು ನೀಡಿದ ಗೆಲುವಿನ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಕೇವಲ177 ರನ್ ಗಳಿಗೆ ಆಲೌಟ್ ಆಗುವ ಮೂಲಕ ರಣಜಿ ಫೈನಲ್ ತಲುಪುವ ಕನಸು ಭಗ್ನವಾಯಿತು.ಇನ್ನೊಂದೆಡೆ ಬಂಗಾಳ ತಂಡವು 177 ರನ್ ಗಳಿಂದ ಸೆಮಿಫೈನಲ್ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದೆ.