Virat Kohli Drops Easiest Catch: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ (ನವೆಂಬರ್ 22) ಪರ್ತ್ನಲ್ಲಿ ಪ್ರಾರಂಭವಾಯಿತು. ಮೊದಲ ದಿನದ ಆಟ ಅತ್ಯಂತ ರೋಚಕವಾಗಿತ್ತು. ಎರಡೂ ತಂಡಗಳ ಬೌಲರ್ಗಳು ಈ ಪಂದ್ಯದಲ್ಲಿ ಮಿಂಚಿದ್ದರು. ಇನ್ನು ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಬ್ಯಾಟ್ಸ್ಮನ್ಗಳು ನಿರಾಸೆ ಮೂಡಿಸಿದ್ದರು.
ಟೀಂ ಇಂಡಿಯಾ ಕೇವಲ 150 ರನ್ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಭಾರತದ ಬೌಲರ್ಗಳು ಕೂಡ ಆಸ್ಟ್ರೇಲಿಯದ ಬ್ಯಾಟ್ಸ್ಮನ್ಗಳನ್ನು ಸಾಕಷ್ಟು ಕಾಡಿದರು. ಆಸ್ಟ್ರೇಲಿಯದ 7 ವಿಕೆಟ್ಗಳನ್ನು ಟೀಂ ಇಂಡಿಯಾದ ವೇಗಿಗಳು ಕಬಳಿಸಿ, ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಸ್ಕೋರ್ 67/7 ಆಗಿತ್ತು.
ಈ ಸರಣಿ ರೋಚಕವಾಗಿರಲಿದೆ ಎಂಬುದನ್ನು ಮೊದಲ ದಿನದಾಟ ಸಾಬೀತುಪಡಿಸಿದೆ. ಎರಡೂ ತಂಡಗಳ ಬೌಲರ್ಗಳು ಮೇಲುಗೈ ಸಾಧಿಸಿದರು. ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 83 ರನ್ಗಳ ಮುನ್ನಡೆಯಲ್ಲಿದೆ. ಮೊದಲ ದಿನ ಭಾರತದ ದಿಗ್ಗಜ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದರು. ಇದಾದ ಬಳಿಕ ಟೀಂ ಇಂಡಿಯಾ ಬೌಲಿಂಗ್ಗೆ ಬಂದಾಗ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈಬಿಟ್ಟಿದ್ದರು.
ಆಸ್ಟ್ರೇಲಿಯದ ಮಾರ್ನಸ್ ಲ್ಯಾಬುಸ್ಚಾಗ್ನೆಗೆ ಜೀವ ತುಂಬಿದ ಕೊಹ್ಲಿ ಮೈದಾನದಲ್ಲಿ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಆಸ್ಟ್ರೇಲಿಯಾ ಇನಿಂಗ್ಸ್ನ ಮೂರನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಚೊಚ್ಚಲ ಆಟಗಾರ ನಾಥನ್ ಮೆಕ್ಸ್ವೀನಿ ಔಟಾದ ನಂತರ ಲ್ಯಾಬುಸ್ಚಾಗ್ನೆ ಕ್ರೀಸ್ಗೆ ಬಂದರು. ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಮೇಲೆ ಲಬುಸ್ಚಾಗ್ನೆ ಬ್ಯಾಟ್ ಬೀಸಲು ಮುಂದಾದರು. ಆದರೆ ಚೆಂಡು ನೇರವಾಗಿ ಸ್ಲಿಪ್ನಲ್ಲಿ ಕೊಹ್ಲಿಯ ಕೈಗೆ ಹೋಯಿತು. ಆದರೆ ಕ್ಯಾಚ್ ಪಡೆಯಬೇಕಿದ್ದ ಕೊಹ್ಲಿ, ಸುಲಭವಾಗಿ ಕೈಚೆಲ್ಲಿದರು.
One of the more extraordinary drops you'll see! #AUSvIND pic.twitter.com/LdxmEYeWQx
— cricket.com.au (@cricketcomau) November 22, 2024
ಇದನ್ನೂ ಓದಿ: ಪ್ರವೀರ್ ಶೆಟ್ಟಿ ಸಿನಿಮಾಗೆ 'ಬಘೀರ' ಬಲ : ನಿದ್ರಾದೇವಿ Next door ಟೀಸರ್ ರಿಲೀಸ್
ಕೊಹ್ಲಿಯಿಂದ ಈ ರೀತಿಯ ಫೀಲ್ಡಿಂಗ್ ಅನ್ನು ಯಾರೂ ನಿರೀಕ್ಷಿಸಿರಲಿಲ್ಲ. ಬುಮ್ರಾ ವಿಕೆಟ್ ಬಿತ್ತೆಂದು ತಕ್ಷಣವೇ ಸಂಭ್ರಮಾಚರಣೆ ಆರಂಭಿಸಿದರು. ಆದರೆ ಅಲ್ಲಿ ನಡೆದಿದ್ದೇ ಬೇರೆ..! ಒಟ್ಟಾರೆ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈ ಚೆಲ್ಲಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್ ಫೀಲ್ಡಿಂಗ್ ಎಲ್ಲಾ ವಿಚಾರದಲ್ಲೂ ಅಬ್ಬರಿಸುತ್ತಿದ್ದ ವಿರಾಟ್ ಇದೀಗ ಮಂಕಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