ರಿಯಲ್ ಹೀರೋ ನ್ಯಾ. ಜಗದೀಪ್ ಸಿಂಗ್ ..!

ದಶಕದ ಪ್ರಕರಣಕ್ಕೆ ತೆರೆ ಎಳೆದ, ಅತ್ಯಾಚಾರಿ ಗುರ್ಮಿತ್ ರಾಮ್ ರಹೀಮ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಜಗದೀಪ್ ಸಿಂಗ್ ನಿಜವಾಗಿಯೂ ಒಬ್ಬ ಹೀರೋ.  ಹರ್ಯಾಣದ ಹೃದಯಭಾಗವಾದ ಜಿಂದ್ ಪ್ರಾಂತ್ಯದವರಾದ ಜಗದೀಪ್ ಪಂಜಾಬ್ ವಿವಿಯಿಂದ  2000ನೇ ಇಸವಿಯಲ್ಲಿ ಕಾನೂನು ಪದವಿ ಪಡೆದರು. ವಿದ್ಯಾರ್ಥಿ ದೆಸೆಯಿಂದಲೂ ಬಹಳ ಬುದ್ದಿವಂತರಾಗಿದ್ದ ಜಗದೀಪ್ ಕೇವಲ ಸಹಪಾಠಿಗಳು ಮತ್ತು ಸಹೋದ್ಯೋಗಿಗಳಿಂದಷ್ಟೇ ಅಲ್ಲದೆ ಜನಸಾಮಾನ್ಯರಿಂದಲೂ ಬಹಳಷ್ಟು ಪ್ರಶಂಸೆ ಪಡೆದಿದ್ದಾರೆ.

Last Updated : Aug 28, 2017, 05:35 PM IST
ರಿಯಲ್ ಹೀರೋ ನ್ಯಾ. ಜಗದೀಪ್ ಸಿಂಗ್ ..!  title=

ರೋಹ್ಟಕ್ :ದಶಕದ ಪ್ರಕರಣಕ್ಕೆ ತೆರೆ ಎಳೆದ, ಅತ್ಯಾಚಾರಿ ಗುರ್ಮಿತ್ ರಾಮ್ ರಹೀಮ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಜಗದೀಪ್ ಸಿಂಗ್ ನಿಜವಾಗಿಯೂ ಒಬ್ಬ ಹೀರೋ.  ಹರ್ಯಾಣದ ಹೃದಯಭಾಗವಾದ ಜಿಂದ್ ಪ್ರಾಂತ್ಯದವರಾದ ಜಗದೀಪ್ ಪಂಜಾಬ್ ವಿವಿಯಿಂದ  2000ನೇ ಇಸವಿಯಲ್ಲಿ ಕಾನೂನು ಪದವಿ ಪಡೆದರು. ವಿದ್ಯಾರ್ಥಿ ದೆಸೆಯಿಂದಲೂ ಬಹಳ ಬುದ್ದಿವಂತರಾಗಿದ್ದ ಜಗದೀಪ್ ಕೇವಲ ಸಹಪಾಠಿಗಳು ಮತ್ತು ಸಹೋದ್ಯೋಗಿಗಳಿಂದಷ್ಟೇ ಅಲ್ಲದೆ ಜನಸಾಮಾನ್ಯರಿಂದಲೂ ಬಹಳಷ್ಟು ಪ್ರಶಂಸೆ ಪಡೆದಿದ್ದಾರೆ.

ಕ್ರಿಮಿನಲ್ ಲಾಯರ್ ಆಗಿ ಹೆಸರು ಮಾಡಿರುವ ಜಗದೀಪ್ ಸಿಂಗ್, 2000ದಿಂದ 2012ರವರೆಗೆ ಪಂಜಾಬ್ ಮತ್ತು ಹರಿಯಾಣ ಹೈಕೊರ್ಟ್ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.  2012ರಲ್ಲಿ ಹರ್ಯಾಣದ ಸೋನೆಪತ್ ಭಾಗದಲ್ಲಿ ಕಾನೂನು ಸೇವೆ ಸಲ್ಲಿಸಿದ್ದಾರೆ. ಸಹೋದ್ಯೊಗಿಗಳ ಕಣ್ಣಲ್ಲಿ ಸರಳ ಹಾಗೂ ಮಿತಭಾಷಿ ಎಂದು ಪರಿಚಿತ. 2016ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಆಗಿ ನೇಮಕಗೊಂಡರು. 
ಹಲವಾರು ಬಾರಿ ತಮ್ಮ ಮಾನವೀಯ ಹಾಗೂ ಜನಸ್ನೇಹಿ ಸ್ಪಂದನೆಗಳಿಸಿದ್ದಾರೆ.

