No Ball Controversy : No Ball ವಿವಾದದಲ್ಲಿ ರಿಷಬ್ ಪಂತ್ ಜೊತೆ ಸಿಲುಕಿದ ಪ್ರವೀಣ್ ಆಮ್ರೆ ಯಾರು?

ಪಂದ್ಯ ಲೇಟ್ ಆಗಿದ್ದಕ್ಕೆ ಪಂತ್ ಮತ್ತು ಶಾರ್ದೂಲ್ ಠಾಕೂರ್ ವಿರುದ್ಧ ದಂಡ ವಿಧಿಸಿದೆ. ಇದಲ್ಲದೇ ದೆಹಲಿ ಟೀಂ ಕೋಚ್‌ಗೂ ಶಿಕ್ಷೆ ವಿಧಿಸಲಾಗಿದೆ. ಈ ಕೋಚ್ ಯಾರು? ಶಿಕ್ಷೆ ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Written by - Channabasava A Kashinakunti | Last Updated : Apr 23, 2022, 03:27 PM IST
  • ಕೋಚ್‌ ಪ್ರವೀಣ್ ಆಮ್ರೆಗೆ ಶಿಕ್ಷೆ ಯಾಕೆ?
  • ಅಲ್ಲಿ ಆಗಿದ್ದೇನು?
  • ಎಲ್ಲರಿಗೂ ಬಿತ್ತು ದಂಡ!
No Ball Controversy :  No Ball ವಿವಾದದಲ್ಲಿ ರಿಷಬ್ ಪಂತ್ ಜೊತೆ ಸಿಲುಕಿದ ಪ್ರವೀಣ್ ಆಮ್ರೆ ಯಾರು? title=

No Ball Controversy : ಶುಕ್ರವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (DC vs RR) ನಡುವಿನ ಪಂದ್ಯ ವಿವಾದಗಳಿಂದ ಚರ್ಚೆಯಲ್ಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪ್ಟನ್ ರಿಷಬ್ ಪಂತ್ ಹಾಗೂ ಕೆಲ ಆಟಗಾರರು ನೋ ಬಾಲ್ ನೀಡದಕ್ಕೆ ವಿವಾದ ಸೃಷ್ಟಿಸಿದ್ದರು. ಇದಾದ ನಂತರ ಪಂದ್ಯ ಲೇಟ್ ಆಗಿದ್ದಕ್ಕೆ ಪಂತ್ ಮತ್ತು ಶಾರ್ದೂಲ್ ಠಾಕೂರ್  ದಂಡ ವಿಧಿಸಿದೆ. ಇದಲ್ಲದೇ ದೆಹಲಿ ಟೀಂ ಕೋಚ್‌ಗೂ ಶಿಕ್ಷೆ ವಿಧಿಸಲಾಗಿದೆ. ಈ ಕೋಚ್ ಯಾರು? ಶಿಕ್ಷೆ ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕೋಚ್‌ ಪ್ರವೀಣ್ ಆಮ್ರೆಗೆ ಶಿಕ್ಷೆ ಯಾಕೆ?

ರಿಷಬ್ ಪಂತ್ ಮತ್ತು ಶಾರ್ದೂಲ್ ಠಾಕೂರ್ ಪಂದ್ಯದ ಮಧ್ಯ ಗದ್ದಲದ ಸೃಷ್ಟಿಸಿದ ಕಾರಣ ದಂಡ ವಿಧಿಸಲಾಗಿದೆ. ಆದರೆ ದೆಹಲಿ ಟೀಂ ಸಹಾಯಕ ಕೋಚ್ ಆಗಿರುವ ಪ್ರವೀಣ್ ಆಮ್ರೆಗೆ ಒಂದು ಪಂದ್ಯಕ್ಕೆ ನಿಷೇಧ ಹೇರಲಾಗಿದೆ. ಇದಲ್ಲದೇ ಪಂದ್ಯ ಶುಲ್ಕದ ಶೇ.100ರಷ್ಟು ದಂಡವನ್ನೂ ವಿಧಿಸಲಾಗಿದೆ. ಪ್ರವೀಣ್ ಆಮ್ರೆ ಪಂದ್ಯದ ಮಧ್ಯದಲ್ಲಿ ನೋಬಾಲ್ ವಿವಾದದ ಬಗ್ಗೆ ಆನ್-ಫೀಲ್ಡ್ ಅಂಪೈರ್ ಜೊತೆ ಮಾತನಾಡಲು ಹೋಗಿದ್ದರು, ಹಾಗಾಗಿ ಆಮ್ರೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಈ ಶಿಕ್ಷೆಗೆ ಒಳಗಾಗಿದ್ದಾರೆ. 

