ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈಗ ಮುಂಬರುವ 2019ರ ವಿಶ್ವಕಪ್ ಪ್ರವಾಸದ ವೇಳೆ ತಮ್ಮ ಪತ್ನಿಯರಿಗೆ ಅನುಮತಿ ನೀಡಬೇಕೆಂದು ಕೇಳಿದೆ.
ಕೇವಲ ಇದಿಷ್ಟೇ ಅಲ್ಲದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡಲು ಬಸ್ ಬದಲಾಗಿ ರೈಲ್ವೆ ಕೋಚ್ ಮತ್ತು ಪ್ರವಾಸದ ವೇಳೆ ತಿನ್ನಲು ಬಾಳೆಹಣ್ಣುಗಳು ಬೇಕೆಂದು ಕೊಹ್ಲಿ ನೇತೃತ್ವದ ತಂಡ ಬೇಡಿಕೆ ಇಟ್ಟಿದೆ. ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸದ ವೇಳೆ ಆಟಗಾರಿಗೆ ತಾವು ಇಷ್ಟಪಟ್ಟ ಹಣ್ಣ ದೊರಕದಿರುವುದರಿಂದ ಈಗ ತಂಡವು ಬಾಳೆ ಹಣ್ಣಿನ ಬೇಡಿಕೆ ಇಟ್ಟಿದೆ ಎಂದು ತಿಳಿದು ಬಂದಿದೆ.
ಆದರೆ ಇದಕ್ಕೆ ಭಾರತ ಕ್ರಿಕೆಟ್ ಆಡಳಿತ ಮಂಡಳಿ ಅಚ್ಚರಿ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೀಮ್ ಮ್ಯಾನೇಜರ್ ಬಾಳೆಹಣ್ಣನ್ನು ಖರೀದಿ ಮಾಡುವ ಜವಾಬ್ದಾರಿಯನ್ನು ವಹಿಸಬೇಕೆಂದು ಮಂಡಳಿ ತಿಳಿಸಿದೆ ಎನ್ನಲಾಗಿದೆ.ಇನ್ನು ಕೆಲವರು ಸೂಕ್ತ ಜೀಂ ಸೌಲಭ್ಯವಿರುವ ಹೋಟಲ್ ಗಳನ್ನು ಬುಕ್ ಮಾಡಲು ಕೂಡ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಬಸ್ ಬದಲಾಗಿ ಟ್ರೈನ್ ನಲ್ಲಿ ಸಾಗುವ ವಿಚಾರವಾಗಿ ರಕ್ಷಣೆ ದೃಷ್ಟಿಯಿಂದ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಬೇಡಿಕೆಗಳ ವಿಚಾರವಾಗಿ ಬಿಸಿಸಿಐ ಇನ್ನು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಮೇ 30 ರಿಂದ ಜುಲೈ 15 ರ ವರೆಗೆ ವಿಶ್ವಕಪ್ ನಡೆಯುತ್ತಿರುವ ಹಿನ್ನಲೆಯಲ್ಲಿ ಈಗ ಆಟಗಾರರು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