Tamannaah Bhatia : ಮಿಲ್ಕಿ ಬ್ಯೂಟಿಗೆ ಸೈಬರ್ ಶಾಕ್.. ‌ತಮನ್ನಾ ಭಾಟಿಯಾಗೆ ಸಮನ್ಸ್ !

Tamannaah Bhatia: ಮಹಾರಾಷ್ಟ್ರ ಸೈಬರ್ ಸೆಲ್ ತಮನ್ನಾ ಭಾಟಿಯಾ ಅವರಿಗೆ ಸಮನ್ಸ್ ಕಳುಹಿಸಿದೆ ಎಂದು ವರದಿಯಾಗಿದೆ. 

Written by - Chetana Devarmani | Last Updated : Apr 25, 2024, 10:33 AM IST
    • ಸೌತ್‌ ಬ್ಯೂಟಿ ತಮನ್ನಾ ಭಾಟಿಯಾ
    • ತಮನ್ನಾ ಭಾಟಿಯಾಗೆ ಸಮನ್ಸ್ ಜಾರಿ
    • ಮಹಾರಾಷ್ಟ್ರ ಸೈಬರ್ ಸೆಲ್ ನಿಂದ ನೋಟಿಸ್‌
Tamannaah Bhatia : ಮಿಲ್ಕಿ ಬ್ಯೂಟಿಗೆ ಸೈಬರ್ ಶಾಕ್.. ‌ತಮನ್ನಾ ಭಾಟಿಯಾಗೆ ಸಮನ್ಸ್ ! title=

Cyber Cell summons Tamannaah Bhatia: ಸೌತ್‌ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ನಟನಾ ಕೌಶಲ್ಯದಿಂದ ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಸದ್ಯ ತಮನ್ನಾ ಭಾಟಿಯಾಗೆ ಸಂಕಷ್ಟ ಎದುರಾಗಿದೆ. ತಮನ್ನಾ ಭಾಟಿಯಾ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಮಹಾರಾಷ್ಟ್ರ ಸೈಬರ್ ಸೆಲ್ ತಮನ್ನಾ ಭಾಟಿಯಾ ಅವರಿಗೆ ಸಮನ್ಸ್ ಕಳುಹಿಸಿದೆ ಎಂದು ವರದಿಯಾಗಿದೆ. 

ಸಂಜಯ್ ದತ್ ನಂತರ ಇದೀಗ ನಟಿ ತಮನ್ನಾ ಅವರ ಹೆಸರೂ ಅಕ್ರಮ ಸ್ಟ್ರೀಮಿಂಗ್ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಸೈಬರ್‌ ಸೆಲ್‌ ಅಧಿಕಾರಿಗಳು ತಮನ್ನಾಗೆ ನೋಟಿಸ್‌ ನೀಡಿದ್ದಾರೆ. 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ವಯಾಕಾಮ್ 18, ಐಪಿಎಲ್ 2023 ರ ಅಕ್ರಮ ಸ್ಟ್ರೀಮಿಂಗ್‌ನಿಂದಾಗಿ ಭಾರಿ ನಷ್ಟವನ್ನು ಅನುಭವಿಸಬೇಕಾಯಿತು. ಈ ಹಿನ್ನೆಲೆ ಕೇಸ್‌ ದಾಖಲಿಸಲಾಗಿತ್ತು. ಈಗ ಈ ಪ್ರಕರಣದಲ್ಲಿ ತಮನ್ನಾ ಭಾಟಿಯಾ ಅವರ ಹೆಸರು ಕೂಡ ಕೇಳಿಬಂದಿದ್ದು, ಏಪ್ರಿಲ್ 29 ರಂದು ಸೈಬರ್ ಶಾಖೆಯ ಮುಂದೆ ಹಾಜರಾಗಬೇಕೆಂದು ತಿಳಿಸಿ ಮಹಾರಾಷ್ಟ್ರ ಸೈಬರ್ ಅಧಿಕಾರಿಗಳು ತಮನ್ನಾ ಭಾಟಿಯಾಗೆ ಸಮನ್ಸ್ ಕಳುಹಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !

ಮಹಾರಾಷ್ಟ್ರದ ಸೈಬರ್ ಸೆಲ್ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರಿಗೆ ಸಮನ್ಸ್ ನೀಡಿದೆ. ಮಹದೇವ್ ಬೆಟ್ಟಿಂಗ್ ಆಪ್‌ನ ಅಂಗ ಸಂಸ್ಥೆ ಫೇರ್‌ಪ್ಲೇ ಪ್ರಚಾರಕ್ಕೆ ಸಂಬಂಧಿಸಿದಂತೆ ಸೈಬರ್ ಸೆಲ್ ತಮನ್ನಾಗೆ ಸಮನ್ಸ್ ಕಳುಹಿಸಿದೆ ಎಂದು ಹೇಳಲಾಗಿದೆ. ಈಗ ಈ ಪ್ರಕರಣದಲ್ಲಿ ತಮನ್ನಾ ಭಾಟಿಯಾ ಏಪ್ರಿಲ್ 29 ರಂದು ಸೈಬರ್ ಅಧಿಕಾರಿಗಳ ಮುಂದೆ ಹಾಜರಾಗಬೇಕು. ಫೇರ್‌ಪ್ಲೇ ಅಪ್ಲಿಕೇಶನ್‌ನಲ್ಲಿ ಐಪಿಎಲ್ 2023 ರ ಅಕ್ರಮ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ನಟಿ ತಮನ್ನಾ ಅವರನ್ನು ವಿಚಾರಣೆಗೆ ಕರೆದಿದೆ.

ಈ ಸಂಬಂಧ ಏಪ್ರಿಲ್ 23 ರಂದು ನಟ ಸಂಜಯ್ ದತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಅವರು ದೇಶದಿಂದ ಹೊರಗಿರುವ ಕಾರಣ ತಮ್ಮ ಹೇಳಿಕೆಯನ್ನು ದಾಖಲಿಸಲು ಮುಂದಿನ ದಿನಾಂಕ ಮತ್ತು ಸಮಯವನ್ನು ನೀಡುವಂತೆ ಸೈಬರ್ ಸೆಲ್‌ಗೆ ಮನವಿ ಮಾಡಿದರು.

ಇದನ್ನೂ ಓದಿ: Richest Actress: 10 ಸಾವಿರ ಸೀರೆ, 1250 ಕೆಜಿ ಬೆಳ್ಳಿ, 28 ಕೆಜಿ ಚಿನ್ನ.. ಈಕೆ ದೇಶದ ಶ್ರೀಮಂತ ನಟಿ, ಕನ್ನಡದ ಬೆಡಗಿ ಯಾರು ಗೊತ್ತಾ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News