ಕೊಹ್ಲಿಯ ಶ್ರೇಷ್ಠ ದಾಖಲೆಗಳ ಮಧ್ಯೆ ಅಬ್ಬರಿಸಿದ ಶ್ರೇಯಸ್ ಅಯ್ಯರ್! ಈ ರೆಕಾರ್ಡ್ ಬರೆದವರು ಭಾರತದಲ್ಲಿ ಯಾರೂ ಇಲ್ಲ…

Shreyas Iyer World Record, Cricket News in Kannada: ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೇಯಸ್ ಅಯ್ಯರ್ ಬಿರುಸಿನ ಇನ್ನಿಂಗ್ಸ್ ಆಡಿದ್ದು ಮಾತ್ರವಲ್ಲ, ಇನ್ನಿಂಗ್ಸ್’ನಲ್ಲಿ ತನಗೆ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ನೀಡಿದ್ದನ್ನು ಪ್ರಶ್ನಿಸುತ್ತಿದ್ದ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

Written by - Bhavishya Shetty | Last Updated : Nov 15, 2023, 06:41 PM IST
    • ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದ ಶ್ರೇಯಸ್ ಅಯ್ಯರ್
    • 67 ಎಸೆತಗಳಲ್ಲಿ ಶತಕ ಗಳಿಸಲು ಯಾವುದೇ ಆಟಗಾರನಿಗೆ ಸಾಧ್ಯವಾಗಿರಲಿಲ್ಲ
    • ಶ್ರೇಯಸ್ ಅಯ್ಯರ್ ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ
ಕೊಹ್ಲಿಯ ಶ್ರೇಷ್ಠ ದಾಖಲೆಗಳ ಮಧ್ಯೆ ಅಬ್ಬರಿಸಿದ ಶ್ರೇಯಸ್ ಅಯ್ಯರ್! ಈ ರೆಕಾರ್ಡ್ ಬರೆದವರು ಭಾರತದಲ್ಲಿ ಯಾರೂ ಇಲ್ಲ… title=
Shreyas Iyer World Record

Shreyas Iyer World Record: 2023ರ ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾಗೆ ಬಿಗ್ ಶಾಕ್…! ಗಾಯಕ್ಕೆ ತುತ್ತಾದ ಶುಭ್ಮನ್ ಗಿಲ್ ಪಂದ್ಯದಿಂದ ಔಟ್

ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೇಯಸ್ ಅಯ್ಯರ್ ಬಿರುಸಿನ ಇನ್ನಿಂಗ್ಸ್ ಆಡಿದ್ದು ಮಾತ್ರವಲ್ಲ, ಇನ್ನಿಂಗ್ಸ್’ನಲ್ಲಿ ತನಗೆ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ನೀಡಿದ್ದನ್ನು ಪ್ರಶ್ನಿಸುತ್ತಿದ್ದ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ಈ ಶತಕದೊಂದಿಗೆ ಶ್ರೇಯಸ್ ಅಯ್ಯರ್ ವಿಶ್ವದಾಖಲೆಯನ್ನು ಬ್ರೇಕ್ ಮಾಡಿದ್ದು, ವಿಶ್ವಕಪ್ ನಾಕ್  ಔಟ್ ನಲ್ಲಿ ಅತಿವೇಗದ ಶತಕ ಬಾರಿಸಿದ ಆಟಗಾರ ಎಂದೆನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ವಿಶ್ವಕಪ್‌’ನ ನಾಕ್‌ ಔಟ್‌ನಲ್ಲಿ 67 ಎಸೆತಗಳಲ್ಲಿ ಶತಕ ಗಳಿಸಲು ಯಾವುದೇ ಆಟಗಾರನಿಗೆ ಸಾಧ್ಯವಾಗಿರಲಿಲ್ಲ.

ಶ್ರೇಯಸ್ ಅಯ್ಯರ್ ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ವಿಶ್ವಕಪ್‌’ನಲ್ಲಿ 500 ರನ್‌’ಗಳ ಗಡಿ ದಾಟಿದ ಏಕೈಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌’ಮನ್ ಇವರೇ. ಅಷ್ಟೇ ಅಲ್ಲ, ಶ್ರೇಯಸ್ ಅಯ್ಯರ್ ತಮ್ಮ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದೊಡ್ಡ ದಾಖಲೆಯನ್ನು ಸಹ ಮಾಡಿದ್ದಾರೆ. ಅಯ್ಯರ್ ಯಾವುದೇ ವಿಶ್ವಕಪ್ ಪಂದ್ಯದಲ್ಲಿ ಇಷ್ಟು ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ.

ಇದನ್ನೂ ಓದಿ: ಅಂದು ಕ್ರೀಡಾ ನಿರೂಪಕಿಯಾಗಿದ್ದ ಈ ಬಾಲಕಿ ಇಂದು ಟೀಂ ಇಂಡಿಯಾದ ಸ್ಟಾರ್ ವೇಗಿಯ ಪತ್ನಿ-5 ಕೋಟಿ ಆಸ್ತಿಯ ಮಾಲಕಿ! ಯಾರೆಂದು ತಿಳಿಯಿತೇ ಈ ಸುಂದರಿ?

ವಿಶ್ವಕಪ್ ಸೆಮಿಫೈನಲ್‌’ನಲ್ಲಿ ಶ್ರೇಯಸ್ ಅಯ್ಯರ್ ಅವರ ಇನ್ನಿಂಗ್ಸ್ ತುಂಬಾ ವಿಶೇಷವಾಗಿದೆ. ಶುಭಮನ್ ಗಿಲ್ ಗಾಯಗೊಂಡಾಗ ಶ್ರೇಯಸ್ ಅಯ್ಯರ್ ಕ್ರೀಸ್‌’ನಲ್ಲಿ ಹೆಜ್ಜೆ ಹಾಕಿದ್ದರು. ಆ ವೇಳೆ ಗಿಲ್ ಅತ್ಯಂತ ವೇಗವಾಗಿ ರನ್ ಗಳಿಸುತ್ತಿದ್ದರು. ಟೀಂ ಇಂಡಿಯಾ ರನ್ ರೇಟ್ ಕಾಯ್ದುಕೊಳ್ಳುವುದು ಅಯ್ಯರ್ ಅವರ ಜವಾಬ್ದಾರಿಯಾಗಿತ್ತು. ಅಂತೆಯೇ ಅಯ್ಯರ್ ಯಶಸ್ವಿಯಾಗಿ, ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದರು. ಅಯ್ಯರ್ ವಿರಾಟ್ ಕೊಹ್ಲಿಯೊಂದಿಗೆ 128 ಎಸೆತಗಳಲ್ಲಿ 163 ರನ್ ಜೊತೆಯಾಟ ಕೂಡ ನಡೆಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News