ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ಕೊಹ್ಲಿ ವರ್ತನೆಗೆ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ವಿರಾಟ್ ಕೊಹ್ಲಿ ಹಾಗೂ ಆಸೀಸ್ ಆಟಗಾರ ಸ್ಯಾಮ್ ಕಾನ್ಸ್ತಾಸ್ ನಡುವಿನ ಮಾತಿನ ಚಕಮಕಿ ಈಗ ಚರ್ಚೆಯ ವಿಷಯವಾಗಿದೆ.
ಈಗ ಈ ವಿಷಯ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಕಾನ್ಸ್ತಾಸ್ 'ಇದು ಆಕಸ್ಮಿಕವಾಗಿ ಆಗಿರುವ ಘಟನೆ, ನಾನು ನನ್ನ ಗ್ಲೋಸ್ ಸರಿಪಡಿಸಿಕೊಳ್ಳುತ್ತಿದ್ದೆ ಆಗ ಕೊಹ್ಲಿ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾರೆ.ಇದೆಲ್ಲಾ ಕ್ರಿಕೆಟ್ ನಲ್ಲಿ ಒಮ್ಮೊಮ್ಮೆ ಸಾಮಾನ್ಯವಾಗಿ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.ಈಗ ಸ್ಯಾಮ್ ಕಾನ್ಸ್ತಾಸ್ ನೀಡಿರುವ ಈ ಹೇಳಿಕೆಗೆ ಬಹುತೇಕರು ಮೆಚ್ಚುಗೆ ಮೆರೆದಿದ್ದಾರೆ.ಕೆಲವರು 19 ರ ಯುವಕ ಕ್ರೀಡಾ ಮನೋಭಾವ ಮೆಚ್ಚುವಂತದ್ದು ಎಂದೆಲ್ಲಾ ಶ್ಲಾಘಿಸುತ್ತಿದ್ದಾರೆ.
ಅಷ್ಟಕ್ಕೂ ಅಲ್ಲಿ ನಡೆದದ್ದೇನು?
ಕ್ಷೇತ್ರ ರಕ್ಷಣೆಯಲ್ಲಿದ್ದ ಕೊಹ್ಲಿ ಬೌಲ್ ತೆಗೆದುಕೊಂಡು ಬೌಲರ್ ನತ್ತ ರಬಸವಾಗಿ ಧಾವಿಸುತ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಯಾಮ್ ಕಾನ್ಸ್ತಾಸ್ ಎದೆಗೆ ಡಿಕ್ಕಿ ಹೊಡೆದಿದ್ದಾರೆ.ಈಗ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಕೊಹ್ಲಿಯಂತಹ ಹಿರಿಯ ಆಟಗಾರ ಕಿರಿಯ ಆಟಗಾರನ ಜೊತೆಗೆ ನಡೆದುಕೊಂಡಿರುವ ನಡೆ ಸರಿಯಾದದ್ದಲ್ಲ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
Virat Kohli and Sam Konstas exchanged a heated moment on the MCG. #AUSvIND pic.twitter.com/QL13nZ9IGI
— cricket.com.au (@cricketcomau) December 26, 2024
ಇನ್ನೂ ಕೆಲವರು ಕೊಹ್ಲಿ ನಡೆಯನ್ನು ಸಮರ್ಥಿಸಿಕೊಳ್ಳುತ್ತಾ 'ಎಂದಿನಂತೆ ಈಗ ಕೊಹ್ಲಿ ತಮ್ಮ ಹಿಂದಿನ ಫಾರ್ಮ್ ಗೆ ಬಂದಿದ್ದಾರೆ.ಈ ಹಿಂದೆ ಆಸೀಸ್ ಆಟಗಾರರು ಹೀಗೆ ಮಾಡುತ್ತಿದ್ದರು.ಅದರಲ್ಲಿ ಕೊಹ್ಲಿಯದ್ದು ತಪ್ಪೇನಿಲ್ಲ ಎಂದೆಲ್ಲಾ ಮಾತನಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.