Birmingham Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ ರಣಕಹಳೆ ಮೊಳಗಿದೆ. ಈ ಕ್ರೀಡಾಕೂಟದ ಮೊದಲ ದಿನವಾದ ಇಂದು, ಭಾರತೀಯ ಮಹಿಳಾ ಹಾಕಿ ತಂಡ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿಯೇ ಭಾರತೀಯ ಮಹಿಳಾ ತಂಡ ಘಾನಾ ಮಹಿಳಾ ಹಾಕಿ ತಂಡವನ್ನು 5-0 ಅಂತರದಿಂದ ಸೋಲಿಸಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ಶುಕ್ರವಾರ ನಡೆದ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಬಾಕ್ಸರ್ ಶಿವ ಥಾಪಾ ಅವರು 63.5 ಕೆಜಿ ಲೈಟ್ ವೆಲ್ಟರ್ವೇಟ್ ಸುತ್ತಿನ 32 ರಲ್ಲಿ ಪಾಕಿಸ್ತಾನದ ಸುಲೇಮಾನ್ ಬಲೋಚ್ ಅವರನ್ನು 5-0 ಅಂತರದಿಂದ ಸೋಲಿಸಿದರು.
ಇನ್ನು ಮಹಿಳಾ ಕ್ರಿಕೆಟ್ ಪಂದ್ಯ ಕಾಮನ್ವೆಲ್ತ್ನಲ್ಲಿ ನಡೆಯಲಿದ್ದು, ಇಂದು ಆಸ್ಟ್ರೇಲಿಯಾವನ್ನು ಭಾರತ ಎದುರಿಸಲಿದೆ. ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾಗೆ ಸವಾಲೊಡ್ಡಲಿದೆ. ಇನ್ನೊಂದೆಡೆ ಮಹಿಳಾ ಹಾಕಿ ತಂಡವು ಮಿನ್ನೋಸ್ ಘಾನಾ ವಿರುದ್ಧ ಕಣಕ್ಕಿಳಿಯಲಿದೆ.
ಜುಲೈ 28 ರಿಂದ ಪ್ರಾರಂಭವಾಗುವ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಕುಸ್ತಿ ತಂಡವು 8-9 ಚಿನ್ನದ ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಶುಕ್ರವಾರದಂದು ಹೇಳಿದ್ದಾರೆ. ರವಿ ದಹಿಯಾ (57 ಕೆಜಿ), ಬಜರಂಗ್ ಪುನಿಯಾ (65 ಕೆಜಿ), ನವೀನ್ (74 ಕೆಜಿ), ನವೀನ್ (74 ಕೆಜಿ) ), ದೀಪಕ್ ಪುನಿಯಾ (86 ಕೆಜಿ), ದೀಪಕ್ (97 ಕೆಜಿ) ಮತ್ತು ಮೋಹಿತ್ ದಹಿಯಾ (125 ಕೆಜಿ) ಅವರು ಈ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪ್ರತಿಯೊಂದು ಪಂದ್ಯವೂ ಶ್ರೇಷ್ಠ ಪಂದ್ಯಕ್ಕಿಂತ ಕಡಿಮೆಯಿಲ್ಲ. ಆದ್ರೆ, ಈಗ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 31 ರಂದು, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕೂಡ ಪಾಕಿಸ್ತಾನ ತಂಡವನ್ನು ಪ್ರಕಟಿಸಿದೆ.
2022 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರ ರಾಷ್ಟ್ರೀಯ ಹಾಕಿ ತಂಡಗಳು ಭಾಗವಹಿಸುವುದಿಲ್ಲ ಎಂದು ಹಾಕಿ ಇಂಡಿಯಾ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆ ಮಂಗಳವಾರ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.