ಇದನ್ನೂ ಓದಿ : RCB vs SRH : ಇಂದು ಹೈದರಾಬಾದ್‌ಗೆ ಬೆಂಗಳೂರು ʼಚಾಲೆಂಜ್‌ʼ

ಅಲ್ಲಿ ಆಗಿದ್ದೇನು?

ಶುಕ್ರವಾರ ಡೆಲ್ಲಿ ವಿರುದ್ಧ ರಾಜಸ್ಥಾನ 15 ರನ್‌ಗಳ ಜಯ ಸಾಧಿಸಿದ ಸಂದರ್ಭದಲ್ಲಿ ರೋವ್‌ಮನ್ ಪೊವೆಲ್ ಅಂತಿಮ ಓವರ್‌ನಲ್ಲಿ ಒಬೆಡ್ ಮೆಕಾಯ್ ಎಸೆದ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದಾಗ ವಿವಾದ ಭುಗಿಲೆದ್ದಿತು. ಇದು ಫುಲ್ ಟಾಸ್ ಬಾಲ್ ಆಗಿದ್ದು, ದೆಹಲಿ ತಂಡ ನೋ ಬಾಲ್ ನೀಡುವಂತೆ ಒತ್ತಾಯಿಸಿತ್ತು. ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಕುಲ್‌ದೀಪ್ ಯಾದವ್, ಅಂಪೈರ್‌ಗೆ ತೋರಿಸಿ, ಕೊನೆಯ ಎಸೆತವು ಸೊಂಟದ ಮೇಲಿದ್ದರೆ ನೋ ಬಾಲ್ ಆಗಬಹುದೆಂದು ರಿವೀವ್ ನೋಡಲು ಹೇಳಿದರು. ಪೊವೆಲ್ ಕೂಡ ಅಂಪೈರ್‌ಗಳೊಂದಿಗೆ ಮಾತನಾಡಲು ಪ್ರಾರಂಭಿಸಿದರು ಆದರೆ ಮೈದಾನದ ಅಂಪೈರ್‌ಗಳು ಚೆಂಡು ರೂಲ್ಸ್ ಪ್ರಕಾರವಾಗಿದೆ ಎಂದು ಹೇಳಿದರು.

ಎಲ್ಲರಿಗೂ ಬಿತ್ತು ದಂಡ!

ಪಂತ್ ನಂತರ ಪಾವೆಲ್ ಮತ್ತು ಕುಲದೀಪ್ ಗೆ ಹಿಂತಿರುಗುವಂತೆ ಕೇಳಿಕೊಂಡರು. ಇದೇ ವೇಳೆ ದೆಹಲಿ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಮೈದಾನಕ್ಕೆ ತೆರಳಿದರು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.7 ರ ಅಡಿಯಲ್ಲಿ ಲೆವೆಲ್ 2 ಅಪರಾಧಕ್ಕೆ ಪಂತ್ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ದಂಡ ಕಟ್ಟಬೇಕಾಗಿದೆ. ಠಾಕೂರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.8 ರ ಹಂತ 2 ರ ಅಪರಾಧ ಮತ್ತು ದಂಡವನ್ನು ಕಟ್ಟಬೇಕಾಗಿದೆ. ಹಾಗೆ, ಆಮ್ರೆ ಒಂದು ಪಂದ್ಯಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಆಮ್ರೆ ಎರಡನೇ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ದಂಡವನ್ನು ವಿಧಿಸಿದ್ದಾರೆ. 

ಇದನ್ನೂ ಓದಿ : ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News