Sourav Ganguly: ಬಿಸಿಸಿಐಗೆ ಶೀಘ್ರವೇ ಗುಡ್ ಬೈ ಹೇಳುತ್ತಾರಾ ಸೌರವ್ ಗಂಗೂಲಿ..?

ವಿರಾಟ್ ಕೊಹ್ಲಿ ಟೆಸ್ಟ್‌ ನಾಯಕತ್ವವನ್ನು ತ್ಯಜಿಸಿದ ನಂತರ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೌರವ್ ಗಂಗೂಲಿಯನ್ನು ಗೇಲಿ ಮಾಡಿದರು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಬೇಕು ಎಂದು ಹಲವು ಅಭಿಮಾನಿಗಳು ಒತ್ತಾಯಿಸಿದ್ದಾರೆ.

Written by - Puttaraj K Alur | Last Updated : Jan 19, 2022, 04:41 PM IST
  • ಸೌರವ್ ಗಂಗೂಲಿಯನ್ನು ಬಿಸಿಸಿಐನಿಂದ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆಯೇ?
  • ಸೌರವ್ ಗಂಗೂಲಿ ಮತ್ತು ಜಯ್ ಶಾ ಅಧಿಕಾರಾವಧಿ ಈ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ
  • ಗಂಗೂಲಿ ಮತ್ತು ವಿರಾಟ್ ನಡುವಿನ ಸಂಬಂಧದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ
Sourav Ganguly: ಬಿಸಿಸಿಐಗೆ ಶೀಘ್ರವೇ ಗುಡ್ ಬೈ ಹೇಳುತ್ತಾರಾ ಸೌರವ್ ಗಂಗೂಲಿ..? title=
ಬಿಸಿಸಿಐಗೆ ಶೀಘ್ರವೇ ಗಂಗೂಲಿ ಗುಡ್ ಬೈ?

ನವದೆಹಲಿ: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ(Virat Kohli) ಇತ್ತೀಚೆಗೆ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ವಿಶ್ವ ಕ್ರಿಕೆಟ್‌ಗೆ ಅಚ್ಚರಿ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿಯ ಈ ನಿರ್ಧಾರದ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಕೈವಾಡವಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಸೌರವ್ ಗಂಗೂಲಿ ವಿರುದ್ಧ ಗೇಲಿ ಮಾಡಿದರು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಬೇಕೆಂದು ಕೂಡ ಒತ್ತಾಯಿಸಿದ್ದಾರೆ.

ಬಿಸಿಸಿಐಗೆ ಶೀಘ್ರವೇ ಗಂಗೂಲಿ ಗುಡ್ ಬೈ?

ಸೌರವ್ ಗಂಗೂಲಿ ಶೀಘ್ರದಲ್ಲೇ ಬಿಸಿಸಿಐ ಅಧ್ಯಕ್ಷ ಸ್ಥಾನ(BCCI President)ದಿಂದ ಬಿಡುಗಡೆಗೊಳ್ಳಬಹುದು. ಏಕೆಂದರೆ ಸೌರವ್ ಗಂಗೂಲಿ ಅವರ ಅವಧಿ ಇದೇ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. ಸೌರವ್ ಗಂಗೂಲಿ ಹೊರತುಪಡಿಸಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರ(Ganguly BCCI Tenure)ವೂ ಈ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರು ಅಕ್ಟೋಬರ್ 2019ರಲ್ಲಿ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು 2018ರಲ್ಲಿ ಬಿಸಿಸಿಐನಲ್ಲಿ ಇಬ್ಬರ ಅಧಿಕಾರಾವಧಿಯು ಕೊನೆಗೊಂಡಾಗ, ಬಿಸಿಸಿಐ ಕೂಲಿಂಗ್ ಆಫ್ ಅವಧಿಯ ನಿಯಮವನ್ನು ತಿದ್ದುಪಡಿ ಮಾಡುವ ಮೂಲಕ ಅಧಿಕಾರಾವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿತು.

ಇದನ್ನೂ ಓದಿ: ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಲಿದ್ದಾರೆ ಅಹಮದಾಬಾದ್‌ ತಂಡದ ಮೂವರು ಅಪಾಯಕಾರಿ ಆಟಗಾರರು

ಸೌರವ್ ಗಂಗೂಲಿ ಅವರು ಜಂಟಿ ಕಾರ್ಯದರ್ಶಿಯಾಗಿದ್ದರು ಮತ್ತು ನಂತರ ಬಂಗಾಳದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಮತ್ತೊಂದೆಡೆ ಜಯ್ ಶಾ ಅವರು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅಕ್ಟೋಬರ್ 2022ರ ನಂತರ ಇಬ್ಬರ ಅಧಿಕಾರಾವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕಾರಿಯಾಗಿದೆ. ಬಿಸಿಸಿಐನ ಹೊಸ ನಿಯಮದ ಪ್ರಕಾರ ರಾಜ್ಯ ಸಂಘ ಅಥವಾ ಮಂಡಳಿಯಲ್ಲಿ 6 ವರ್ಷಗಳ ಅಧಿಕಾರಾವಧಿಯ ನಂತರ 3 ವರ್ಷಗಳ ಕೂಲಿಂಗ್ ಆಫ್ ಅವಧಿಗೆ ಹೋಗುವುದು ಕಡ್ಡಾಯವಾಗಿದೆ.

