Black Friday Saleನಲ್ಲಿ ಒಂದನ್ನೊಂದು ಮೀರಿಸುವ ಆಫರ್ !ಖರೀದಿ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಬ್ಲಾಕ್ ಫ್ರೈಡೆ ಸೇಲ್ ದಿನದಂದು, ಪ್ರಪಂಚದಾದ್ಯಂತದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಶಾಪಿಂಗ್‌ಗಾಗಿ ಜನರಿಗೆ ರಿಯಾಯಿತಿಗಳನ್ನು ನೀಡುತ್ತವೆ.  

Written by - Ranjitha R K | Last Updated : Nov 21, 2024, 03:42 PM IST
  • ಈ ವರ್ಷ ಬ್ಲಾಕ್ ಫ್ರೈಡೆ ಯನ್ನು ನವೆಂಬರ್ 29 ರಂದು ಆಚರಿಸಲಾಗುತ್ತದೆ.
  • ಇದನ್ನು ವರ್ಷದ ಅತಿ ದೊಡ್ಡ ಸೇಲ್ ಎಂದು ಪರಿಗಣಿಸಲಾಗುತ್ತದೆ.
  • ಥ್ಯಾಂಕ್ಸ್ ಗಿವಿಂಗ್ ಮಾರನೇ ದಿನವನ್ನು ಬ್ಲಾಕ್ ಫ್ರೈಡೆ ಎಂದು ಆಚರಿಸಲಾಗುತ್ತದೆ
Black Friday Saleನಲ್ಲಿ ಒಂದನ್ನೊಂದು ಮೀರಿಸುವ ಆಫರ್ !ಖರೀದಿ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ  title=

ಈ ವರ್ಷ ಬ್ಲಾಕ್ ಫ್ರೈಡೆ ಯನ್ನು ನವೆಂಬರ್ 29 ರಂದು ಆಚರಿಸಲಾಗುತ್ತದೆ. ಇದನ್ನು  ವರ್ಷದ ಅತಿ ದೊಡ್ಡ ಸೇಲ್ ಎಂದು ಪರಿಗಣಿಸಲಾಗುತ್ತದೆ. ಅಮೆರಿಕಾದಲ್ಲಿ ಥ್ಯಾಂಕ್ಸ್ ಗಿವಿಂಗ್ ಮಾರನೇ ದಿನವನ್ನು ಬ್ಲಾಕ್ ಫ್ರೈಡೆ ಎಂದು ಆಚರಿಸಲಾಗುತ್ತದೆ. ಅಸಲಿಗೆ ಇಲ್ಲಿಂದ ಅಧಿಕೃತವಾಗಿ ಕ್ರಿಸ್ಮಸ್ ಋತು ಪ್ರಾರಂಭವಾಗುತ್ತದೆ. ಬ್ಲಾಕ್ ಫ್ರೈಡೆ ಸೇಲ್ ದಿನದಂದು, ಪ್ರಪಂಚದಾದ್ಯಂತದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಶಾಪಿಂಗ್‌ಗಾಗಿ ಜನರಿಗೆ ರಿಯಾಯಿತಿಗಳನ್ನು ನೀಡುತ್ತವೆ. ಆದರೆ, ಈ ಸಮಯದಲ್ಲಿ, ಜನರನ್ನು ವಿವಿಧ ರೀತಿಯಲ್ಲಿ ಮೋಸಗೊಳಿಸಲು ಪ್ರಯತ್ನಿಸುವ ಸ್ಕ್ಯಾಮರ್‌ಗಳು ಕೂಡಾ ಸಕ್ರಿಯರಾಗುತ್ತಾರೆ. ಆದ್ದರಿಂದ, ಬ್ಲಾಕ್ ಫ್ರೈಡೆ ಸೇಲ್  ನಲ್ಲಿ ಶಾಪಿಂಗ್ ಮಾಡುವಾಗ  ತುಂಬಾ ಜಾಗರೂಕರಾಗಿರಬೇಕು. 

