ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದು

World Cup 2024 Final: ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ ಮೊದಲ ಓವರ್‌’ನಲ್ಲಿ ಉತ್ತಮ ಆರಂಭವನ್ನು ನೀಡಿತು, ಆದರೆ ಎರಡನೇ ಓವರ್‌’ನಲ್ಲಿ ಕೇಶವ್ ಮಹಾರಾಜ್ ಟೀಂ ಇಂಡಿಯಾಗೆ ಸಂಕಷ್ಟ ತಂದೊಡ್ಡಿದರು

Written by - Bhavishya Shetty | Last Updated : Jun 30, 2024, 12:12 AM IST
    • ಟೀಂ ಇಂಡಿಯಾ ICC ಟ್ರೋಫಿಯ ಬರವನ್ನು ಕೊನೆಗೊಳಿಸಿದೆ.
    • 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದಿದೆ.
    • ಅಮೋಘ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‌’ಗಳ ರೋಚಕ ಜಯ ದಾಖಲಿಸಿತು
ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದು title=
Team India

World Cup 2024 Final: T20 ವಿಶ್ವಕಪ್ 2024 ಫೈನಲ್‌’ನಲ್ಲಿ ಟೀಂ ಇಂಡಿಯಾ ICC ಟ್ರೋಫಿಯ ಬರವನ್ನು ಕೊನೆಗೊಳಿಸಿದೆ. ಅಂತಿಮ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದಿಂದ ಗೆಲುವನ್ನು ಕಸಿದುಕೊಂಡಿದ್ದಲ್ಲದೆ, 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದಿದೆ. ಅಮೋಘ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‌’ಗಳ ರೋಚಕ ಜಯ ದಾಖಲಿಸಿತು.

ಇದನ್ನೂ ಓದಿ: ಒಂದೇ ಓವರ್’ನಲ್ಲಿ ರೋಹಿತ್-ರಿಷಬ್ ವಿಕೆಟ್ ಕಬಳಿಸಿ ಶ್ರೀರಾಮನಿಗೆ ಕೈಮುಗಿದ ಕೇಶವ್ ಮಹಾರಾಜ್!

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ ಮೊದಲ ಓವರ್‌’ನಲ್ಲಿ ಉತ್ತಮ ಆರಂಭವನ್ನು ನೀಡಿತು, ಆದರೆ ಎರಡನೇ ಓವರ್‌’ನಲ್ಲಿ ಕೇಶವ್ ಮಹಾರಾಜ್ ಟೀಂ ಇಂಡಿಯಾಗೆ ಸಂಕಷ್ಟ ತಂದೊಡ್ಡಿದರು. ರೋಹಿತ್ ಮತ್ತು ಪಂತ್ ವಿಕೆಟ್‌ ಕಬಳಿಸುವ ಮೂಲಕ ಭಾರತಕ್ಕೆ ಧರ್ಮಸಂಕಟವನ್ನುಂಟು ಮಾಡಿದರು.

ಆದರೆ ಒಟ್ಟಾರೆಯಾಗಿ ಟೀಂ ಇಂಡಿಯಾ ನೀಡಿದ 177 ರನ್‌’ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸೂಕ್ಷ್ಮ ಆರಂಭ ಪಡೆದಿತ್ತು. ಕ್ವಿಂಟನ್ ಡಿ ಕಾಕ್ (39) ಮತ್ತು ಟ್ರಿಸ್ಟಾನ್ ಸ್ಟಬ್ಸ್ (31) ಅವರ ಅದ್ಭುತ ಇನ್ನಿಂಗ್ಸ್‌ ದಕ್ಷಿಣ ಆಫ್ರಿಕಾ ಗೆಲ್ಲುವ ಹಾದಿಗೆ ಕೊಂಡೊಯ್ಯಿತು. ಆದರೆ ಟೀಂ ಇಂಡಿಯಾದ ಆಟಗಾರರ ಸಮಯಪ್ರಜ್ಞೆ, ಚಾಣಾಕ್ಷತನ, ಬುದ್ದಿವಂತಿಕೆ ಮತ್ತು ಸಾಮಾರ್ಥ್ಯದ ಬಲದಿಂದ ಟೀಂ ಇಂಡಿಯಾ 17 ವರ್ಷಗಳ ಬಳಿಕ ಟ್ರೋಫಿ ಗೆಲ್ಲುವಂತಾಯಿತು.

ಇದನ್ನೂ ಓದಿ: T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿ

ಇನ್ನೊಂದೆಡೆ ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ ಸೇರ್ಪಡೆಯಾಗಿದೆ. ಅದೇನೆಂದರೆ ಅಜೇಯರಾಗಿ ಭಾರತ ತಂಡ ವಿಶ್ವಕಪ್ ಟ್ರೋಫಿ ಗೆದ್ದಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆಯನ್ನು ಯಾವುದೇ ತಂಡವು ಮಾಡಿರಲಿಲ್ಲ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಇಂತಹ ಸಾಧನೆ ಮಾಡಿದೆ. ಆದರೆ ಟಿ20 ವಿಶ್ವಕಪ್’ನಲ್ಲಿ ಭಾರತವೇ ಮೊದಲು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News