ನವದೆಹಲಿ: ಸೌತಾಂಪ್ಟನ್ ನ್ನಿನ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಎರಡೇ ದಿನದಾಟಕ್ಕೆ ಭಾರತ ಮೂರು ವಿಕೆಟ್ ಗಳನ್ನು ಕಳೆದುಕೊಂಡು 146 ರನ್ ಗಳಿಸಿದೆ.
💯 runs up on the board for 🇮🇳
Virat Kohli and Ajinkya Rahane are battling it out in the middle as the @BLACKCAPS keep the pressure up.#WTC21 Final | #INDvNZ | https://t.co/3zFT52GWyD pic.twitter.com/QTEEWCY9cq
— ICC (@ICC) June 19, 2021
ಟಾಸ್ ಗೆದ್ದು ಭಾರತಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ಕಲ್ಪಿಸಿದ ನ್ಯೂಜಿಲೆಂಡ್ ತಂಡವು ಆರಂಭದಲ್ಲಿ ವಿಕೆಟ್ ತೆಗೆಯಲು ಪರದಾಡಿದರು. ಒಂದು ಹಂತದಲ್ಲಿ ಆರಂಭಿಕ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಅವರು ನೆಲೆಯೂರುವ ಸಾಧ್ಯತೆಗಳು ಕಂಡುಬಂದಿದ್ದವು ಇಬ್ಬರು ಕ್ರಮವಾಗಿ 34,28 ರನ್ ಗಳಿಸಿದರು.ಆದರೆ ಇಬ್ಬರು ತಂಡದ ಮೊತ್ತ ಅರವತ್ತರ ಗಡಿ ದಾಟುವಷ್ಟರಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು.
ಇದನ್ನೂ ಓದಿ: ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!
ಇದಾದ ನಂತರ ಬಂದ ಚೇತೆಶ್ವರ್ ಪೂಜಾರ್ ಕೇವಲ ಎಂಟು ರನ್ ಗಳಿಸುವ ಮೂಲಕ ಬೌಲ್ಟ್ ಎಸೆತದಲ್ಲಿ ಎಲ್ಬಿಡಬ್ಲೂ ಗೆ ಔಟಾದರು. ಆ ಮೂಲಕ ಭಾರತ ತಂಡವು ಕೇವಲ 88 ರನ್ ಗಳಿಗೆ ಮೂರು ವಿಕೆಟ್ ನಷ್ಟವಾಗಿದ್ದರಿಂದಾಗಿ ಭಾರತ ತಂಡವು ಸಂಕಷ್ಟಕ್ಕೆ ಸಿಲುಕಿತು.
Bad light plays spoilsport and that's stumps in Southampton!
India finish day two on 146/3 with Virat Kohli on 44* and Ajinkya Rahane keeping him company on 29*.#WTC21 Final | #INDvNZ | https://t.co/4vtSUyliQF pic.twitter.com/Xq9vD448Zk
— ICC (@ICC) June 19, 2021
ಈ ಹಂತದಲ್ಲಿ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ (Virat Kohli) ಹಾಗೂ ಅಜಿಂಕ್ಯಾ ರಹಾನೆ (Ajinkya Rahane ) ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು.ಈಗ ಇಬ್ಬರು ಆಟಗಾರರು ಕ್ರಮವಾಗಿ 44,29 ರನ್ ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದಿದ್ದಾರೆ. ಈಗ ಎರಡನೇ ದಿನದಾಂತ್ಯಕ್ಕೆ ಭಾರತ ತಂಡವು ಮೂರು ವಿಕೆಟ್ ಗಳನ್ನು ಕಳೆದುಕೊಂಡು 146 ರನ್ ಗಳನ್ನು ಗಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.