2016ರಲ್ಲಿ ತಾವೇ ರಸ್ತೆಗಿಳಿದು ನಾಲ್ಕು ಜೀವ ಉಳಿಸಿದ್ದ ನ್ಯಾ.ಜಗದೀಪ್ ಪಂಚಕುಲದಿಂದ ಹಿಸ್ಸಾರ್ ಗೆ ಹೋಗುತ್ತಿದ್ದಾಗ ನಡೆದ ಘಟನೆ ಅಪಘಾತದಲ್ಲಿ ಗಾಯಗೊಂಡು ನಾಲ್ವರು ರಸ್ತೆಯಲ್ಲೇ ಒದ್ದಾಡುತ್ತಿದ್ದರು.

ಆಂಬುಲೆನ್ಸ್ ಗೆ ಕಾದು ಕಾದು ತಾವೇ ಫೋನ್ ಮಾಡಿದ್ದ ಜಗದೀಪ್ “ಆಂಬುಲೆನ್ಸ್ ಏನು ಹಾರಿಕೊಂಡು ಬರುವುದೇ” ಎಂದಿದ್ದರು. ಆಸ್ಪತ್ರೆ ಸಿಬ್ಬಂದಿಗೆ ಪೋನ್ ನಲ್ಲಿ ಮಾತಾಡುತ್ತಿರೋರು ಯಾರೆಂದು ಗೊತ್ತಿರದೆ ಸಿಬ್ಬಂದಿ ದರ್ಪ ತೋರಿದ್ದರು. ತಮ್ಮ ಐಡೆಂಟಿಟಿ ಹೇರಿಕೆ ಇಲ್ಲದೆ ಸಹಾಯಕ್ಕೆ ಧಾವಿಸಿದ್ದ ಜಗದೀಪ್ ಸಿಂಗ್ 
ಕೂಡಲೇ ಸ್ವಲ್ಪವೂ ತಡಮಾಡದೆ ಖಾಸಗಿ ವಾಹನದಲ್ಲಿ ಯಾರ ಸಹಾಯವೂ ಇಲ್ಲದೆ ತಾವೇ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದ್ದರು ಜಗದೀಪ್.
 
ನ್ಯಾ. ಜಗದೀಪ್ ಸಿಂಗ್  ಇದೀಗ ಕಾನೂನಿನ ತೆಕ್ಕೆಗೆ ಸಿಗದೆ ಆಟವಾಡುತ್ತಿದ್ದ ಅತ್ಯಾಚಾರಿ ಬಾಬಾ ಗುರ್ಮಿತ್ ಗೆ ಖಡಕ್ ಶಿಕ್ಷೆ ನೀಡಿ ಕಡೆಗೂ ಬುದ್ಧಿ ಕಲಿಸಿದ್ದಾರೆ. ಹಿಂಸಾಚಾರದೊಂದಿಗೆ ಅಬ್ಬರಿಸಿದ್ದ ಗುರ್ಮಿತ್ ಸಿಂಗ್ ಕಣ್ಣಲ್ಲಿ ನೀರು ತರಿಸಿದ ದಿಟ್ಟ ನ್ಯಾಯಾಧೀಶ, ಶಿಕ್ಷೆ ಪ್ರಮಾಣ ಸಡಿಲಗೊಳಿಸುವಂತೆ ಗೋಳಾಡಿದ ಢೋಂಗಿ ಗುರ್ಮಿತ್ ನಾಟಕ ಪರಿಗಣಿಸದೆ ಜಗದೀಪ್ ರಿಂದ ಶಿಕ್ಷೆ ನೀಡುವ ಮೂಲಕ ದಶಕದ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ನೀಡಿದ್ದಾರೆ.

Trending News