IPL 2022 : ರೋಹಿತ್-ವಿರಾಟ್ ಕಳಪೆ ಫಾರ್ಮ್ ಬಗ್ಗೆ ಗಂಗೂಲಿ ಹೇಳಿದ್ದು ಹೀಗೆ!

ಟೀಂ ಇಂಡಿಯಾ ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ 5 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ ಮತ್ತು ನಂತರ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ.

Written by - Channabasava A Kashinakunti | Last Updated : May 16, 2022, 03:31 PM IST
  • ಸೌರವ್ ಗಂಗೂಲಿ ಹೇಳಿದ್ದು ಹೀಗೆ!
  • ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ
  • ಟೀಂ ಇಂಡಿಯಾ ನಾಯಕನ ಫ್ಲಾಪ್ ಶೋ
IPL 2022 : ರೋಹಿತ್-ವಿರಾಟ್ ಕಳಪೆ ಫಾರ್ಮ್ ಬಗ್ಗೆ ಗಂಗೂಲಿ ಹೇಳಿದ್ದು ಹೀಗೆ! title=

Sourav Ganguly On Virat-Rohit : ಐಪಿಎಲ್ 2022 ನಲ್ಲಿ ಭಾರತ ತಂಡದ ಇಬ್ಬರು ಸೂಪರ್‌ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಐಪಿಎಲ್ ಸೀಸನ್ 15 ರಲ್ಲಿ, ಇಬ್ಬರೂ ಆಟಗಾರರು ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ. ಐಪಿಎಲ್ ನಂತರ ಭಾರತ ಈ ವರ್ಷವೂ ಟಿ20 ವಿಶ್ವಕಪ್ ಆಡಬೇಕಿದ್ದು, ಇಂತಹ ಪರಿಸ್ಥಿತಿಯಲ್ಲಿ ತಂಡದ ಇಬ್ಬರು ಬಿಗ್ ಬ್ಯಾಟ್ಸ್ ಮನ್ ಗಳ ಫಾರ್ಮ್ ಮ್ಯಾನೇಜ್ ಮೆಂಟ್ ಚಿಂತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಇದೆಲ್ಲದರ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್-ರೋಹಿತ್ ಪ್ರದರ್ಶನದ ಬಗ್ಗೆ ಬಿಗ್ ಹೇಳಿಕೆ ನೀಡಿದ್ದಾರೆ.

ಸೌರವ್ ಗಂಗೂಲಿ ಹೇಳಿದ್ದು ಹೀಗೆ!

Sourav Ganguly On Virat-Rohit : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಕಾರ, ಈ ಇಬ್ಬರು ಆಟಗಾರರ ಫಾರ್ಮ್ ಬಗ್ಗೆ ಅವರು ಚಿಂತಿಸುವುದಿಲ್ಲ. ಮಿಡ್-ಡೇ ಜೊತೆಗಿನ ಸಂಭಾಷಣೆಯಲ್ಲಿ ಗಂಗೂಲಿ, 'ವಿರಾಟ್-ರೋಹಿತ್ ಅವರ ಫಾರ್ಮ್ ಬಗ್ಗೆ ನಾನು ಚಿಂತಿಸುತ್ತಿಲ್ಲ. ಅವರು ಉತ್ತಮ ಆಟಗಾರ ಮತ್ತು ದೊಡ್ಡ ಆಟಗಾರ. T20 ವಿಶ್ವಕಪ್ ಇನ್ನೂ ದೂರದಲ್ಲಿದೆ ಮತ್ತು ಈ ಆಟಗಾರರು ಪಂದ್ಯಾವಳಿಯ ಮುಂಚೆಯೇ ತಮ್ಮ ಕಳೆದುಕೊಂಡ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಟೀಂ ಇಂಡಿಯಾ ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ 5 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ ಮತ್ತು ನಂತರ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ.

ಇದನ್ನೂ ಓದಿ : ಕಾರು ಅಪಘಾತ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ

ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ

ಐಪಿಎಲ್ 2022 ರಲ್ಲಿ, ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿಲ್ಲ. IPL 2022 ರಲ್ಲಿ, ಅವರು 13 ಪಂದ್ಯಗಳಲ್ಲಿ 19.67 ರ ಸರಾಸರಿ ಮತ್ತು 113.46 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 236 ರನ್ ಗಳಿಸಿದ್ದಾರೆ. ಐಪಿಎಲ್ 2022 ರಲ್ಲಿ, ವಿರಾಟ್ ಕೊಹ್ಲಿ ಮೂರು ಬಾರಿ ಡಕ್ ಔಟ್ ಆಗಿದ್ದಾರೆ ಮತ್ತು ಕೇವಲ 1 ಅರ್ಧ ಶತಕವನ್ನು ಗಳಿಸಿದ್ದಾರೆ. IPL 2008 ರ ನಂತರ IPL ನಲ್ಲಿ ವಿರಾಟ್ ಕೊಹ್ಲಿ ಸರಾಸರಿ 20 ಕ್ಕಿಂತ ಕಡಿಮೆ ಇರುವುದು ಇದೇ ಮೊದಲ ಬಾರಿಗೆ.

ಟೀಂ ಇಂಡಿಯಾ ನಾಯಕನ ಫ್ಲಾಪ್ ಶೋ

ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರದರ್ಶನ ವಿರಾಟ್ ಕೊಹ್ಲಿಗಿಂತ ಕಳಪೆಯಾಗಿದೆ. ಈ ಋತುವಿನಲ್ಲಿ ರೋಹಿತ್ ಶರ್ಮಾ 12 ಪಂದ್ಯಗಳಲ್ಲಿ 18.17 ಸರಾಸರಿ ಮತ್ತು 125.29 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 218 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್, ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಸೋತಿದೆ. ಈ ಋತುವಿನಿಂದ ಹೊರಬಿದ್ದ ಮೊದಲ ತಂಡವೂ ಮುಂಬೈ ಆಗಿದೆ.

ಇದನ್ನೂ ಓದಿ : KKR vs SRH, IPL 2022: ಕೆಕೆಆರ್ ಎದುರು ಸೋತ ಹೈದರಾಬಾದ್ ಪ್ಲೇ ಆಫ್ ಕನಸು ನುಚ್ಚುನೂರು!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News