Hanuma Vihari: ರಣಜಿ ಟ್ರೋಫಿ ಎಲೈಟ್ ಕ್ವಾರ್ಟರ್‌ಫೈನಲ್‌ನ ಆರಂಭಿಕ ದಿನದಂದು ವಿಹಾರಿಗೆ ಗಾಯವಾಗಿದೆ. ಮಧ್ಯ ಪ್ರದೇಶ ನಡುವೆ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಈ ಗಾಯವಾಗಿದೆ. ಬಳಿಕ 37 ಎಸೆತದಲ್ಲಿ 16 ರನ್ ಗಳಿಸಿ ಅವರು ಔಟ್ ಆಗಿದ್ದಾರೆ. ನಂತರ ನಡೆಸಿದ ಸ್ಕ್ಯಾನಿಂಗ್ ನಲ್ಲಿ ಅವರ ಕೈ ಮೂಳೆ ಮುರಿತಗೊಂಡಿದೆ ಎಂದು ತಿಳಿದುಬಂದಿದೆ.
Mumbai vs Delhi : ಭಾರತ ಕ್ರಿಕೆಟ್ ತಂಡ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ಆಡಲಾಗಿತ್ತು. ತಂಡದ ನಾಯಕತ್ವವನ್ನು ಆರಂಭಿಕ ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದಾರೆ. ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 12 ರನ್‌ಗಳಿಂದ ಗೆದ್ದುಕೊಂಡಿದೆ.
Mumbai vs Delhi Ranji Trophy 2023: ಯಶ್ ಧುಲ್ ಅನಾರೋಗ್ಯಕ್ಕೆ ಒಳಗಾದ ಕಾರಣ ಸಾಂಪ್ರದಾಯಿಕ ಎದುರಾಳಿ ಮುಂಬೈ ವಿರುದ್ಧದ ಬಿ ಗುಂಪಿನ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದಾರೆ. ಡೆಲ್ಲಿ ತಂಡ ನಾಕೌಟ್ ರೇಸ್ ನಿಂದ ಹೊರಬಿದ್ದಿದ್ದು, ಧುಲ್ ಅನುಪಸ್ಥಿತಿಯಲ್ಲಿ ಉಪನಾಯಕ ಹಿಮ್ಮತ್ ಸಿಂಗ್ ತಂಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ. ಹಿಮ್ಮತ್ ಸಿಂಗ್ ಗೆ ಈಗ 26 ವರ್ಷ ವಯಸ್ಸಾಗಿದ್ದು, ಸ್ಫೋಟಕ ಬ್ಯಾಟಿಂಗ್ ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಸಂಭಾವ್ಯ ಆಯ್ಕೆಗಳ ಕೊರತೆಯಿಂದಾಗಿ ಈಗ ಮಾಜಿ ನಾಯಕ ನಿತೀಶ್ ರಾಣಾ ಅವರನ್ನು ಮರಳಿ ಕರೆಯಲಾಗಿದೆ.
Ajinkya Rahane: ಮುಂಬೈ ಮತ್ತು ಅಸ್ಸಾಂ ನಡುವೆ ಗುವಾಹಟಿಯಲ್ಲಿ ರಣಜಿ ಟ್ರೋಫಿಯ ಗುಂಪು-ಬಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮುಂಬೈ ತಂಡದ ನಾಯಕತ್ವವನ್ನು ನಿಭಾಯಿಸುತ್ತಿರುವ ಅಜಿಂಕ್ಯ ರಹಾನೆ 191 ರನ್ ಗಳಿಸಿದ್ದಾರೆ. ಅವರು ಮತ್ತು ಪೃಥ್ವಿ ಶಾ ಮೂರನೇ ವಿಕೆಟ್‌ಗೆ 401 ರನ್ ಪೇರಿಸಿದ್ದರು.
Ranji Trophy : ಭಾರತೀಯ ಆಟಗಾರರು ಕ್ರಿಕೆಟ್ ನಲ್ಲಿ ವಿಶ್ವದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಆ ರೀತಿ ಪ್ರಾಬಲ್ಯ ಹೊಂದಿದೆ. ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ, ಅನೇಕ ಭಾರತೀಯ ಕ್ರಿಕೆಟಿಗರು ಈ ಆಟದ ಅಗ್ರಸ್ಥಾನದಲ್ಲಿದ್ದಾರೆ.
Ranji Trophy 2022-23: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಸಾರಥ್ಯ ವಹಿಸಿದ್ದರು. ಅವರ ನಾಯಕತ್ವದಲ್ಲಿ, ಯುವ ಆಟಗಾರ ಅಭಿಮನ್ಯು ಈಶ್ವರನ್ ಇಡೀ ಸರಣಿಯಲ್ಲಿ ಬೆಂಚ್ ಮೇಲೆ ಕುಳಿತಿರುವುದು ಕಂಡುಬಂದಿತ್ತು ಅಭಿಮನ್ಯು ಈಶ್ವರನ್ ಇನ್ನೂ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡಿಲ್ಲ. ಇದೀಗ ಬಂಗಾಳ ಪರ ಆಡುತ್ತಿರುವ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ.
