Babar Azam Whatsapp Chat Leak: ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್’ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಬಹುತೇಕ ಸೆಮಿಫೈನಲ್ ರೇಸ್’ನಿಂದ ಹೊರಬಿದ್ದಿರುವ ಪಾಕ್ ಆಟಗಾರರು ಕಳೆದ 5 ತಿಂಗಳಿಂದ ಸಂಬಳ ಸ್ವೀಕರಿಸಿಲ್ಲ ಎಂಬ ವದಂತಿ ಹಬ್ಬಿತ್ತು. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ಝಕಾ ಅಶ್ರಫ್ ಭಾನುವಾರ ಲೈವ್ ಟಿವಿಯಲ್ಲಿ ಬಾಬರ್ ಅಜಮ್ ಅವರ ವೈಯಕ್ತಿಕ ಚಾಟ್ ಅನ್ನು ಸೋರಿಕೆ ಮಾಡಿದ್ದಾರೆ.
ಪಿಸಿಬಿ ಮುಖ್ಯಸ್ಥರ ಈ ಕ್ರಮದ ಬಗ್ಗೆ ಇದೀಗ ಪ್ರಶ್ನೆಗಳು ಭುಗಿಲೆದ್ದಿವೆ. ಈ ರೀತಿ ಮೆಸೇಜ್ ಬಹಿರಂಗ ಪಡಿಸಲು ಬಾಬರ್ ಆಜಮ್ ಅನುಮತಿ ನೀಡಿದ್ದಾರೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ. ಅಂದಹಾಗೆ ಈ ರೀತಿ ಟಿವಿಯಲ್ಲಿ ಖಾಸಗಿ ಸಂಭಾಷಣೆಗಳನ್ನು ಸೋರಿಕೆ ಮಾಡುವುದು ಯಾವುದೇ ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: World Cup 2023: ಶ್ರೀಲಂಕಾ ಸೋಲಿನಿಂದ ಅಧಿಕೃತವಾಗಿ ಸೆಮೀಸ್ ಪ್ರವೇಶಿಸಿದ ಭಾರತ! ಹೇಗೆ ಗೊತ್ತಾ?
ಝಾಕಾ ಅಶ್ರಫ್ ಉದ್ದೇಶಪೂರ್ವಕವಾಗಿ ಬಾಬರ್ ಆಜಮ್ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಮೆಸೇಜ್’ಗಳಿಗೂ ಝಕಾ ರಿಪ್ಲೈ ಮಾಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮತ್ತು ನಾಯಕ ರಶೀದ್ ಲತೀಫ್ ಶನಿವಾರ ಆರೋಪ ಮಾಡಿದ್ದರು.
ಆದರೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಝಕಾ ಅಶ್ರಫ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಪ್ರಯತ್ನಿಸಲಿಲ್ಲ ಎಂದು ಹೇಳಿದ್ದಾರೆ. “ನಾನು ಬಾಬರ್’ನ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಲತೀಫ್ ಹೇಳುತ್ತಿದ್ದಾನೆ. ಅವನು ನನಗೆ ಕರೆಯಲೇ ಮಾಡಿಲ್ಲ. ನಿಜವಾಗಿ ಹೇಳಬೇಕೆಂದರೆ ಬಾಬರ್ ಮುಖ್ಯ ಕ್ರಿಕೆಟ್ ಅಧಿಕಾರಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ನಿರ್ದೇಶಕರೊಂದಿಗೆ ಮಾತನಾಡಬೇಕು” ಎಂದು ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಅಶ್ರಫ್ ಬಾಬರ್ ಆಜಮ್ ಅವರ ವಾಟ್ಸಾಪ್ ಚಾಟ್’ಗಳನ್ನು ಸಂದರ್ಶಕರಿಗೆ ತೋರಿಸಿದ್ದಾರೆ. ಈ ಸಂಭಾಷಣೆಯು ಬಾಬರ್ ಮತ್ತು ಪಿಸಿಬಿ ಸಿಇಒ ಸಲ್ಮಾನ್ ನಾಸಿರ್ ನಡುವಿನ ಸಂಭಾಷಣೆಯ ಭಾಗವಾಗಿದೆ.
ಬಾಬರ್ ಆಜಂ ಸಂದೇಶದಲ್ಲಿ ಏನಿತ್ತು?
ಸಲ್ಮಾನ್ ನಾಸಿರ್- “ಬಾಬರ್.. ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಝಕಾ ಅಶ್ರಫ್ ಅವರಿಗೆ ಕರೆ ಮಾಡಿದ್ದು, ಅವರು ಉತ್ತರಿಸಿಲ್ಲ ಎಂದು ವರದಿಯಾಗುತ್ತಿದೆ. ಇದು ನಿಜವೇ? ಅವರಿಗೆ ಫೋನ್ ಕಾಲ್ ಮಾಡಿದ್ದೀರಾ?”
ಬಾಬರ್- “ಸಲಾಂ ಸಲ್ಮಾನ್ ಭಾಯ್… ನಾನು ಸರ್’ಗೆ ಯಾವುದೇ ಕರೆ ಮಾಡಿಲ್ಲ”
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಾಸಾದ್ರೆ ಹೊರಗುಳಿಯೋದು ಶಮಿ ಅಲ್ಲ… ಈ ಸ್ಟಾರ್ ಬ್ಯಾಟ್ಸ್’ಮನ್!
ಹೀಗೆ ಇವರಿಬ್ಬರ ಸಂಭಾಷಣೆ ನಡೆದಿದ್ದು, ಇದರ ಸ್ಕ್ರೀನ್ ಶಾಟ್’ಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.