ಭಾರತವು ಬಲಿಷ್ಠ ತಂಡವಾಗಬಹುದು, ಆದ್ರೆ ನಾವು ದುರ್ಬಲರಲ್ಲ, ನೋಡೋಣ..!

World Cup 2023 semi final : ಭಾರತವು ಬಲಿಷ್ಠ ತಂಡವಾಗಬಹುದು, ಆದ್ರೆ ನಾವು ದುರ್ಬಲರಲ್ಲ, ದಕ್ಷಿಣ ಆಫ್ರಿಕಾ ಅವರ ಸವಾಲನ್ನು ಎದುರಿಸಲು ಸಿದ್ಧವಾಗಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ರಾಸ್ಸಿ ವಾಂಡರ್ ಡ್ಯುಸೆನ್ ಹೇಳಿದ್ದಾರೆ.

Written by - Krishna N K | Last Updated : Nov 3, 2023, 07:48 PM IST
  • ಭಾರತವು ಬಲಿಷ್ಠ ತಂಡವಾಗಬಹುದು, ಆದ್ರೆ ನಾವು ದುರ್ಬಲರಲ್ಲ
  • ದಕ್ಷಿಣ ಆಫ್ರಿಕಾ ಭಾರತದ ಸವಾಲನ್ನು ಎದುರಿಸಲು ಸಿದ್ಧವಾಗಿದೆ
  • ಬಹುನಿರೀಕ್ಷಿತ ಪಂದ್ಯದ ಕುರಿತು ರಾಸ್ಸಿ ವಾಂಡರ್ ಡ್ಯುಸೆನ್ ಹೇಳಿಕೆ
ಭಾರತವು ಬಲಿಷ್ಠ ತಂಡವಾಗಬಹುದು, ಆದ್ರೆ ನಾವು ದುರ್ಬಲರಲ್ಲ, ನೋಡೋಣ..!  title=

India vs South Africa : ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಸರಣಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಅಜೇಯ ತಂಡಗಳಾಗಿವೆ. ಒಂದೆಡೆ ಭಾರತ ತಂಡ ಎದುರಾಳಿಗಳನ್ನು ಬಗ್ಗುಬಡಿಯುತ್ತಿದ್ದರೆ, ಇನ್ನೊಂದೆಡೆ ದಕ್ಷಿಣ ಆಫ್ರಿಕಾ ನಿರ್ದಾಕ್ಷಣ್ಯವಾಗಿ ಎದುರಾಳಿಗಳನ್ನು ಮಣಿಸುತ್ತಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಎರಡು ತಂಡಗಳು ಮಾತ್ರ ಅಗ್ರಸ್ಥಾನದಲ್ಲಿವೆ. ಈ ಎರಡು ತಂಡಗಳು ಇನ್ನು 2 ದಿನಗಳಲ್ಲಿ ಮುಖಾಮುಖಿಯಾಗಲಿವೆ.

ಅಂದರೆ ನವೆಂಬರ್ 5 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎರಡೂ ತಂಡಗಳು ಬಹು-ಟೆಸ್ಟ್ ಪಂದ್ಯವನ್ನು ಆಡಲಿವೆ. ಈ ಪಂದ್ಯವನ್ನು ವಿಶ್ವಕಪ್ ಮಿನಿ-ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಈ ಎರಡು ತಂಡಗಳಲ್ಲಿ ಪ್ರಬಲ ತಂಡವು ಟ್ರೋಫಿ ಗೆಲ್ಲುವ ಹೆಚ್ಚಿನ ಅವಕಾಶವನ್ನು ಹೊಂದಿದೆ. 

ಇದನ್ನೂ ಓದಿ:ತಿರುಪತಿಗೆ ಭೇಟಿ ನೀಡಿದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್

ಬಹುನಿರೀಕ್ಷಿತ ಮ್ಯಾಚ್‌ ಕುರಿತು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ರಾಸ್ಸಿ ವಾಂಡರ್ ಡ್ಯುಸೆನ್ ಮಾತನಾಡಿ, ನಾವು ಈಗಾಗಲೇ ಭಾರತದ ನೆಲದಲ್ಲಿ ಭಾರತವನ್ನು ಸೋಲಿಸಿದ್ದೇವೆ. ಆದ್ದರಿಂದ ನಾವು ಖಂಡಿತವಾಗಿಯೂ ಅವರನ್ನು ಸೋಲಿಸಬಹುದು. ಭಾರತವು ಬಲಿಷ್ಠ ತಂಡವಾಗಬಹುದು, ಆದ್ರೆ ನಾವು ದುರ್ಬಲರಲ್ಲ, ದಕ್ಷಿಣ ಆಫ್ರಿಕಾ ಅವರ ಸವಾಲನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ತಂಡವು ಅನಿರೀಕ್ಷಿತವಾಗಿ ನೆದರ್ಲೆಂಡ್ಸ್ ವಿರುದ್ಧ ಸೋತಿತು. ಅಲ್ಲಿಂದೀಚೆಗೆ ಪುಟಿದೆದ್ದು 7 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದೆ. ಇನ್ನು ಭಾರತ ತಂಡದ ಬಗ್ಗೆ ಹೇಳುವುದಾದರೆ ಸೋಲಿನ ವಾಸನೆ ಕಾಣದ ತಂಡ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಈ ಪಂದ್ಯವನ್ನು ಯಾರು ಗೆಲ್ಲುತ್ತಾರೆ? ಅದೇ ಈಗಿನ ದೊಡ್ಡ ನಿರೀಕ್ಷೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News