Himachal Pradesh Vs Uttarakhand Ranji Trophy: ಹಿಮಾಚಲ ಪ್ರದೇಶದ ನಾಯಕ ರಿಷಿ ಧವನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಧಾರವು ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಲಿಲ್ಲ. ಹಿಮಾಚಲ ತಂಡದ ಬ್ಯಾಟಿಂಗ್ ತೀರಾ ಹದಗೆಟ್ಟಾಗ ತಂಡವು ಒಟ್ಟಾಗಿ 49 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂಕಿತ್ ಕಸೇಲಿ ಹಿಮಾಚಲ ಪರ ಅತಿ ಹೆಚ್ಚು ರನ್ (26) ಗಳಿಸಿದರು. ಇನ್ನು ಉತ್ತರಾಖಂಡ ಪರ ದೀಪಕ್ ಧಾಪೋಲ ಗರಿಷ್ಠ 8 ವಿಕೆಟ್ ಪಡೆದಿದ್ದು, ಅಭಯ್ ನೇಗಿ ಖಾತೆಗೆ 2 ವಿಕೆಟ್ ಗಳು ಸೇರಿವೆ.
Ranji Tropgy 2022: ಉತ್ತರಾಖಂಡ ವಿರುದ್ಧದ ರಣಜಿ ಪಂದ್ಯದಲ್ಲಿ ನಾಗಾಲ್ಯಾಂಡ್ ಕೇವಲ 25 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಜುಗರದ ದಾಖಲೆ ಬರೆದಿದೆ. ಇದು ಈ ದೇಶೀಯ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಆರನೇ ಅತಿ ಕಡಿಮೆ ಸ್ಕೋರ್ ಆಗಿದೆ. ಕಳೆದ 41 ವರ್ಷಗಳಲ್ಲಿ ಇದು ಎರಡನೇ ಅತಿ ಕಡಿಮೆ ಅಂಕವಾಗಿದೆ.
Arjun Tendulkar Century: ರಾಜಸ್ಥಾನ ತಂಡದ ಅರ್ಜುನ್ ತೆಂಡೂಲ್ಕರ್ ಯಾವುದೇ ಸಣ್ಣ ತಂಡದ ವಿರುದ್ಧ ಈ ಸಾಧನೆ ಮಾಡಿಲ್ಲ. ರಾಜಸ್ಥಾನ ತಂಡ ಎರಡು ಬಾರಿ ರಣಜಿ ಚಾಂಪಿಯನ್ ಆಗಿದೆ. ಅದೇ ಸಮಯದಲ್ಲಿ ಕಮಲೇಶ್ ನಾಗರಕೋಟಿ ಮಹಿಪಾಲ್ ಲೋಮ್ರೋರ್ ಅವರಂತಹ ಐಪಿಎಲ್ ಸ್ಟಾರ್ ಬೌಲರ್‌ಗಳು ತಂಡದಲ್ಲಿದ್ದಾರೆ.
Women umpires in Ranji Trophy: ವೃಂದ ರತಿ, ಜನನಿ ನಾರಾಯಣನ್ ಮತ್ತು ಗಾಯತ್ರಿ ವೇಣುಗೋಪಾಲನ್ ಅವರು ಭಾರತ-ಆಸ್ಟ್ರೇಲಿಯಾ ಮಹಿಳಾ T20I ಸರಣಿಯಲ್ಲಿ ಅಂಪೈರ್ ಗಳಾಗಿ ಮುಂದಿನ ವಾರ ಪ್ರಾರಂಭವಾಗುವ 2 ನೇ ಹಂತದಿಂದ ಆರಂಭಿಸುತ್ತಾರೆ. ಬಿಸಿಸಿಐನಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ
ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ರಣಜಿ ಟ್ರೋಫಿಯನ್ನು ಮೊದಲೇ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
Cricket News: 2022 ರ ರಣಜಿ ಟ್ರೋಫಿ (Ranji Trophy) ಪ್ರಾರಂಭವಾಗುವ ಮೊದಲೇ ಅದನ್ನು ಮುಂದೂಡಲಾಗಿದೆ. ಹಲವಾರು ಆಟಗಾರರು ಕೊರೊನಾ (Covid-19) ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿದೆ.
ನವೆಂಬರ್ 19 ರಿಂದ ಸೈಯದ್ ಮುಷ್ತಾಕ್ ಅಲಿ ಟಿ 20 ಪಂದ್ಯಾವಳಿಯೊಂದಿಗೆ ದೇಶೀಯ ಋತುವನ್ನು ಪ್ರಾರಂಭಿಸಲು ಬಿಸಿಸಿಐ ನವೆಂಬರ್ 19 ನ್ನು ತಾತ್ಕಾಲಿಕ ದಿನಾಂಕವಾಗಿ ನಿಗದಿಪಡಿಸಿದೆ.ಆದರೆ ವಿವಿಧ ಐಪಿಎಲ್ ತಂಡಗಳಲ್ಲಿನ ಭಾರತೀಯ ಆಟಗಾರರು ಕ್ಯಾರೆಂಟೈನ್ ಪ್ರೋಟೋಕಾಲ್ಗಳ ಕಾರಣದಿಂದಾಗಿ ಮೊದಲ ಕೆಲವು ಸುತ್ತುಗಳನ್ನು ಆಡಲು ಸಾಧ್ಯವಾಗುವುದಿಲ್ಲ
ಸೆಮಿಫೈನಲ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಕನಸಿಗೆ ತೆರೆಬಿದ್ದಿದೆ. ಬಂಗಾಳ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಎರಡನೇ ಇನಿಂಗ್ಸ್ ನಲ್ಲಿ 177 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಅನುಭವಿಸಿದೆ.