ವಿಮಾನ ಇಂಧನ ಬೆಲೆಯಲ್ಲಿ ದಾಖಲೆಯ ಏರಿಕೆಯ ನಂತರ, ವಿಮಾನ ಯಾನ ದರಗಳು ಬಲು ದುಬಾರಿಯಾಗಲಿವೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಸ್ಪೈಸ್ಜೆಟ್ ಅಧ್ಯಕ್ಷ ಅಜಯ್ ಸಿಂಗ್, ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ವಿಮಾನ ದರವನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸುವುದು ಅಗತ್ಯ ಎಂದಿದ್ದಾರೆ.
ಈ ವರ್ಷ ಸತತ ಆರನೇ ಭಾರಿಗೆ ಬೆಲೆ ಏರಿಕೆಯಾಗಿದೆ. ಮೊದಲ ಬಾರಿಗೆ ಪ್ರತಿ ಕಿಲೋಲೀಟರ್ಗೆ 1 ಲಕ್ಷ ರೂ. ಗಡಿ ದಾಟಲು ಕಾರಣವಾಯಿತು. ಹಾಗಿದ್ರೆ, ಇದರಿಂದ ವಿಮಾನ ಪ್ರಯಾಣ ದರ ದುಬಾರಿಯಾಗಲಿದೆಯೇ?
ವಿಮಾನಯಾನ ಇನ್ನಷ್ಟು ದುಬಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ವಿಮಾನಕ್ಕೆ ಒಂದು ರೀತಿಯ ವಿಶೇಷ ಇಂಧನ ತುಂಬುತ್ತಾರೆ. ಇದಕ್ಕೆ ಏವಿಯೇಶನ್ ಟರ್ಬೈನ್ ಇಂಧನ (ATF) ಎಂದು ಕರೆಯಲಾಗುತ್ತದೆ. ಈ ಇಂಧನದ ಬೆಲೆಯಲ್ಲಿ ಶೇ. 3 ರಷ್ಟು ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.