ಇಮೇಲ್‌ನಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ :
ಅನೇಕ ಬಾರಿ ಸ್ಕ್ಯಾಮರ್‌ಗಳು ನಿಮಗೆ ಇಮೇಲ್ ಮಾಡುವ ಮೂಲಕ ನಕಲಿ ಆಫರ್ ಗಳನ್ನು ನೀಡುತ್ತಾರೆ. ಆಫರ್ ಅನ್ನು ಕ್ಲೈಂ ಮಾಡಿಕೊಳ್ಳಲು ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಕೇಳುತ್ತಾರೆ. ಈ ಲಿಂಕ್ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿ ವೈರಸ್‌ಗಳನ್ನು ಹಾಕಬಹುದು ಅಥವಾ ನಿಮ್ಮ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ, ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌ಗಳಲ್ಲಿ ಸ್ವೀಕರಿಸಿದ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ. 

ಇದನ್ನೂ ಓದಿ :  ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ಇ.ವಿ. ಬಸ್ ಸೇವೆ ಲಭ್ಯ

URL ಗೆ ಗಮನ ಕೊಡಿ : 
ಯಾವುದೇ ವೆಬ್‌ಸೈಟ್‌ನಿಂದ ಖರೀದಿಸುವ ಮೊದಲು, ಅದರ ಅಡ್ರೆಸ್ ಅಂದರೆ URL ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ವೆಬ್‌ಸೈಟ್ ವಿಳಾಸ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.  ಆ ಸೈಟ್ ವಿಶ್ವಾಸಾರ್ಹಅನಿಸಿದರೆ ಮಾತ್ರ  ಖರೀದಿಸಿ. 

ಸುರಕ್ಷಿತವಾಗಿ ಪಾವತಿಸಿ : 
ಯಾವಾಗಲೂ ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡಿ ಮತ್ತು ಸುರಕ್ಷಿತವಾಗಿ ಪಾವತಿಸಿ. ಉದಾಹರಣೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI ಮೂಲಕವೇ ಪೇಮೆಂಟ್ ಮಾಡಿ. ಇದರ ಜೊತೆ ಆನ್‌ಲೈನ್ ಪಾವತಿ ಮಾಡುವಾಗ ಜಾಗರೂಕರಾಗಿರಿ. ಪಾವತಿ ಮಾಡುವ ಮೊದಲು ದಯವಿಟ್ಟು ವಿವರಗಳನ್ನು ಪರಿಶೀಲಿಸಿ. 

ವೆಬ್‌ಸೈಟ್ ಕುರಿತು ಮಾಹಿತಿಯನ್ನು ಸಂಗ್ರಹಿಸಿ :
ಹೊಸ ವೆಬ್‌ಸೈಟ್‌ನಿಂದ ಖರೀದಿ ಮಾಡುವ ಮೊದಲು, ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ಆ ವೆಬ್‌ಸೈಟ್‌ನಲ್ಲಿ ಜನರು ಮೊದಲು ಯಾವ ಖರೀದಿಗಳನ್ನು ಮಾಡಿದ್ದಾರೆ. ಯಾವ ಸಮಸ್ಯೆಗಳನ್ನು ಎದುರಿಸಿದ್ದಾರೆ, ಇತ್ಯಾದಿಗಳನ್ನು ಗಮನಿಸಿಕೊಳ್ಳಿ. ಗ್ರಾಹಕರ ಪ್ರತಿಕ್ರಿಯೆ ಮತ್ತು ರೇಟಿಂಗ್‌ಗಳಿಗೆ ಗಮನ ಕೊಡಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಬ್ಲಾಕ್ ಫ್ರೈಡೆ ಸೇಲ್ ನಲ್ಲಿ ಉತ್ತಮ ಆಫರ್ ಗಳು ಸಿಗುತ್ತವೆ. ಆದರೆ ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಈ ಬಗ್ಗೆ ಅರಿವು ಮೂಡಿಸಿ, ಇದರಿಂದ ವಂಚನೆಗೆ ಒಳಗಾಗುವುದನ್ನು  ತಪ್ಪಿಸಬಹುದು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News