RCB vs MI ಮ್ಯಾಚ್ ನಲ್ಲಿ ಔಟ್ ಆಗಿರಲಿಲ್ಲ ಕೊಹ್ಲಿ, ಆದ್ರೂ LBW ಕೊಟ್ಟಿದ್ದೇಕೆ? ಇಲ್ಲಿ ನೋಡಿ

ವಿರಾಟ್ ಕೊಹ್ಲಿ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು, ಆದರೆ ಕೊಹ್ಲಿ ಈ ಪಂದ್ಯದಲ್ಲಿ ಔಟ್ ಆಗಬೇಕಿದ್ದಿದ್ದು ಆಗಲಿಲ್ಲ. ಸಧ್ಯ ಇದರ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ. ಏನದು ಚೆರ್ಚೆ? ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Apr 10, 2022, 08:55 PM IST
  • ಗೆದ್ದು ಬಿಗಿದ ಆರ್‌ಸಿಬಿ ಗೆಲುವು ಸಾಧಿಸಿತ್ತು
  • 48 ರನ್ ಗಳಿಸಿದ ಕೊಹ್ಲಿ
  • ಮುಂಬೈ ತಂಡ ಸತತ ನಾಲ್ಕನೇ ಪಂದ್ಯದಲ್ಲಿ ಸೋಲು ಕಂಡಿದೆ
RCB vs MI ಮ್ಯಾಚ್ ನಲ್ಲಿ ಔಟ್ ಆಗಿರಲಿಲ್ಲ ಕೊಹ್ಲಿ, ಆದ್ರೂ LBW ಕೊಟ್ಟಿದ್ದೇಕೆ? ಇಲ್ಲಿ ನೋಡಿ title=

ನವದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಅಮೋಘ ಆಟ ಪ್ರದರ್ಶಿಸಿತು. RCB ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ವಿರಾಟ್ ಕೊಹ್ಲಿ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು, ಆದರೆ ಕೊಹ್ಲಿ ಈ ಪಂದ್ಯದಲ್ಲಿ ಔಟ್ ಆಗಬೇಕಿದ್ದಿದ್ದು ಆಗಲಿಲ್ಲ. ಸಧ್ಯ ಇದರ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ. ಏನದು ಚೆರ್ಚೆ? ಇಲ್ಲಿದೆ ನೋಡಿ..

ಭರ್ಜರಿ ಇನ್ನಿಂಗ್ಸ್ ಆಡಿದ ಕೊಹ್ಲಿ

ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 36 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 48 ರನ್ ಗಳಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಆರ್‌ಸಿಬಿ ತಂಡಕ್ಕೆ 8 ರನ್‌ಗಳ ಅಗತ್ಯವಿತ್ತು. ನಂತರ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಅವರು ಫೇಮಸ್ ಡೆವಾಲ್ಡ್ ಬ್ರೆವಿಸ್ ಅವರ ಕೈಯಲ್ಲಿ 'ಬೇಬಿ ಎಬಿ ಡಿವಿಲಿಯರ್ಸ್' ಹೆಸರನ್ನು ಹಸ್ತಾಂತರಿಸಿದರು. ಬ್ರೆವಿಸ್‌ನ ಮೊದಲ ಎಸೆತದಲ್ಲೇ ಕೊಹ್ಲಿ ಡಿಫೆಂಡ್ ಮಾಡಿದರು. ಬೌಲರ್ ಜೋರಾಗಿ ಅಪೀಲ್ ಮಾಡಿದರು ಮತ್ತು ಅಂಪೈರ್ ಔಟ್ ನೀಡಿದರು.

ಇದನ್ನೂ ಓದಿ : IPL 2022: ಐಪಿಎಲ್ ಇತಿಹಾಸಲ್ಲಿಯೇ ಮುಂಬೈ ಮತ್ತು ಚೆನ್ನೈ ಹೀಗೆ ಸೋತಿರಲಿಲ್ಲ!

ಆಕ್ರೋಶ ಹೊರಹಾಕಿದ ಕೊಹ್ಲಿ 

ಅಂಪೈರ್ ಔಟ್ ನೀಡಿದ ನಂತರ ವಿರಾಟ್ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಪಂದ್ಯ ಆರಂಭವಾದ ನಂತರ ಬಾಲ್ ಬ್ಯಾಟ್ ಗೆ ಮತ್ತೆ ಪ್ಯಾಡ್‌ಗೆ ತಾಗಿರುವುದು ಕಂಡುಬಂದಿದೆ. ಹಾಗಾಗಿ ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಥರ್ಡ್ ಅಂಪೈರ್ ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ಎತ್ತಿ ಹಿಡಿದಿದ್ದು, ಕೊಹ್ಲಿ 48 ರನ್ ಗಳಿಸಿ ಔಟಾದರು. ನಂತರ ವಿರಾಟ್ ಕೊಹ್ಲಿ ಈ ನಿರ್ಧಾರದಿಂದ ಮುನಿಸಿಕೊಂಡರು. ಆಗ ಕೊಲ್ಲಿ ಕೋಪದಲ್ಲಿ ತನ್ನ ಬ್ಯಾಟ್‌ನಿಂದ ನೆಲಕ್ಕೆ ಹೊಡೆದು ಗ್ರೌಂಡ್ ನಿಂದ ಹೊರ ನಡೆದರು.

ಈ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು 

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರ್‌ಸಿಬಿ ತಂಡಕ್ಕೆ 151 ರನ್‌ಗಳ ಗುರಿ ನೀಡಿದ್ದು, ಆರ್‌ಸಿಬಿ ತಂಡ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದು ಐಪಿಎಲ್ 2022ರಲ್ಲಿ ಮುಂಬೈ ತಂಡದ ಸತತ ನಾಲ್ಕನೇ ಸೋಲು. ಮುಂಬೈ ಪರ ಸೂರ್ಯಕುಮಾರ್ ಯಾದವ್ 68 ರನ್ ಗಳ ಇನಿಂಗ್ಸ್ ಆಡಿದರು. ಇದರ ಹೊರತಾಗಿ ಯಾವುದೇ ಬ್ಯಾಟ್ಸ್‌ಮನ್ ಅದ್ಭುತ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ಅನುಜ್ ರಾವತ್ ಆರ್‌ಸಿಬಿ ತಂಡದ ಪರ 66 ರನ್‌ಗಳ ಇನ್ನಿಂಗ್ಸ್‌ ಆಡಿದರು. ಅವರ ಅದ್ಭುತ ಆಟದಿಂದಾಗಿ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಲಭಿಸಿತು.

ಇದನ್ನೂ ಓದಿ : RCB vs MI, IPL 2022: ಕೊಹ್ಲಿ, ರಾವತ್ ಅಬ್ಬರ, ಮುಂಬೈಗೆ ಮತ್ತೊಂದು ಹೀನಾಯ ಸೋಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News