ODI ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರೆಯೇ ವಿರಾಟ್ ಕೊಹ್ಲಿ, ಶೀಘ್ರ ಹೊರಬೀಳಲಿದೆ ನಿರ್ಧಾರ

ದಕ್ಷಿಣ ಆಫ್ರಿಕಾದಲ್ಲಿ COVID -19 ರ ಹೊಸ ರೂಪಾಂತರ ಕಂಡುಬಂದರೂ, ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ಪ್ರವಾಸವು ಮುಂದುವರಿಯುತ್ತದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Written by - Ranjitha R K | Last Updated : Dec 2, 2021, 10:45 AM IST
  • ವಿರಾಟ್ ಏಕದಿನ ನಾಯಕತ್ವದ ಬಗ್ಗೆ ಶೀಘ್ರದಲ್ಲೇ ನಿರ್ಧಾರ
  • 'ಕಿಂಗ್ ಕೊಹ್ಲಿ' ಏಕದಿನ ನಾಯಕತ್ವವನ್ನು ಕಳೆದುಕೊಳ್ಳುತ್ತಾರಾ?
  • ಯಾರು ತುಂಬಲಿದ್ದಾರೆ ವಿರಾಟ್ ಸ್ಥಾನ
ODI ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರೆಯೇ ವಿರಾಟ್ ಕೊಹ್ಲಿ, ಶೀಘ್ರ ಹೊರಬೀಳಲಿದೆ ನಿರ್ಧಾರ   title=
ವಿರಾಟ್ ಏಕದಿನ ನಾಯಕತ್ವದ ಬಗ್ಗೆ ಶೀಘ್ರದಲ್ಲೇ ನಿರ್ಧಾರ (file photo)

ಮುಂಬೈ: 2021 ರ ಐಸಿಸಿ ಟಿ20 ವಿಶ್ವಕಪ್  (ICC T20 World Cup 2021) ಬಳಿಕ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವಕ್ಕೆ (Virat Kohli captiancy) ರಾಜೀನಾಮೆ ನೀಡಿದ್ದಾರೆ. ಈಗ ಅವರ ಏಕದಿನ ಅಂತಾರಾಷ್ಟ್ರೀಯ ನಾಯಕತ್ವವೂ ಕೈ ತಪ್ಪುವ ಅಪಾಯ ಎದುರಾಗಿದೆ.  ODI ವಿಶ್ವಕಪ್ 2023 ರ ದೃಷ್ಟಿಯಿಂದ  ಟೀಂ ಮ್ಯಾನೆಜ್ ಮೆಂಟ್ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದೆ. 

ವಿರಾಟ್ ಏಕದಿನ ನಾಯಕತ್ವದ ಬಗ್ಗೆ ಶೀಘ್ರದಲ್ಲೇ ನಿರ್ಧಾರ:
ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು (Team India) ಆಯ್ಕೆ ಮಾಡುವ ವೇಳೆ, ವಿರಾಟ್ ಕೊಹ್ಲಿಯ (Virat Kohli) ಏಕದಿನ ನಾಯಕತ್ವದ ಬಗ್ಗೆಯೂ ನಿರ್ಧಾರ ಹೊರ ಬೀಳಲಿದೆ. 

ಇದನ್ನೂ ಓದಿ : ICC ರ‍್ಯಾಂಕಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ, ಪಂದ್ಯ ಆಡದೆಯೇ ಅಗ್ರ ಸ್ಥಾನದಲ್ಲಿ ಕೊಹ್ಲಿ
 
ಏನಾಗಲಿದೆ ದಕ್ಷಿಣ ಆಫ್ರಿಕಾ ಪ್ರವಾಸ ? :
ದಕ್ಷಿಣ ಆಫ್ರಿಕಾದಲ್ಲಿ COVID -19 ರ ಹೊಸ ರೂಪಾಂತರ ಕಂಡುಬಂದರೂ, ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ಪ್ರವಾಸವು ಮುಂದುವರಿಯುತ್ತದೆ ಎಂದು ಬಿಸಿಸಿಐನ (BCCI) ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎನ್ನಲಾಗಿದೆ. 

2022ರಲ್ಲಿ ಭಾರತ ಕೇವಲ 9 ಏಕದಿನ ಪಂದ್ಯಗಳನ್ನು ಆಡಲಿದೆ :
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 Worldcup) ಸೇರಿದಂತೆ ಬಹುತೇಕ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು 2022ರಲ್ಲಿ ನಡೆಯಲಿವೆ. ಸದ್ಯದ ವೇಳಾಪಟ್ಟಿಯ ಪ್ರಕಾರ ಮುಂದಿನ 7 ತಿಂಗಳಲ್ಲಿ ಭಾರತ ಕೇವಲ 9 ಏಕದಿನ ಪಂದ್ಯಗಳನ್ನು ಆಡಬೇಕಿದ್ದು, ಈ ಪೈಕಿ 6 ವಿದೇಶಗಳಲ್ಲಿ ಆಡಲಿದೆ.

ಇದನ್ನೂ ಓದಿ : IPL 2022 Retention: ಕೊಹ್ಲಿ- ಧೋನಿ ಅಲ್ಲದೆ ಈ 3 ಆಟಗಾರರು ಪಡೆಯುತ್ತಾರೆ ಅತೀ ಹೆಚ್ಚು ಸಂಬಳ!

ಕಳೆದುಕೊಳ್ಳಲಿದ್ದಾರೆಯೇ ವಿರಾಟ್ ಕೊಹ್ಲಿ ಏಕದಿನ ನಾಯಕತ್ವ ? 

ಬಿಸಿಸಿಐನ ಒಂದು ಬಣ ವಿರಾಟ್ ಕೊಹ್ಲಿಯನ್ನು (Virat Kohli) ಏಕದಿನ ನಾಯಕನಾಗಿ ಉಳಿಸಿಕೊಳ್ಳುವಲ್ಲಿ ಒಲವು ತೋರಿದರೆ, ಇನ್ನೊಂದು ಬಣವು ಟಿ 20 ಮತ್ತು ಏಕದಿನ ಎರಡರ ನಾಯಕತ್ವವನ್ನು ಒಂದೇ ಆಟಗಾರನಿಗೆ ಹಸ್ತಾಂತರಿಸುವಲ್ಲಿ ಆಸಕ್ತಿ ಹೊಂದಿದೆ. ಹೀಗೆ ಮಾಡಿದರೆ ರೋಹಿತ್ ಶರ್ಮಾಗೆ  (Rohit Sharma) 2023 ರ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸಲು ಅವಕಾಶ ಸಿಗುತ್ತದೆ ಎನ್ನಲಾಗಿದೆ.
 
 ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಇವರು !
ಇದೀಗ ವಿರಾಟ್ ಕೊಹ್ಲಿಯ ಏಕದಿನ ನಾಯಕತ್ವದ ವಿಚಾರದಲ್ಲಿ ಬಿಸಿಸಿಐನ ಬಣಗಳ ನಡುವೆ ಘರ್ಷಣೆ ನಡೆದರೆ ಅದರ ಪರಿಣಾಮ ಏನಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮತ್ತು ಕಾರ್ಯದರ್ಶಿ ಜಯ್ ಶಾ ತೆಗೆದುಕೊಳ್ಳಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News