ಬಿಸಿಸಿಐಗೆ ಹೊಸ ಅಧ್ಯಕ್ಷರ ಆಯ್ಕೆ ಸಾಧ್ಯತೆ

ಗಂಗೂಲಿ ಮತ್ತು ಶಾ(Jay Shah) ಅವರು ಅಕ್ಟೋಬರ್ 2019ರಲ್ಲಿ ಅಧಿಕಾರ ವಹಿಸಿಕೊಂಡರು. ನಂತರ ರಾಜ್ಯ ಮತ್ತು ರಾಷ್ಟ್ರೀಯ ಘಟಕದಲ್ಲಿ ಅವರ 6 ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ 9 ತಿಂಗಳು ಮಾತ್ರ ಉಳಿದಿತ್ತು. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಈ ಅರ್ಜಿಯಲ್ಲಿ 9 ಆಗಸ್ಟ್ 2018ರಿಂದ ಕೂಲಿಂಗ್ ಆಫ್ ಅವಧಿಗೆ ಹೋಗುವ ನಿಯಮವನ್ನು ತಿದ್ದುಪಡಿ ಮಾಡುವ ಮೂಲಕ ಮಂಡಳಿಯು ತನ್ನ ಪದಾಧಿಕಾರಿಗಳ ಅವಧಿಯನ್ನು ವಿಸ್ತರಿಸಲು ಅನುಮೋದಿಸಿದೆ ಎಂದು ಹೇಳಲಾಗಿದೆ.

ಆದರೆ ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ ಗಂಗೂಲಿ ಮತ್ತು ಶಾ ಅವರ ಅಧಿಕಾರಾವಧಿಯು ಈ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದ್ದು, ಬಿಸಿಸಿಐಗೆ ಹೊಸ ಅಧ್ಯಕ್ಷರು ಆಯ್ಕೆಯಾಗುವ ಸಾಧ್ಯತೆಯಿದೆ. ಗಂಗೂಲಿ ಮತ್ತು ಶಾ ಅವರ ಅಧಿಕಾರಾವಧಿ(BCCI President Tenure Extension)ಯಲ್ಲಿ ಅನೇಕ ಮಾಜಿ ಕ್ರಿಕೆಟಿಗರು ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಸಹ ಪಡೆದರು. ಇದೇ ಸಮಯದಲ್ಲಿ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಲು ಒಪ್ಪಿಕೊಂಡರು. ವಿವಿಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಇದು ಮಾತ್ರವಲ್ಲದೆ ಮಾಜಿ ನಾಯಕ ಎಂ.ಎಸ್.ಧೊನಿ ಅವರನ್ನು 2021ರ ಟಿ-20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: Shreyas Iyer: ಲಕ್ನೋ-ಅಹಮದಾಬಾದ್ ಅಲ್ಲ, ಶ್ರೇಯಸ್ ಅಯ್ಯರ್ ಈ ತಂಡದ ನಾಯಕನಾಗಬಹುದು!

ಗಂಗೂಲಿ & ವಿರಾಟ್ ನಡುವಿನ ಸಂಬಂಧದ ಬಗ್ಗೆ ಚರ್ಚೆ

ಈ ಸಾಧನೆಗಳ ಹೊರತಾಗಿಯೂ ಸೌರವ್ ಗಂಗೂಲಿ(Sourav Ganguly) ದೊಡ್ಡ ವಿವಾದಗಳ ಭಾಗವಾದರು. ಸೌರವ್ ಗಂಗೂಲಿ ಮತ್ತು ವಿರಾಟ್ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ತಮ್ಮ ಟಿ-20 ನಾಯಕತ್ವ ವಿಚಾರದ ಬಗ್ಗೆ ಮಂಡಳಿಯಿಂದ ಯಾವುದೇ ಮಾತುಕತೆ ನಡೆದಿರಲಿಲ್ಲವೆಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು. ಅದೇ ವೇಳೆ ಟಿ-20 ನಾಯಕತ್ವವನ್ನು ಬಿಟ್ಟುಕೊಡದಂತೆ ವಿರಾಟ್‌ಗೆ ಮನವಿ ಮಾಡಿದ್ದೆ ಎಂದು ಗಂಗೂಲಿ ಸಹ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News