ಜೈಪುರ್ ನಲ್ಲಿ 2019 ರ ಐಪಿಎಲ್ ಹರಾಜು ಪ್ರಕ್ರಿಯೆ,50 ಭಾರತೀಯರು 20 ವಿದೇಶಿಯರಿಗೆ ಚಾನ್ಸ್!

ಐಪಿಎಲ್ 2019 ರ ಹರಾಜು ಪ್ರಕ್ರಿಯೆ ಈ ಬಾರಿ ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ. ಹರಾಜು ಪ್ರಕ್ರಿಯೆಯನ್ನು  ಒಂದು ದಿನ ಮಾತ್ರ ನಡೆಸಲಾಗುವುದು ಎಂದು ತಿಳಿದು ಬಂದಿದೆ. ಈ ಬಾರಿ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಿಂದ ಜೈಪುರ್ ಗೆ ಹಸ್ತಾಂತರಿಸಲಾಗಿದೆ. 

Updated: Dec 3, 2018 , 09:14 PM IST
ಜೈಪುರ್ ನಲ್ಲಿ 2019 ರ ಐಪಿಎಲ್ ಹರಾಜು ಪ್ರಕ್ರಿಯೆ,50 ಭಾರತೀಯರು 20 ವಿದೇಶಿಯರಿಗೆ ಚಾನ್ಸ್!
Image Credits: Twitter/@IPL

ನವದೆಹಲಿ: ಐಪಿಎಲ್ 2019 ರ ಹರಾಜು ಪ್ರಕ್ರಿಯೆ ಈ ಬಾರಿ ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ. ಹರಾಜು ಪ್ರಕ್ರಿಯೆಯನ್ನು  ಒಂದು ದಿನ ಮಾತ್ರ ನಡೆಸಲಾಗುವುದು ಎಂದು ತಿಳಿದು ಬಂದಿದೆ. ಈ ಬಾರಿ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಿಂದ ಜೈಪುರ್ ಗೆ ಹಸ್ತಾಂತರಿಸಲಾಗಿದೆ. 

ಈ ಬಾರಿ ಕೇವಲ 70 ಆಟಗಾರರನ್ನು ಹರಾಜು ಮಾಡಲಾಗುವುದು ಅದರಲ್ಲಿ 50 ಭಾರತೀಯ ಮತ್ತು 20 ವಿದೇಶಿ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲಾಗುವುದು ಎಂದು ತಿಳಿದುಬಂದಿದೆ.ಒಟ್ಟು ಎಂಟು ತಂಡಗಳು ಸುಮಾರು ಉಳಿದ 145.25 ಕೋಟಿ ರೂ.ಗಳಲ್ಲಿ ಆಟಗಾರರನ್ನು ಖರೀದಿಸಲಾಗುವುದು ಎಂದು ತಿಳಿಸಲಾಗಿದೆ.

2019 ರಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಇರುವುದರಿಂದ ಐಪಿಎಲ್  ಪಂದ್ಯಗಳನ್ನು ಈ ಬಾರಿ  ವಿದೇಶದಲ್ಲಿ ನಡೆಸುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.