ಇನ್ನು ವಿಮಾನ ಯಾನ ಆಗುತ್ತೆ ದುಬಾರಿ..! ಕಾರಣ ತಿಳಿದುಕೊಳ್ಳಿ

ವಿಮಾನಯಾನ  ಇನ್ನಷ್ಟು ದುಬಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ.  ವಿಮಾನಕ್ಕೆ ಒಂದು ರೀತಿಯ ವಿಶೇಷ ಇಂಧನ ತುಂಬುತ್ತಾರೆ. ಇದಕ್ಕೆ  ಏವಿಯೇಶನ್ ಟರ್ಬೈನ್ ಇಂಧನ (ATF) ಎಂದು ಕರೆಯಲಾಗುತ್ತದೆ. ಈ ಇಂಧನದ ಬೆಲೆಯಲ್ಲಿ ಶೇ. 3 ರಷ್ಟು ಏರಿಕೆಯಾಗಿದೆ.

Written by - Ranjitha R K | Last Updated : Feb 1, 2021, 08:53 AM IST
  • ವಿಮಾನಯಾನ ಇನ್ನಷ್ಟು ದುಬಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ.
  • ವಿಮಾನಕ್ಕೆ ಒಂದು ರೀತಿಯ ವಿಶೇಷ ಇಂಧನ ತುಂಬುತ್ತಾರೆ.
  • ಈ ಇಂಧನದ ಬೆಲೆಯಲ್ಲಿ ಶೇ. 3 ರಷ್ಟು ಏರಿಕೆಯಾಗಿದೆ
ಇನ್ನು ವಿಮಾನ ಯಾನ ಆಗುತ್ತೆ ದುಬಾರಿ..! ಕಾರಣ ತಿಳಿದುಕೊಳ್ಳಿ title=
ವಿಮಾನಯಾನ ಇನ್ನಷ್ಟು ದುಬಾರಿ ಸಾಧ್ಯತೆ (file photo)

ನವದೆಹಲಿ : ವಿಮಾನಯಾನ (Flight) ಇನ್ನಷ್ಟು ದುಬಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ.  ವಿಮಾನಕ್ಕೆ ಒಂದು ರೀತಿಯ ವಿಶೇಷ ಇಂಧನ ತುಂಬುತ್ತಾರೆ. ಇದಕ್ಕೆ  ಏವಿಯೇಶನ್ ಟರ್ಬೈನ್ ಇಂಧನ (ATF) ಎಂದು ಕರೆಯಲಾಗುತ್ತದೆ. ಈ ಇಂಧನದ ಬೆಲೆಯಲ್ಲಿ ಶೇ. 3 ರಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude oil) ಬೆಲೆಯಲ್ಲಿ ಏರಿಕೆಯಾಗಿರುವುದೇ ಇದಕ್ಕೆ ಕಾರಣ. ಕಳೆದ ಎರಡು ತಿಂಗಳಿನಲ್ಲಿ ಐದು ಸಲ ATF ಇಂಧನದ ಬೆಲೆಯಲ್ಲಿ ಏರಿಕೆಯಾಗಿದೆ.  ಇಂಧನ ದುಬಾರಿಯಾಗಿರುವ ಕಾರಣ ವಿಮಾನ ಸಂಚಾರ ಕಂಪನಿಗಳು (Aviation Companies) ಟಿಕೆಟ್ ದರ (Ticket rate) ಕೂಡಾ ಏರಿಸುವ  ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ವಿಮಾನ ಪ್ರಯಾಣದರ  ಏರಿಕೆಯಾಗಬಹುದು. 

ವಿಮಾನ ಇಂಧನ ದರ ಎಷ್ಟಿದೆ ಈಗ..? 
ಸರ್ಕಾರಿ ವಲಯದ ಪೆಟ್ರೋಲಿಯಂ ಕಂಪನಿಗಳ ಪ್ರೈಸ್ ನೊಟಿಫಿಕೇಶನ್ (Price Notification) ಆಧಾರದ ಮೇಲೆ ಹೇಳುವುದಾದರೆ, ದೆಹಲಿಯಲ್ಲಿ ATF ದರ ಪ್ರತಿಕಿಲೋ ಲೀಟರ್ ಮೇಲೆ 1304.25 ರೂಪಾಯಿ ಏರಿಕೆಯಾಗಿದೆ. ಪ್ರತಿ ಕಿಲೋ ಲೀಟರ್ ಧಾರಣೆ 53795.41 ರೂಪಾಯಿಗೆ ಮುಟ್ಟಿದೆ.  ಜನವರಿ 16ರಂದು ATF ಧಾರಣೆಯಲ್ಲಿ 1512.38 ರೂಪಾಯಿ ಹೆಚ್ಚಾಗಿತ್ತು.

ಇದನ್ನೂ ಓದಿ : Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್

ಎರಡು ತಿಂಗಳಿನಲ್ಲಿ ಐದು ಸಲ ಏರಿಕೆ:
ಡಿಸೆಂಬರ್ 1 ರಿಂದ ಇಲ್ಲಿಯ ತನಕ ವಿಮಾನಯಾನ ಇಂಧನ ದರದಲ್ಲಿ 5 ಸಲ ಏರಿಕೆಯಾಗಿದೆ (Price-hike). ಡಿ. 1 ರಂದು ಶೇ. 7.6 ರಷ್ಟು ಅಂದರೆ, 3288.38 ರೂಪಾಯಿ ಏರಿಕಯಾಗಿತ್ತು. 16 ಡಿಸೆಂಬರ್ ನಂದು ಪ್ರತಿ ಕಿಲೋ ಲೀಟರ್ ಗೆ ಶೇ. 6.3 ಅಂದರೆ 2941.5 ರೂಪಾಯಿ ಏರಿಕೆಯಾಗಿತ್ತು.  ಜ.1 ರಂದು ಶೇ. 3.69 ಅಂದರೆ 1817.62 ರೂಪಾಯಿ ಹೆಚ್ಚಿಗೆ ಮಾಡಲಾಗಿತ್ತು.

ಇಂಧನ ದುಬಾರಿಯಾಗಿರುವ ಕಾರಣ ವಿಮಾನ ಸಂಚಾರ ಕಂಪನಿಗಳು (Aviation ) ಟಿಕೆಟ್ ದರ (Ticket rate) ಕೂಡಾ ಏರಿಸುವ  ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಇನ್ನು ವಿಮಾನ ಯಾನ  ಇನ್ನಷ್ಟು ದುಬಾರಿಯಾಗಬಹುದು.

ಇದನ್ನೂ ಓದಿ : Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News